More

    ಶೀರೂರು ಮಠದ ಉತ್ತರಾಧಿಕಾರಿ ವೇದವರ್ಧನ ತೀರ್ಥರಿಗೆ ಪಟ್ಟಾಭಿಷೇಕ

    ಉಡುಪಿ: ಮಧ್ವಾಚಾರ್ಯರ ಶಿಷ್ಯ ವಾಮನ ತೀರ್ಥರ ಪರಂಪರೆಯ ಶೀರೂರು ಮಠದ 32ನೇ ಪೀಠಾಧಿಪತಿಯಾಗಿ ಶ್ರೀ ವೇದವರ್ಧನ ತೀರ್ಥರಿಗೆ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಇಂದು(ಶುಕ್ರವಾರ) ಮಧ್ಯಾಹ್ನ 12.30ರ ಸುಮೂರ್ತದಲ್ಲಿ ಪಟ್ಟಾಭಿಷೇಕ ನೆರವೇರಿಸಿದರು.

    ಈ ಸಂರ್ಭದಲ್ಲಿ ಅಶೀರ್ವಚನ ನೀಡಿದ ಸೋದೆ ಶ್ರೀಗಳು, ಸನ್ಯಾಸಿಗಳಿಗೆ ಪ್ರಧಾನ ಅನುಷ್ಠಾನ ಪ್ರಣವ ಮಂತ್ರ. ಇದು ವೇದದ ಸಾರಭಾಗ. ಭಾರತೀಯ ತತ್ವ ಶಾಸ್ತ್ರಗಳಿಗೆ ವೇದವೇ ಅಡಿಪಾಯವಾಗಿದ್ದು, ನೂತನ ಯತಿಗಳು ಈ ಸನಾತನ ಪರಂಪರೆಯನ್ನು ಬೆಳಗಲಿ ಎಂಬ ಉದ್ದೇಶದಿಂದ ವೇದವರ್ಧನ ತೀರ್ಥ ಎಂದು ನಾಮಕರಣ ಮಾಡಿದ್ದೇವೆ. ಇದರೊಂದಿಗೆ ಮಠದ ಪರಂಪರೆ ಹಾಗೂ ಶ್ರೀಗಳ ಕೀರ್ತಿಯೂ ವರ್ಧಿಸಲಿ ಎಂದು ಹಾರೈಸಿದರು.

    ಜವಾಬ್ದಾರಿ ಪ್ರಾಮಾಣಿಕ ನಿರ್ವಹಣೆ: ಲಕ್ಷ್ಮೀವರ ತೀರ್ಥರು ವೃಂದಾವನವಾದ ಬಳಿಕ ಎರಡೂ ಮುಕ್ಕಾಲು ವರ್ಷ ದ್ವಂದ್ವ ಮಠವಾಗಿ ಶಿರೂರು ಮಠವನ್ನು ಪ್ರಾಮಾಣಿಕವಾಗಿ ಮುನ್ನಡೆಸಿದ್ದೇವೆ. ನಮ್ಮ ಕಾರ್ಯಗಳೆಲ್ಲವೂ ದೇವರು ಹಾಗೂ ಮುಖ್ಯಪ್ರಾಣದೇವರ ಚಿತ್ತದಲ್ಲಿದೆ ಎಂದು ಸೋದೆ ಶ್ರೀಗಳು ಹೇಳಿದರು.

    ಪ್ರಥಮ ಅನುಗ್ರಹ ಸಂದೇಶ ನೀಡಿದ ಶ್ರೀ ವೇದ ವರ್ಧನ ತೀರ್ಥ ಸ್ವಾಮೀಜಿ, ಮಧ್ವಾಚಾರ್ಯರ ನುಡಿಯಂತೆ ನಮ್ಮ ಕರ್ಮವನ್ನು ನಾವು ಮಾಡಬೇಕು. ಅದರ ಫಲವನ್ನು ಅನುಭವಿಸಬೇಕು. ಜಗದ್ರಕ್ಷಕನಾದ ದೇವರಲ್ಲಿ ಭಕ್ತಿ ಮಾಡಬೇಕು. ಈ ಚಿಂತನೆ ನಿತ್ಯದಲ್ಲಿಯೂ ಇರಬೇಕು. ಇದರಿಂದ ಎಲ್ಲರಿಗೂ ಸುಖ-ಶಾಂತಿ ದೊರೆಯಲಿದೆ ಎಂದರು.

    ಪಟ್ಟಾಭಿಷೇಕ ಅಂಗವಾಗಿ ಬೆಳಗ್ಗೆ ವೇದವ್ಯಾಸ ಮಂತ್ರ ಹೋಮ ಮತ್ತು ಪುರುಷ ಸೂಕ್ತ ಹೋಮ ನೆರವೇರಿತು. ಶಿರೂರು ಶ್ರೀಗಳ ಪೂರ್ವಾಶ್ರಮದ ತಂದೆ ಉದಯಕುಮಾರ್‌ ಸರಳತ್ತಾಯ, ತಾಯಿ ಶ್ರೀವಿದ್ಯಾ, ಸೋದೆ ಮಠ ಎಜುಕೇಶನ್‌ ಟ್ರಸ್ಟ್‌ ಕಾರ್ಯದರ್ಶಿ ರತ್ನಕುಮಾರ್‌, ವಿದ್ವಾನ್‌ ಅವಧಾನಿ ಸುಬ್ರಹ್ಮಣ್ಯ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

    ಕರೊನಾ ಪಾಸಿಟಿವ್​ ಬಂದರೂ ಮದ್ವೆ ಮನೆಗೆ ಬಂದ ವಕೀಲ! ಪ್ರಶ್ನಿಸಿದ್ದಕ್ಕೆ ಉಡಾಫೆ, ಮುಂದೆ ಆಗಿದ್ದೆಲ್ಲವೂ ಅವಾಂತರ

    ಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!

    ಬೆಳ್ಳಂಬೆಳಗ್ಗೆ ಕೋವಿಡ್​ ವಾರ್ಡ್​ನಲ್ಲಿ ಭಯಾನಕ ಘಟನೆ! ಕಕ್ಕಾಬಿಕ್ಕಿಯಾಗಿ ಓಡಿದ ಸೋಂಕಿತರು, ಬೆಚ್ಚಿಬೀಳಿಸುತ್ತೆ ಆ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts