More

    ಫೆ.10ರಿಂದ ಜಡೆ ವಿರಕ್ತ ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕ

    ಸೊರಬ: ಮಠಗಳು ಧಾರ್ಮಿಕ ಶ್ರದ್ಧಾಕೇಂದ್ರಗಳಾಗಿದ್ದು, ತ್ರಿವಿಧ ದಾಸೋಹದ ಮೂಲಕ ನಾಡಿನಲ್ಲಿ ಉತ್ತಮ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿವೆೆ. ಈ ನಿಟ್ಟಿನಲ್ಲಿ ಜಡೆಯ ಶ್ರೀ ಕುಮಾರ ಕೆಂಪಿನ ಸಿದ್ಧ ವೃಷಭೇಂದ್ರ ಸ್ಥಾಪಿಸಿದ ಜಡೆ ವಿರಕ್ತ ಮಠ ಅಗ್ರಗಣ್ಯವಾಗಿದೆ ಎಂದು ಇಳಕಲ್ಲಿನ ಶ್ರೀ ಅನ್ನದಾನಯ್ಯ ಶಾಸ್ತ್ರಿಗಳು ಹೇಳಿದರು.

    ಮಂಗಳವಾರ ತಾಲೂಕಿನ ಜಡೆ ಹೋಬಳಿಯ ಹೊಸಕೊಪ್ಪ ಗ್ರಾಮದಲ್ಲಿ ಫೆ.10ರಿಂದ 24ರವರೆಗೆ ಮಠದ ಉತ್ತರಾಧಿಕಾರಿ ರುದ್ರದೇವರ ಪಟ್ಟಾಭಿಷೇಕ ಹಾಗೂ ಮಹಾಂತ ಸ್ವಾಮೀಜಿ ಅವರ ಪಟ್ಟಾಧಿಕಾರದ ರಜತ ಮಹೋತ್ಸವ ಹಾಗೂ ಮಠದ ಪೂಜಾ ಕಾರ್ಯಕ್ರಮ ಮತ್ತು ಕೆಂಪಿನ ಸಿದ್ಧ ವೃಷಭೇಂದ್ರ ಶಿವಯೋಗಿಗಳ ರಥೋತ್ಸವದ ಅಂಗವಾಗಿ ಮಠದ ಸೇವಾ ಗ್ರಾಮಗಳಿಗೆ ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
    ಬಸವಾದಿ ಶರಣರ ಕಾಯಕ, ದಾಸೋಹ ಸೇವೆ, ಸಂಘಟನೆ, ಸಮಾನತೆ ತತ್ವಗಳೊಂದಿಗೆ ಮಲೆನಾಡಿನ ಪ್ರಾಂತ್ಯದಲ್ಲಿ ಕೆಳದಿ ಅರಸರಿಂದ ರಾಜ ಮನ್ನಣೆ ಹಾಗೂ ದಾನ ದತ್ತಿ ಪಡೆದು ಅರಸರಿಗೆ ಆಶೀರ್ವಾದ ಮಾಡಿದ ಮಹಾ ಮಠ ಜಡೆ ಸಂಸ್ಥಾನ. ಹುಬ್ಬಳಿಯ ಬಸವ ಶೆಟ್ರು ಗುರುವಾಗಿ ಸ್ವೀಕರಿಸಿದ ಮಠಕ್ಕೆ ಶ್ರೇಷ್ಠ ಶಿಷ್ಯ ಪರಂಪರೆ ಇದೆ. ಪ್ರಸ್ತುತ 12ನೇ ಅಧಿಪತಿಗಳಾದ ಡಾ.ಶ್ರೀ ಮಹಾಂತ ಮಹಾ ಸ್ವಾಮೀಜಿ ಘನ ಪರಂಪರೆಗೆ ಬೆಳಕು ಚೆಲ್ಲಿದ್ದಾರೆ. ಈ ನಿಟ್ಟಿನಲ್ಲಿ ಶಿಷ್ಯ ಪರಂಪರೆಯ ಉತ್ತರಾಧಿಕಾರಿಯಾಗಿ ರುದ್ರದೇವರು ಪಟ್ಟಾಭಿಷೇಕ ನಡೆಯಲಿದೆ ಎಂದರು.
    ಜಡೆ ಸಂಸ್ಥಾನ ಮಠದ ನೇತೃತ್ವದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮದ ಕುರಿತು 115ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ಜನ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಭಕ್ತರ ಸಹಕಾರ ಇದಕ್ಕೆ ಅಗತ್ಯ ಎಂದು ತಿಳಿಸಿದರು.
    ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನ್ನಿಧ್ಯ ವಹಿಸಿದ್ದರು. ಗ್ರಾಮದ ನಿಂಗಪ್ಪಗೌಡ ಪಾಟೀಲ್, ಗದಿಗೆಪ್ಪ ಗೌಡ, ರಾಜಶೇಖರಪ್ಪ ಗೌಡ ನಡಗದ್ದೆ, ಸದಾಶಿಗೌಡ್ರು, ಶಿವಾಜಿಗೌಡ್ರು, ಗಿರೀಶ್, ಹರೀಶ್, ಶಿಲ್ಪಾ, ಸರಿತಾ, ಪಲ್ಲವಿ, ಸುನಿತಾ, ಸುಜಾತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts