More

    ನನ್ಗೆ ಸ್ವಂತ ಮನೆ ಇಲ್ಲ, ಮನೆಗೆಂದು ಹಣ ಎತ್ತಿಟ್ಟಿದ್ದೆ, ಪರವಾಗಿಲ್ಲ… ನನ್ಗೆ ಶಕ್ತಿಧಾಮ ಮಕ್ಕಳ ಜವಾಬ್ದಾರಿ ಕೊಡಿ…

    ಬೆಂಗಳೂರು: ‘ಪುನೀತ್ ರಾಜ್​ಕುಮಾರ್​ ​ನನ್ನ ಅಣ್ಣನಂತೆ. ಅವರ ಮುಖ ನನ್ನ ಎದುರು ಕಾಣಿಸ್ತಿದೆ. ನನ್ನ ಹುಟ್ಟುಹಬ್ಬದ ದಿನ ಪುನೀತ್​ ಸಾವಿನ ಸುದ್ದಿ ಬಂತು. ಅವರ ಸಾವಿನ ಸುದ್ದಿಯನ್ನ 2 ದಿನ ಆದರೂ ನನಗೆ ನಂಬಲು ಆಗಲೇ ಇದೆ. ಇದು ನಿಜಕ್ಕೂ ಅರಗಿಸಿಕೊಳ್ಳಲಾಗದ ನೋವಿನ ಸಂಗತಿ. ಪುನೀತ್(PuneethRajkumar)​ ಅವರ ಪಾರ್ಥೀವ ಶರೀರ ನೋಡುವ ಧೈರ್ಯ ನನಗೆ ಬರಲಿಲ್ಲ’ ಎಂದು ಭಾವುಕರಾಗುತ್ತಲೇ ‘ನಾನು ಕೊಟ್ಟ ಮಾತನ್ನು ನಿಮ್ಮ ತಮ್ಮನಾಗಿ ಉಳಿಸಿಕೊಳ್ಳುವೆ ಪುನೀತ್​ ಅಣ್ಣ’ ಎಂದು ತಮಿಳು ನಟ ವಿಶಾಲ್(Vishal)​ ಭಾವುಕರಾದರು.

    ಅರಮನೆ ಮೈದಾನದಲ್ಲಿ ನಡೆದ ‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶಾಲ್​, ಪುನೀತ್​ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು. ಅದರಿಂದಲೇ ಕನ್ನಡ ನಾಡಿನಲ್ಲಿ ಅವರು ದೇವರಾಗಿಯೇ ನಿಂತರು. ನಾನು ಕೊಟ್ಟ ಮಾತನ್ನು ನಿಮ್ಮ ತಮ್ಮನಾಗಿ ನಾನು ಉಳಿಸಿಕೊಳ್ಳುವೆ ಪುನೀತಣ್ಣ. ನಾನು ಪ್ರಚಾರಕ್ಕಾಗಿಯೋ, ಮತ್ತ್ಯಾರನ್ನೋ ಮೆಚ್ಚಿಸಲು ಈ ಮಾತನ್ನು ಹೇಳುತ್ತಿಲ್ಲ. ನನಗೆ ಸ್ವಂತ ಮನೆ ಇಲ್ಲ, ಸ್ವಂತ ಮನೆ ಮಾಡಿಕೊಳ್ಳಲು ಹಣ ಎತ್ತಿಟ್ಟಿದ್ದೆ. ಪರವಾಗಿಲ್ಲ, ಮನೆಯನ್ನ ಮುಂದಿನ ಬಾರಿ ಮಾಡಿಕೊಳ್ಳುವೆ. ಪುನೀತ್​ ನಡೆಸುತ್ತಿದ್ದ ಶಕ್ತಿಧಾಮವನ್ನು(Shaktidhama) ನೋಡಿಕೊಳ್ಳುವ ಜವಾಬ್ದಾರಿಯನ್ನು ಕೊಡಿ. ಕೊಟ್ಟ ಮಾತನ್ನ ಉಳಿಸಿಕೊಳ್ತೇನೆ ಎಂದು ವಿಶಾಲ್​ ಮನವಿ ಮಾಡಿದರು.

    ನನಗೆ ಸ್ವಲ್ಪ ಸ್ವಲ್ಪ ಕನ್ನಡ ಗೊತ್ತು. ನಮ್ಮ ಅಪ್ಪ ಕನ್ನಡಿಗ ಎಂದು ನಡುವೆ ಕನ್ನಡದಲ್ಲಿ ಮಾತನಾಡಿದ ವಿಶಾಲ್​, ಅಪ್ಪು ಒಳ್ಳೆಯವರು. ಅವರ ಪಾರ್ಥಿವ ಶರೀರವನ್ನು ನೋಡಲು ನನಗೆ ಧೈರ್ಯವೇ ಬರಲಿಲ್ಲ. ಈಗಲೂ ಅವರು ಇಲ್ಲ ಎಂಬುದನ್ನ ಅರಗಿಸಿಕೊಳ್ಳೋಕೆ ಆಗ್ತಿಲ್ಲ ಎಂದು ಭಾವುಕರಾದರು.

    ಪುನೀತ ನಮನ ಕಾರ್ಯಕ್ರಮದಲ್ಲಿ ಮೂಸೂರಿನ ಶಕ್ತಿಧಾಮ ಮಕ್ಕಳೂ ಪಾಲ್ಗೊಂಡಿದ್ದರು. ವಿಶಾಲ್​ರ ಈ ಮಾತನ್ನು ಕೇಳಿ ಆ ಮಕ್ಕಳು ಮತ್ತಷ್ಟು ಭಾವುಕರಾದರು.

    ಕಣ್ಣೀರ ಕಟ್ಟೆ ಒಡೆಯಿತು.. ವೇದಿಕೆಯಲ್ಲೇ ಬಿಕ್ಕಿಬಿಕ್ಕಿ ಅತ್ತ ಶಿವಣ್ಣ, ರಾಘಣ್ಣ: ಬಂದ್ಬಿಡು ಕಂದಾ.. ನಾನೇ ಹೋಗುವೆ

    ಪುನೀತ ನಮನದಲ್ಲಿ ಮನಕಲಕುವ ದೃಶ್ಯ: ಕಾರ್ಯಕ್ರಮದುದ್ದಕ್ಕೂ ಶಿವಣ್ಣ, ಅಶ್ವಿನಿ ಕಣ್ಣೀರು!

    ಪುನೀತ್​ ರಾಜ್​​ಕುಮಾರ್​ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ: ಸಿಎಂ ಬೊಮ್ಮಾಯಿ ಘೋಷಣೆ

    ಅಪಘಾತದಲ್ಲಿ ಅಪ್ಪು ಅಭಿಮಾನಿ ಸಾವು: ಕೊನೇ ಕ್ಷಣದಲ್ಲಿ ಪತ್ನಿಗೆ ಆತ ಹೇಳಿದ ಕೊನೇ ಮಾತು ಕೇಳಿದ್ರೆ ಮನಕಲಕುತ್ತೆ

    ಪುನೀತ ನಮನ: ಕಣ್ಣೀರಿಟ್ಟ ಅಪ್ಪು ಪತ್ನಿ ಅಶ್ವಿನಿ, ಶಿವಣ್ಣ… ಭಾರವಾದ ಮನಸ್ಸಿನಲ್ಲೇ ಮೌನವಾಗಿ ಕುಳಿತ ಪುನೀತ್​ ಮಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts