More

    ಬೆಂಗಳೂರಲ್ಲಿ ಜ.29ರ ವರೆಗೂ ಶಾಲಾ-ಕಾಲೇಜು ಓಪನ್​ ಆಗಲ್ಲ: ಸಭೆ ಬಳಿಕ ಶಿಕ್ಷಣ ಸಚಿವ ನಾಗೇಶ್​ ಹೇಳಿಕೆ

    ಬೆಂಗಳೂರು: ರಾಜ್ಯ ರಾಜ್ಯಧಾನಿ ಬೆಂಗಳೂರಲ್ಲಿ ಜ.29ರ ವರೆಗೂ ಶಾಲಾ-ಕಾಲೇಜು ಓಪನ್​ ಆಗಲ್ಲ. ಜ.29ರಂದು ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತೆ ಎಂದು ಶಿಕ್ಷಣ ಸಚಿವ ನಾಗೇಶ್​ ತಿಳಿಸಿದರು.

    ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕರೊನಾ ಮಾರ್ಗಸೂಚಿ ಕುರಿತು ಶುಕ್ರವಾರ ನಡೆದ ಮಹತ್ವದ ಸಭೆ ಬಳಿಕ ಮಾತನಾಡಿದ ಸಚಿವರು, ಬೆಂಗಳೂರು ಹೊರತುಪಡಿಸಿ ಇತರೆಡೆ ಶಾಲೆ-ಕಾಲೇಜುಗಳು ಆರಂಭ ಆಗಲಿವೆ. ಬೆಂಗಳೂರಿನಲ್ಲಿ ಶಾಲೆ-ಕಾಲೇಜು ಓಪನ್​ ಮಾಡುವ ಕುರಿತು ಜ.29ರ ‌ಬಳಿಕ ನಿರ್ಧಾರ ಮಾಡಲಾಗುತ್ತೆ ಎಂದು ವಿವರಿಸಿದರು.

    ಇನ್ಮುಂದೆ ಶಾಲೆಯನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಸೋಂಕು ಪ್ರಕರಣಗಳ ಆಧಾರದಲ್ಲಿ ತಾಲೂಕು ಅಧಿಕಾರಿಗಳ ಜತೆ ಚರ್ಚಿಸಿ ಆಯಾ‌ ಜಿಲ್ಲಾಧಿಕಾರಿಗಳು ರಜೆ ಘೋಷಣೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಾಗೇಶ್​ ಹೇಳಿದರು.

    ಇನ್ನು ನಾಳೆಯಿಂದಲೇ (ಜ.22) ವೀಕೆಂಡ್​ ಕರ್ಫ್ಯೂ ರದ್ದಾಗಿದ್ದು, ಎಂದಿನಂತೆ ನೈಟ್​ ಕರ್ಫ್ಯೂ ಮುಂದುವರಿಯಲಿದೆ. ಆಸ್ಪತ್ರೆಗೆ ಸೇರುವವರ ಪ್ರಮಾಣ ಶೇ.5ಕ್ಕಿಂತ ಹೆಚ್ಚಾದರೆ ಮತ್ತೆ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗುತ್ತೆ ಎಂದು ಅಶೋಕ್​ ಎಚ್ಚರಿಸಿದರು. ರಾತ್ರಿ ಕರ್ಫ್ಯೂ ಸೇರಿದಂತೆ ಉಳಿದ ನಿರ್ಬಂಧಗಳು ಮುಂದುವರಿಕೆ ಆಗಲಿವೆ. ಧರಣಿ, ಪ್ರತಿಭಟನೆ, ರ್ಯಾಲಿ ನಡೆಸುವಂತಿಲ್ಲ. ಇದು ಇಡೀ ಕರ್ನಾಟಕಕ್ಕೆ ಅನ್ವಯ ಎಂದರು.

    ರಾಜ್ಯಾದ್ಯಂತ ನಾಳೆಯಿಂದಲೇ ವೀಕೆಂಡ್​ ಕರ್ಫ್ಯೂ ರದ್ದು! ನೈಟ್​ ಕರ್ಫ್ಯೂ ಮುಂದುವರಿಕೆ

    ಪೂಜೆ ನೆಪದಲ್ಲಿ ಪುರೋಹಿತನನ್ನು ಮನೆಗೆ ಕರೆಸಿಕೊಂಡ ಈ ದಂಪತಿ ಅಸಹ್ಯ ಕೆಲಸ ಮಾಡಿಬಿಟ್ರು…

    ದೂರು ನೀಡಲು ಬಂದಾಕೆಯನ್ನೇ ಮಂಚಕ್ಕೆ ಕರೆದ ಪೊಲೀಸ್​ ಇನ್​ಸ್ಪೆಕ್ಟರ್​! ಸಂತ್ರಸ್ತೆ ಬಿಚ್ಚಿಟ್ಟ ನೋವು ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts