More

  ಡಾಲಿಗೆ ಒಲಿದ ಐಶ್ವರ್ಯ ; ಉತ್ತರಕಾಂಡ ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಗೊತ್ತಾ?

  ವಿಜಯವಾಣಿ ಸುದ್ದಿಜಾಲ ಬೆಂಗಳೂರು

  ತಮಿಳು ನಟಿ ಐಶ್ವರ್ಯಾ ರಾಜೇಶ್​ ಇದೀಗ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸೇರಿ 50ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿರುವ ಅವರಿಗೆ “ಕಾಕಮುಟ್ಟೈ’ ಚಿತ್ರದ ನಟನೆಗೆ ಅತ್ಯುತ್ತಮ ನಟಿ ತಮಿಳುನಾಡು ರಾಜ್ಯಪ್ರಶಸ್ತಿ ದೊರೆತಿದೆ. ಇಂತಹ ಐಶ್ವರ್ಯಾ ದಣ ಭಾರತದ ಬಹುತೇಕ ಎಲ್ಲ ಸ್ಟಾರ್​ಗಳೊಂದಿಗೆ ತೆರೆ ಹಂಚಿಕೊಂಡಿದ್ದು, ಇದೀಗ ಡಾಲಿ ಧನಂಜಯ ನಾಯಕನಾಗಿರುವ “ಉತ್ತರಕಾಂಡ’ ಸಿನಿಮಾ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ.

  ಡಾಲಿಗೆ ಒಲಿದ ಐಶ್ವರ್ಯ ; ಉತ್ತರಕಾಂಡ ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಗೊತ್ತಾ?

  ಈಗಾಗಲೇ ವಿಜಯಪುರದಲ್ಲಿ ಚಿತ್ರದ ಮೊದಲ ಹಂತದ ಶೂಟಿಂಗ್​ ನಡೆಯುತ್ತಿದ್ದು, ಐಶ್ವರ್ಯಾ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ. ಅವರಿಲ್ಲಿ “ದುರ್ಗಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಲುಕ್​ ಕೂಡ ರಿವೀಲ್​ ಆಗಿದೆ. ರೋಹಿತ್​ ಪದಕಿ ಆ್ಯಕ್ಷನ್​&ಕಟ್​ ಹೇಳುತ್ತಿರುವ “ಉತ್ತರಕಾಂಡ’ ಚಿತ್ರವನ್ನು ಕೆಆರ್​ಜಿ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ಕಾರ್ತಿಕ್​ ಗೌಡ ಮತ್ತು ಯೋಗಿ ಜಿ. ರಾಜ್​ ನಿರ್ಮಿಸುತ್ತಿದ್ದಾರೆ.

  ಡಾಲಿಗೆ ಒಲಿದ ಐಶ್ವರ್ಯ ; ಉತ್ತರಕಾಂಡ ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಗೊತ್ತಾ?

  ಟಾನುಟಿಗಳ ಗುದ್ದಾಂಗುದ್ದಿ!
  ದಿನ ಕಳೆದಂತೆ “ಉತ್ತರಕಾಂಡ’ ಚಿತ್ರದ ತಾರಾಗಣ ಹಿಗ್ಗುತ್ತಿದೆ. ಈಗಾಗಲೇ ಹಲವು ಟಾನುಟಿ ಕಲಾವಿದರು ಚಿತ್ರತಂಡ ಸೇರಿಕೊಂಡಿದ್ದು, ಸಿನಿಮಾ ಬಗ್ಗೆ ಕುತೂಹಲ, ನಿರೀೆ ಹೆಚ್ಚಿಸಿದೆ. ಗಬ್ರು ಸತ್ಯ ಪಾತ್ರದಲ್ಲಿ ಡಾಲಿ ಧನಂಜಯ, ಲಚ್ಚಿ ಪಾತ್ರದಲ್ಲಿ ಚೈತ್ರಾ ಜೆ. ಆಚಾರ್​, ಟೊರಿನೋ ಪಾತ್ರದಲ್ಲಿ ಮಲಯಾಳಂ ನಟ ವಿಜಯ್​ ಬಾಬು, ಮಲ್ಲಿಗೆ ರೋಲ್​ನಲ್ಲಿ ದಿಗಂತ್​, ಪಾಟೀಲನ ಪಾತ್ರದಲ್ಲಿ ಯೋಗರಾಜ್​ ಭಟ್​, ಬಂಡೆ ಕಾಕಾ ಪಾತ್ರದಲ್ಲಿ ರಂಗಾಯಣ ರಘು, ಧರ್ಮನಾಗಿ ಗೋಪಾಲಕೃಷ್ಣ ದೇಶಪಾಂಡೆ, ಪಂಡರಿಬಾಯಿಯಾಗಿ ಉಮಾಶ್ರೀ ಕಾಣಿಸಿಕೊಳ್ಳಲಿದ್ದಾರೆ.

  ಡಾಲಿಗೆ ಒಲಿದ ಐಶ್ವರ್ಯ ; ಉತ್ತರಕಾಂಡ ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಗೊತ್ತಾ?

  ಡಾಲಿ ಧನಂಜಯ ಜತೆ ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ ಶಿವರಾಜಕುಮಾರ್​ ಪಾತ್ರ ಇನ್ನಷ್ಟೇ ರಿವೀಲ್​ ಆಗಬೇಕಿದೆ. ಇನ್ನು “ಉತ್ತರಕಾಂಡ’ ಮೂಲಕ ಖ್ಯಾತ ಬಾಲಿವುಡ್​ ಸಂಗೀತ ನಿರ್ದೇಶಕ ಅಮಿತ್​ ತ್ರಿವೇದಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಉಳಿದಂತೆ ಅದ್ವೈತ್​​ ಗುರುಮೂರ್ತಿ ಛಾಯಾಗ್ರಹಣದಲ್ಲಿ ಸಿನಿಮಾ ಮೂಡಿಬರಲಿದೆ.

  ಡಾಲಿಗೆ ಒಲಿದ ಐಶ್ವರ್ಯ ; ಉತ್ತರಕಾಂಡ ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಗೊತ್ತಾ?
  ಡಾಲಿಗೆ ಒಲಿದ ಐಶ್ವರ್ಯ ; ಉತ್ತರಕಾಂಡ ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಗೊತ್ತಾ?
  ಡಾಲಿಗೆ ಒಲಿದ ಐಶ್ವರ್ಯ ; ಉತ್ತರಕಾಂಡ ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಗೊತ್ತಾ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts