More

    ಎ.ಆರ್​. ರೆಹಮಾನ್​ ತಾಯಿ ಕರೀಮಾ ಬೇಗಮ್​ ಇನ್ನಿಲ್ಲ …

    ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ ಅವರ ತಾಯಿ ಕರೀಮಾ ಬೇಗಮ್ ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ, ರೆಹಮಾನ್​ ಈ ವಿಷಯ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ರಾಯರ ಸನ್ನಿಧಿಯಲ್ಲಿ ಸೆಟ್ಟೇರಿತು ಜಗ್ಗೇಶ್​- ಗುರುಪ್ರಸಾದ್​ ಜೋಡಿಯ​ ‘ರಂಗನಾಯಕ’

    ತಮ್ಮ ತಾಯಿಯ ಮುದ್ದಿನ ಮಗನಾಗಿದ್ದ ರೆಹಮಾನ್​, ತಾಯಿಯ ಕುರಿತು ಸಂದರ್ಶನವೊಂದರಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದರು. ‘ನಿಜ ಹೇಳಬೇಕೆಂದರೆ, ನಾನು ಸಂಗೀತ ನಿರ್ದೇಶಕನಾಗುವುದಕ್ಕೆ ಕಾರಣ ಅವರೇ. ಸಂಗೀತದಲ್ಲಿ ನನಗೆ ಇದ್ದ ಆಸಕ್ತಿಯನ್ನು ಗುರುತಿಸಿದ್ದ ಅವರು, ನನ್ನನ್ನು ಕಾಲೇಜು ಬಿಡಿಸಿ ಸಂಗೀತಭ್ಯಾಸದಲ್ಲಿ ತೊಡಗಿಸಿದ್ದರು. ನನ್ನ ಮೇಲೆ ಅವರಿಗೆ ಬಹಳವಾದ ನಂಬಿಕೆ ಇತ್ತು. ಅದರಿಂದಲೇ ಇಂದು ನಾನು ಸಂಗೀತ ನಿರ್ದೇಶಕನಾಗಿದ್ದೇನೆ’ ಎಂದು ರೆಹಮಾನ್​ ಹೇಳಿಕೊಂಡಿದ್ದರು.

    ಸಿನಿಮಾಗಳಲ್ಲಿ ತೋರಿಸಲಾಗುವ ತಾಯಿ-ಮಗನ ಸಂಬಂಧದ ತರಹ ತಮ್ಮ ಸಂಬಂಧ ಇಲ್ಲ ಎಂದಿದ್ದ ರೆಹಮಾನ್​, ‘ಸಿನಿಮಾಗಳಲ್ಲಿ ತೋರಿಸುವಂತೆ ನಾವ್ಯಾವತ್ತೂ ತಬ್ಬಿಕೊಳ್ಳುವುದಿಲ್ಲ. ಆದರೂ ಇಬ್ಬರಿಗೂ ಪರಸ್ಪರ ಬಹಳ ಗೌರವವಿದೆ’ ಎಂದಿದ್ದರು.

    ಇದನ್ನೂ ಓದಿ: ನಿರ್ದೇಶಕ ಎಸ್​ ನಾರಾಯಣ್​ಗೆ ಪುತ್ರನಿಂದಲೇ ಆ್ಯಕ್ಷನ್​ ಕಟ್​; ಇದು ‘ನವಮಿ 9.9.1999′ ಚಿತ್ರದ ವಿಶೇಷ

    ಇನ್ನು, ರೆಹಮಾನ್​ ಅವರ ತಾಯಿಯ ನಿಧನದ ಕುರಿತಾಗಿ ಹಲವು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

    PHOTO GALLERY: ರಮೇಶ್​ ಅರವಿಂದ್​ ಮಗಳ ಮದುವೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts