More

    ಇಂದು ಭಾರತ-ಇಂಗ್ಲೆಂಡ್ ಎ ಮೊದಲ ಟಿ20: 3 ಪಂದ್ಯಗಳ ಸರಣಿಗೆ ನಾಲ್ವರು ಕನ್ನಡತಿಯರು ಆಯ್ಕೆ

    ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡ ಬರೋಬ್ಬರಿ 9 ತಿಂಗಳ ಬಳಿಕ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದು, ಡಿ.6 ರಂದು ಆರಂಭವಾಗಲಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಆಡಲಿದೆ. ಇದಕ್ಕೂ ಮುನ್ನ ಭಾರತ ಎ ಹಾಗೂ ಇಂಗ್ಲೆಂಡ್ ಎ ಮಹಿಳಾ ತಂಡಗಳು 3 ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ಮೊದಲ ಪಂದ್ಯ ನಡೆಯಲಿದೆ. ಭಾರತದ ಭರವಸೆಯ ಆಟಗಾರ್ತಿಯರು ಸರಣಿಯಲ್ಲಿ ಆಡಲಿದ್ದು, ದೊರೆತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಹಂಬಲದಲ್ಲಿದ್ದಾರೆ. ಕರ್ನಾಟಕದ ವೃಂದಾ ದಿನೇಶ್, ದಿವ್ಯಾ ಜ್ಞಾನಾನಂದ, ಮೋನಿಕಾ ಪಟೇಲ್, ಶ್ರೇಯಾಂಕ ಪಾಟೀಲ್ ಗಮನ ಸೆಳೆಯುವ ನಿರೀಕ್ಷೆಯಲ್ಲಿದ್ದಾರೆ. ಭಾರತದ ಪರ ಒಂದು ಪಂದ್ಯವನ್ನಾಡಿರುವ ಕೇರಳದ ಆಲ್ರೌಂಡರ್ ಮಿನ್ನು ಮಣಿ ತಂಡವನ್ನು ಮುನ್ನಡೆಸಲಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಸರಣಿ ಬಳಿಕ ಪ್ರವಾಸಿ ಆಸ್ಟ್ರೇಲಿಯಾ ತಂಡದ ಎದುರಿನ ಏಕೈಕ ಟೆಸ್ಟ್, 3 ಏಕದಿನ ಪಂದ್ಯ ಹಾಗೂ 3 ಟಿ20 ಪಂದ್ಯಗಳ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಯುವ ಕ್ರಿಕೆಟಿಗರಿಗೆ ಸರಣಿ ಉತ್ತಮ ವೇದಿಕೆ ಎನಿಸಿದೆ. ಎರಡನೇ ಟಿ20 (ಡಿ.1), ಮೂರನೇ ಪಂದ್ಯ (ಡಿ.3) ನಡೆಯಲಿದ್ದು, ಎಲ್ಲ ಪಂದ್ಯಗಳಿಗೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಆತಿಥ್ಯವಹಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts