More

    ಕುಣಿಗಲ್​ನಲ್ಲಿ ಕಿರಿಯ ಇಂಜಿನಿಯರ್​ ಮಾಡಿಸಿದ್ದ ರಸ್ತೆಯೇ ಮಾಯ!

    ತುಮಕೂರು: ಕುಣಿಗಲ್​ ತಾಲೂಕು ಅಮೃತೂರು ಹೋಬಳಿ ಸಂಕೇನಪುರದಿಂದ ಹೊಳಲಗುಂದವರೆಗೆ ರಸ್ತೆ ಮಾಡಿರುವುದಾಗಿ ಹೇಳಿದ್ದರು. ಕಾಮಗಾರಿ ಸಂಬಂಧ ಬಿಲ್ ಕೂಡ ಮಾಡಿಕೊಂಡಿದ್ದರು. ಆದರೀಗ ಕಿರಿಯ ಇಂಜಿನಿಯರ್​ ಮಾಡಿಸಿದ್ದ ರಸ್ತೆಯೇ ಮಾಯವಾಗಿದೆ!

    ಪರಿಣಾಮ ಪಂಚಾಯತ್​ ರಾಜ್​ ಇಂಜಿನಿಯರಿಂಗ್​ ಕುಣಿಗಲ್​ ಉಪವಿಭಾಗದ ಜೆಇ ಟಿ.ಬಿ.ರವಿಕುಮಾರ್​ ತಲೆದಂಡವಾಗಿದೆ. ಕರ್ತವ್ಯಲೋಪ ಹಾಗೂ ನಿರ್ಲಕ್ಷತೆ ಹಿನ್ನೆಲೆಯಲ್ಲಿ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಅವರು ಇಲಾಖೆ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ರವಿಕುಮಾರ್​ರನ್ನು ಅಮಾನತುಗೊಳಿಸಿ ಶುಕ್ರವಾರ ಆದೇಶಿಸಿದ್ದಾರೆ.

    2019-20ನೇ ಸಾಲಿನ ನಬಾರ್ಡ್​ ಯೋಜನೆಯಡಿ ಅನುಮೋದನೆಗೊಂಡಿದ್ದ ಕಾಮಗಾರಿ 2020ರಂದು ಮಾ.6 ಪೂರ್ಣವಾಗಿದ್ದು, ಮೂರು ವರ್ಷದ ನಿರ್ವಹಣಾ ಅವಧಿ ಹೊಂದಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಗೆ ರಸ್ತೆಯೇ ಮಾಯವಾಗಿದ್ದು, ಇಂಜಿನಿಯರ್​ ಕರ್ತವ್ಯಲೋಪ ದೃಢವಾಗಿದೆ. ಪಂಚಾಯತ್​ ರಾಜ್​ ಇಂಜಿನಿಯರಿಂಗ್​ ಉಪವಿಭಾಗ ಕುಣಿಗಲ್​ ಎಇಇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ರಸ್ತೆಯು ಸಂಪೂರ್ಣ ಹಾಳಾಗಿರುವುದು ಕಂಡುಬಂದಿದೆ.

    ಸಾವರ್ಕರ್ ಹೆಸರಲ್ಲಿ ತುಮಕೂರು ವಿವಿಯಲ್ಲಿ ಅಧ್ಯಯನ ಪೀಠ!

    ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟ ಹೈಕೋರ್ಟ್

    ಅತ್ಯಾಚಾರ ಆರೋಪಿಯನ್ನೇ ಮದ್ವೆಯಾದ ಯುವತಿ! ಪೋಕ್ಸೋ ಪ್ರಕರಣ ರದ್ದುಪಡಿಸಿದ ಹೈಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts