More

    ಕುಂದಾಪುರದಲ್ಲಿ ತಣ್ಣಗಾಗದ ವಿವಾದ: ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ

    ಕುಂದಾಪುರ: ಹಿಜಾಬ್ ವಿವಾದ ಸೋಮವಾರವೂ ಮುಂದುವರಿದಿದ್ದು, ಕುಂದಾಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಯಿತು.

    ರಾಜ್ಯ ಸರ್ಕಾರ ಕಾಲೇಜು ಆವರಣದೊಳಕ್ಕೆ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳ ಹೊರತಾಗಿ ಇತರರಿಗೆ ಪ್ರವೇಶವಿಲ್ಲ ಎಂಬ ಆದೇಶ ಹೊರಡಿಸಿದೆ. ಈ ಬಗ್ಗೆ ಪ್ರಾಂಶುಪಾಲರು ಮನವೊಲಿಸುವ ಪ್ರಯತ್ನ ಮಾಡಿದರಾದರೂ ಹಿಜಾಬ್​ ಧರಿಸಿದ್ದ ವಿದ್ಯಾರ್ಥಿನಿಯರು ಒಪ್ಪದ ಕಾರಣ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಯಿತು.

    ಕುಂದಾಪುರ ಕಾಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರಿಂದ, ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿದರು. ಕಾಲೇಜು ಆವರಣದೊಳಕ್ಕೆ ಇಬ್ಬರಿಗೂ ಪ್ರವೇಶ ನಿರಾಕರಿಸಿದ್ದರಿಂದ ಹಿಜಾಬ್​ ಧರಿಸಿದ್ದ ಮೂವರು ವಿದ್ಯಾರ್ಥಿನಿಯರು ಮನೆಗೆ ಹಿಂತಿರುಗಿದರು. ಇತರ ವಿದ್ಯಾರ್ಥಿಗಳು ಕೇಸರಿ ಶಾಲು ತೆಗೆದಿಟ್ಟು ತರಗತಿ ಪ್ರವೇಶಿಸಿದರು.

    ಕುಂದಾಪುರದ ವೆಂಕಟರಮಣ ಪಿಯು ಕಾಲೇಜಿನ ಕೆಲವು ವಿದ್ಯಾರ್ಥಿಗಳು, ಹಿಜಾಬ್ ಧರಿಸುವುದಕ್ಕೆ ಪ್ರತಿರೋಧಿಸಿ ಕೇಸರಿ ಶಾಲು ಧರಿಸಿ ಬಂದ ಘಟನೆಯೂ ನಡೆಯಿತು. ಕಾಲೇಜು ಆವರಣದೊಳಕ್ಕೆ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿದವರಿಗೆ ಪ್ರವೇಶ ನಿರಾಕರಿಸಲಾಯಿತು. ಕುಂದಾಪುರ ಡಿವೈಎಸ್​ಪಿ ಶ್ರೀಕಾಂತ್ ಮಾರ್ಗದರ್ಶನದಲ್ಲಿ ಕಾಲೇಜುಗಳ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಹಿಜಾಬ್ ಧರಿಸಿ ಸದನಕ್ಕೂ ಬರುವೆ, ಧೈರ್ಯವಿದ್ರೆ ನನ್ನನ್ನು ತಡೆಯಿರಿ: ಕಾಂಗ್ರೆಸ್​ ಶಾಸಕಿ ಸವಾಲು

    ಹಿಜಾಬ್​ ಬೇಕು ಅಂದ್ರೆ ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಹೋಗಿ: ಪ್ರಮೋದ್ ಮುತಾಲಿಕ್​ ಆಕ್ರೋಶ

    ತುಮಕೂರಲ್ಲಿ ಆರ್ಕೆಸ್ಟ್ರಾ ಕಲಾವಿದರನ್ನ ವೇಶ್ಯಾವಾಟಿಕೆ ದೂಡಲು ಯತ್ನ! ದಿನಕ್ಕೆ ಒಂದೂವರೆ ಸಾವಿರ ಕೊಡ್ತಾರೆ… ಆಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts