More

    ಶಿರಾಳಕೊಪ್ಪ ದರ್ಗಾದ ಗೋರಿ ಮೇಲಿನ ಬಟ್ಟೆಯಲ್ಲಿ ಉಸಿರಾಟದ ಅನುಭವ, ರಾತ್ರೋರಾತ್ರಿ ಸ್ಥಳಕ್ಕೆ ದೌಡಾಯಿಸಿದ ಜನ

    ಶಿರಾಳಕೊಪ್ಪ: ಪಟ್ಟಣದ ದರ್ಗಾದ ಗೋರಿ ಮೇಲೆ ಹೊದಿಸಿರುವ ಬಟ್ಟೆಯಲ್ಲಿ (ಚಾದರ) ಉಸಿರಾಟದ ಅನುಭವ ಆಗುತ್ತಿದೆ ಎಂಬ ವಿಸ್ಮಯದ ಸಂಗತಿ ಕ್ಷಣಾಧರ್ದಲ್ಲಿ ಹರಡಿ ದರ್ಗಾಕ್ಕೆ ನೂರಾರು ಜನರು ಆಗಮಿಸಿ ಅಲ್ಲಿಯ ಅನುಭವ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಪಟ್ಟಣದ ಮಧ್ಯಭಾಗದಲ್ಲಿರುವ ಸಂತೆ ಮಾರುಕಟ್ಟೆಗೆ ಅಂಟಿಕೊಂಡಿರುವ ನೂರಾರು ವರ್ಷದ ಇತಿಹಾಸ ಹೊಂದಿರುವ ಹಜರತ್ ಸೈಯದ್ ಶಾಹಿದ್ ಅಲಿ ಶಾ ಖಾದ್ರಿ ದರ್ಗಾದಲ್ಲಿ ಶುಕ್ರವಾರ ರಾತ್ರಿ ಇಂತಹ ವಿಸ್ಮಯ ಕಂಡು ಬಂದಿದೆ.

    ಕರೊನಾ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ನಮಾಜ್ ಮಾಡಲು ಅವಕಾಶವಿಲ್ಲದ ಕಾರಣ ಬಾಲಕನೊಬ್ಬ ದರ್ಗಾದ ದರ್ಶನ ಪಡೆದು ನಮಸ್ಕರಿಸಲು ಬಂದಾಗ ಅವನಿಗೆ ಉಸಿರಾಟದ ಶಬ್ಧ ಹಾಗೂ ಮೇಲೆ ಹೊದಿಸಿದ ಬಟ್ಟೆ ಅಲುಗಾಡುತ್ತಿರುವುದು ಕಂಡಿತು.

    ತಕ್ಷಣ ಹತ್ತಿರದಲ್ಲಿ ನಿಂತಿದ್ದ ಸಮಾಜದ ಪ್ರಮುಖ ಬಿಲಾಲ್ ಮತ್ತು ಅವನ ಸ್ನೇಹಿತರೂ ಈ ವಿಸ್ಮಯವನ್ನು ನೋಡಿ ಖಾತ್ರಿ ಪಡಿಸಿಕೊಂಡಿದ್ದಾರೆ. ಈ ಸಂಗತಿ ಶುಕ್ರವಾರ ರಾತ್ರಿ ಕಾಡ್ಗಿಚ್ಚಿನಂತೆ ಹರಡಿ ಜನರು ಸೇರಲು ಪ್ರಾರಂಭವಾದಾಗ ತಕ್ಷಣ ಸ್ಥಳಕ್ಕೆ ಆಗಮಿಸಿ ಜನರು ಸೇರದಂತೆ ಬಂದೋಬಸ್ತ್ ಮಾಡಿ ದರ್ಗಾ ಬಂದ್ ಮಾಡಿಸಲಾಯಿತು ಎಂದು ಪಿಎಸ್‌ಐ ರಮೇಶ್ ಹೇಳಿದರು.

    ಸ್ವತಃ ಪಿಎಸ್‌ಐ ರಮೇಶ್ ಈ ದೃಶ್ಯ ವೀಕ್ಷಿಸಿ ಇದೊಂದು ವಿಸ್ಮಯವೇ ಸರಿ ಎಂದು ತಮ್ಮ ಅನುಭವ ಹಂಚಿಕೊಂಡು ಕರೊನಾ ತೀವ್ರವಾಗಿ ಹಬ್ಬುತ್ತಿರುವುದರಿಂದ ಗುಂಪು ಸೇರಲು ಬಿಡದೆ ಬಿಗಿ ಕ್ರಮಕೈಗೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

    18 ಮಂದಿಗೆ ಕರೊನಾ ಅಂಟಿಸಿದ ಒಂದೇ ಒಂದು ಸಿಗರೇಟ್​!

    ತಡರಾತ್ರಿ ಹೊತ್ತಿ ಉರಿದ ಕೋವಿಡ್​ ಆಸ್ಪತ್ರೆ, 16 ಮಂದಿ ಸಜೀವ ದಹನ

    ಬೆಳಗ್ಗೆ ಮಗ, ಸಂಜೆ ತಂದೆ, ಮರುದಿನ ಮಗಳು, ನಂತರ ಮತ್ತೊಬ್ಬ ಮಗಳ ಸಾವು… ಇನ್ನಿಬ್ಬರ ಸ್ಥಿತಿ ಚಿಂತಾಜನಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts