More

    ದೊಡ್ಮನೆಯವರ ದೊಡ್ಡ ಗುಣ, ನಾಡಿನ ಸಂಸ್ಕೃತಿ ಎತ್ತಿ ಹಿಡಿದ ಅಭಿಮಾನಿಗಳು: ಸಿಎಂ ಬೊಮ್ಮಾಯಿ‌ ಗುಣಗಾನ

    ಬೆಂಗಳೂರು: ಅಗಲಿದ ಮೇರುನಟ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ‌ ಹಾಗೂ ಅಂತ್ಯಕ್ರಿಯೆ ಸುವ್ಯವಸ್ಥಿತ, ಶಾಂತಿಯುತವಾಗಿ ನಡೆಸಿಕೊಟ್ಟಿದ್ದಕ್ಕಾಗಿ ಸರ್ಕಾರಕ್ಕೆ ನಾಯಕ ನಟ ಶಿವರಾಜಕುಮಾರ್ ಕೃತಜ್ಞತೆಗಳನ್ನು ಸಲ್ಲಿಸುವ ಮೂಲಕ ದೊಡ್ಮನೆಯವರ ದೊಡ್ಡ‌ ಗುಣ ತೋರಿಸಿಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಗುಣಗಾನ ಮಾಡಿದರು.

    ವಿಧಾನಸೌಧದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಸಿಎಂ, ಈ ವ್ಯವಸ್ಥೆ ನಾನು ಮಾಡಿದೆ, ಸರ್ಕಾರ ಅಥವಾ ಅಧಿಕಾರಿಗಳು ಮಾಡಿದ್ದಾರೆ ಎಂದಲ್ಲ. ಸರ್ಕಾರ ತನ್ನ ಕರ್ತವ್ಯ ನಿರ್ವಹಿಸಿದೆ ಎಂದರು.

    ದೊಡ್ಮನೆಯವರ ದೊಡ್ಡ ಗುಣ, ನಾಡಿನ ಸಂಸ್ಕೃತಿ ಎತ್ತಿ ಹಿಡಿದ ಅಭಿಮಾನಿಗಳು: ಸಿಎಂ ಬೊಮ್ಮಾಯಿ‌ ಗುಣಗಾನ

    ಸಂಸ್ಕೃತಿ ಎತ್ತಿ ಹಿಡಿದರು: ಕುಟುಂಬದ ಕುಡಿಯನ್ನು ಕಳೆದುಕೊಂಡ ದುಃಖ, ನೋವಿನಲ್ಲೂ ಡಾ.ರಾಜಕುಮಾರ್ ಕುಟುಂಬದ ಪ್ರತಿಯೊಬ್ಬ ಸದಸ್ಯರು ಸರ್ಕಾರದ ಜತೆಗೆ ಕೈಜೋಡಿಸಿದರು. ನೆಚ್ಚಿನ ನಾಯಕ ನಟ, ಮಾನವೀಯ ಮೌಲ್ಯಗಳಿಗೆ ಪ್ರತೀಕವಾಗಿದ್ದ ಪುನೀತ್ ರಾಜ್​ಕುಮಾರ್ ಅವರನ್ನ ಕಳೆದುಕೊಂಡ ಲಕ್ಷಾಂತರ ಅಭಿಮಾನಿಗಳು ಮೂರು ದಿನಗಳ ಕಾಲ ಸಂಯಮದಿಂದ ವರ್ತಿಸಿ, ಅಂತಿಮ‌ದರ್ಶನ ಮಾಡಿಕೊಂಡರು. ಅಂತಿಮ ದರ್ಶನಕ್ಕೂ ಸಹಕರಿಸುವ ಮೂಲಕ ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿದರು ಎಂದು ಬೊಮ್ಮಾಯಿ‌ ಕೃತಜ್ಞತೆ ಸಲ್ಲಿಸಿದರು.

    ಸುವ್ಯವಸ್ಥಿತವಾಗಿ ನೆರವೇರಲು ಎಲ್ಲ ಅನುಕೂಲತೆಗಳನ್ನು ಕಲ್ಪಿಸಿ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್, ಕಂದಾಯ ಇಲಾಖೆಗಳು, ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದಾರೆ ಎಂದು ಬೊಮ್ಮಾಯಿ‌ ಹೇಳಿದರು.

    ಅಭಿಮಾನಿಗಳೇ ಅರ್ಥ ಮಾಡಿಕೊಳ್ಳಿ, ಅಪ್ಪು ಇಂತಹದ್ದನ್ನು ಎಂದೂ ಬಯಸಲ್ಲ… ಮನಕಲಕುತ್ತೆ ಶಿವಣ್ಣರ​ ನೋವಿನ ನುಡಿ

    ಸಾವಿಗೂ ಮುನ್ನಾ ಪುನೀತ್ ಕರೆ ಮಾಡಿದ್ದು ಯಾರಿಗೆ? ಅದೆಲ್ಲವೂ ಕೊನೆಯಾಗಿಯೇ ಉಳಿಯಿತಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts