ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್​

1 Min Read

ಚಾಮರಾಜನಗರ: ಮನೆಗೆ ಪದೇಪದೆ ಹಾವುಗಳು ಬರುತ್ತಿವೆ ಎಂದು ಕೇರಳದ ಮಾಂತ್ರಿಕನ ಮೊರೆ ಹೋದ ದಂಪತಿ, ಅಕ್ಕಪಕ್ಕದವರಿಗೂ ತಿಳಿಯದಂತೆ ಮನೆಯೊಳಗೆ ಬರೋಬ್ಬರಿ 20 ಅಡಿ ಆಳದ ಬಾವಿ ತೋಡಿದ್ದಾರೆ. ಈ ವಿಷಯ ತಿಳಿದು ಪೊಲೀಸರು ಮನೆಗೆ ಎಂಟ್ರಿಕೊಡುತ್ತಿದ್ದಂತೆ ದಂಪತಿಗೆ ಕಾದಿತ್ತು ಶಾಕ್​!

ಚಾಮರಾಜನಗರ ತಾಲೂಕಿನ ಅಮ್ಮನಪುರದಲ್ಲಿ ಸೋಮಣ್ಣ ಎಂಬುವರ ಮನೆಯಲ್ಲಿ ಪದೇಪದೆ ಹಾವುಗಳು ಕಾಣಿಸಿಕೊಳ್ಳುತ್ತಿದ್ದವು. ಇದಕ್ಕೆ ಕಾರಣ ಏನಿರಬಹುದೆಂದು ಕೇರಳದ ಮಾಂತ್ರಿಕನೊಬ್ಬನ ಬಳಿ ದಂಪತಿ ಕೇಳಿದ್ರು. ಮನೆಯೊಳಗೆ ನಿಧಿ ಇದೆ. ಆ ನಿಧಿಯನ್ನು ಸರ್ಪಗಳು ಕಾಯುತ್ತಿವೆ ಎಂದಿದ್ದ ಮಂತ್ರವಾದಿ ಹಲವು ಬಾರಿ ಸೋಮಣ್ಣನ ಮನೆಯಲ್ಲಿ ಪೂಜೆ ಮಾಡಿದ್ದ.

ವಾರಗಳ ಕಾಲ ಪೂಜೆ ಮಾಡಿದ ಮಂತ್ರವಾದಿ, ಹುಣ್ಣಿಮೆ ಸಮೀಪಿಸುತ್ತಿದೆ, ಆ ದಿನದ ವರೆಗೂ ಮನೆಯಲ್ಲಿ ಗುಂಡಿ ತೆಗೆಯಿರಿ. ಇದು ಯಾರಿಗೂ ಗೊತ್ತಾಗಬಾರದು ಎಂದು ಸೂಚನೆ ನೀಡಿದ್ದ. ನಿಧಿ ಇದೆ ಎಂದು ಸೋಮಣ್ಣ ಮತ್ತು ಈತನ ಪತ್ನಿ ಇಬ್ಬರೂ ಮನೆಯೊಳಗೆ 20 ಅಡಿ ಆಳದವರೆಗೂ ಬಾವಿಯಂತೆ ಗುಂಡಿ ತೋಡಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ರಾಮಸಮುದ್ರ ಪೊಲೀಸರು ಆ ಮನೆಗೆ ಎಂಟ್ರಿಕೊಟ್ಟರು. ಆಗ ಗೊತ್ತಾಯ್ತು ತಾವು ಮೋಸ ಹೋಗಿರುವುದು. ಮಂತ್ರವಾದಿ ಮಾತು ನಂಬಿ ಪೂಜೆ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಲ್ಲದೆ, ವಾಸವಿದ್ದ ಮನೆಯನ್ನೂ ಹಾಳು ಮಾಡಿಕೊಂಡು ಪರಿತಪಿಸುತ್ತಿದ್ದಾರೆ. ಮಂತ್ರವಾದಿಯ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ನನ್ನ ತಂದೆ​ಗೆ ಹಲವು ಕಾಲ್​ಗರ್ಲ್​​ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್​ ಮಾಡ್ತಿದ್ದ…

ಕೈಯಲ್ಲಿ ಮಚ್ಚು ಹಿಡಿದು, ಗ್ರಾಪಂ ಸದಸ್ಯೆಯನ್ನ ಹೊತ್ತೊಯ್ದ ಚಿಕ್ಕಪ್ಪ! ಕತ್ತಲಲ್ಲಿ ನಡೆಯಿತು ಘೋರ ದುರಂತ

ನನ್ನ ತಂದೆ​ಗೆ ಹಲವು ಕಾಲ್​ಗರ್ಲ್​​ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್​ ಮಾಡ್ತಿದ್ದ…

Share This Article