More

    ನಮ್ಮ ನೆಚ್ಚಿನ ನಟ ಪುನೀತ್ ಹೋದ‌ ಮೇಲೆ ನಾವ್ಯಾಕೆ ಇರಬೇಕು? ಎನ್ನುತ್ತಲೇ ವಿಷ ಕುಡಿದ ಯುವಕರು

    ರಾಯಚೂರು: ನಮ್ಮ ನೆಚ್ಚಿನ ನಟ ಪುನೀತ್ ಹೋದ‌ ಮೇಲೆ ನಾವ್ಯಾಕೆ ಇರಬೇಕು? ಎನ್ನುತ್ತಲೇ ಯುವಕರಿಬ್ಬರು ವಿಷ ಕುಡಿದು ಆತ್ಮಹತ್ಯೆ ಯತ್ನಿಸಿದ ಘಟನೆ ಸಿಂಧನೂರು ತಾಲೂಕಿನಲ್ಲಿ ಸಂಭವಿಸಿದೆ.

    ಆರಾಪುರದ ಬಸನಗೌಡ (22) ಹಾಗೂ ಯಾಪಲಪರ್ವಿಯ ಮೊಹ್ಮದ್ ರಫಿ (25) ವಿಷ ಸೇವಿಸಿ ಆತ್ನಹತ್ಯೆಗೆ ಯತ್ನಿಸಿದವರು. ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸನಗೌಡ ಹಾಗೂ ರಫಿ ಇಬ್ಬರೂ ಪುನೀತ್​ರ ಅಪ್ಪಟ ಅಭಿಮಾನಿಗಳು.

    ಪ್ರೀತಿಯ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಕೇಳಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮುನಿಯಪ್ಪ ಎಂಬುವವರು ಹೃದಯಾಘಾತಕ್ಕೀಡಾಗಿ ಶುಕ್ರವಾರ ಮೃತಪಟ್ಟಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ಅಭಿಮಾನಿಗಳು ಅಪ್ಪು ಅಗಲಿಕೆಯ ನೋವು ಸಹಿಸಲಾಗದೆ ಸತ್ತಿದ್ದಾರೆ. ಬೆಳಗಾವಿ ತಾಲೂಕಿನ ಸಿಂದೋಳ್ಳಿ ಗ್ರಾಮದ ಪರಶುರಾಮ ದೇಮಣ್ಣವರ(33) ಹೃದಯಾಘತದಿಂದ ಮೃತಪಟ್ಟರೆ, ಅಥಣಿ ಪಟ್ಟಣದ ವಡ್ಡರಗಲ್ಲಿಯ ರಾಹುಲ ಗಾಡಿವಡ್ಡರ(22) ನೇಣಿಗೆ ಶರಣಾಗಿದ್ದಾರೆ.

    ಸಾವಿಗೂ ಮುನ್ನಾ ಪುನೀತ್ ಕರೆ ಮಾಡಿದ್ದು ಯಾರಿಗೆ? ಅದೆಲ್ಲವೂ ಕೊನೆಯಾಗಿಯೇ ಉಳಿಯಿತಲ್ಲ…

    ಪುನೀತ್​ ಸಾವಿನ ಸುದ್ದಿ ಕೇಳಿ ಅಭಿಮಾನಿಗೆ ಹೃದಯಾಘಾತ: ನಟನಂತೆ ಬಾರದೂರಿಗೆ ಹೋದ ಅಭಿಮಾನಿ

    ಇದೆಂಥಾ ದುರ್ವಿಧಿ: ಅಪ್ಪು ವ್ಯಕ್ತಿತ್ವ ಸಾರುವ ಈ ಹಾಡಿನ ಸಾಲು ಅವರ ಅಕಾಲಿಕ ಮರಣವನ್ನೂ ನಿಜವಾಗಿಸಿ ಬಿಡ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts