More

    ವಯಸ್ಕರಿಗೆ ಸರಳ ಓದು, ಬರಹ ತರಗತಿ

    ಜಯಪುರ: ಸಹಿ ಹಾಕಲು ಬರುವವರೆಲ್ಲರೂ ಸಾಕ್ಷರರಲ್ಲ. ಮಾತೃಭಾಷೆಯಲ್ಲಿ ಸರಳ ಓದು, ಬರಹ ಬರುವವರನ್ನು ಸಾಕ್ಷರರು ಎನ್ನಬಹುದು. ಎಲ್ಲ ಭಾರತೀಯರನ್ನು ಸಾಕ್ಷರರನ್ನಾಗಿಸಬೇಕು ಎಂಬುದು ಕೇಂದ್ರ ಪುರಸ್ಕೃತ ನವಭಾರತ ಸಾಕ್ಷರತಾ ಕಾರ್ಯಕ್ರಮದ ಉದ್ದೇಶ ಎಂದು ಚೌಡಿಕಟ್ಟೆ ಶಾಲೆ ಮುಖ್ಯ ಶಿಕ್ಷಕಿ ಶಾಮಲಾ ಹೇಳಿದರು.

    ಜಯಪುರ ಸಮೀಪದ ಚೌಡಿಕಟ್ಟೆ ಸರ್ಕಾರಿ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮ ಹಾಗೂ ಕೇಂದ್ರ ಪುರಸ್ಕೃತ ನವಭಾರತ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಈ ಯೋಜನೆಯಲ್ಲಿ ಪ್ರತಿದಿನ ಸಂಜೆ 4.30ರಿಂದ 5.30ರವರೆಗೆ 15 ವರ್ಷ ಮೇಲ್ಪಟ್ಟ ವಯಸ್ಕರಿಗೆ ತರಗತಿ ನೀಡಲಾಗುವುದು. ಸರಳ ಓದು, ಬರಹ ಹಾಗೂ ಗಣಿತವನ್ನು ಬೋಧಕರ ಮೂಲಕ ಕಲಿಸಲಾಗುವುದು ಎಂದರು.
    ಸ್ಪಂದನ ಸಂಸ್ಥೆ ಅಧ್ಯಕ್ಷ ಕಿಬ್ಳಿ ಪ್ರಸನ್ನಕುಮಾರ್ ಮಾತನಾಡಿ, ತನ್ನ ದೇಶದ ಜನರಿಗೆ ಉಡಲು ಮೈತುಂಬ ಬಟ್ಟೆ ಇಲ್ಲದಿರುವಾಗ ನಾನು ಮೈತುಂಬ ಆಕರ್ಷಕ ಬಟ್ಟೆ ತೊಡುವುದು ಸರಿಯಲ್ಲ ಎಂದು ಸರಳವಾಗಿ ಬದುಕಿದವರು ಗಾಂಧಿ. ಬರಿ ಮೈಯಲ್ಲಿ ದೇಶ ಸುತ್ತಿ, ಅಹಿಂಸಾತ್ಮಕ ಹೋರಾಟ ಮಾಡಿ ಭಾರತೀಯರಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿದ ಮಹಾನ್ ನಾಯಕ ಎಂದು ಬಣ್ಣಿಸಿದರು.
    ಶೈಕ್ಷಣಿಕ ಸೇವೆಗಾಗಿ ಚೌಡಿಕಟ್ಟೆ ಎಸ್‌ಡಿಎಂಸಿ ನಿರ್ಗಮಿತ ಅಧ್ಯಕ್ಷ ಪ್ರಭಾಕರ, ಸಾಮಾಜಿಕ ಸೇವೆಗಾಗಿ ಕಿಬ್ಳಿ ಪ್ರಸನ್ನಕುಮಾರ್, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಶ್ರವಣ್, ಸುಪ್ರಿತಾ, ಸುಮಂತ್ ಅವರನ್ನು ಸನ್ಮಾನಿಸಲಾಯಿತು.
    ಸಸ್ಯ ಶ್ಯಾಮಲ ಯೋಜನೆಯಡಿ ಶಾಲಾ ಆವರಣದಲ್ಲಿ ಹಣ್ಣು ಹಾಗೂ ಹೂವಿನ ಗಿಡಗಳನ್ನು ನೆಡಲಾಯಿತು. ಸಹ ಶಿಕ್ಷಕಿ ಭಾಗ್ಯಾ, ಎಸ್‌ಡಿಎಂಸಿ ಅಧ್ಯಕ್ಷ ಶಂಕರ, ಉಪಾಧ್ಯಕ್ಷೆ ಅಶ್ವಿನಿ, ಮಾಜಿ ಅಧ್ಯಕ್ಷರಾದ ಪ್ರಭಾಕರ, ನೋಣಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts