More

    ಮುಸ್ಲಿಂ ವಿದ್ಯಾರ್ಥಿನಿಯರೇ, ಯಾರದ್ದೋ ಮಾತು ಕೇಳಿ ಭವಿಷ್ಯ ಹಾಳು ಮಾಡಿಕೊಳ್ಬೇಡಿ: ಪ್ರಮೋದ್​ ಮುತಾಲಿಕ್

    ಬಾಗಲಕೋಟೆ: ಮುಸ್ಲಿಂ ವಿದ್ಯಾರ್ಥಿನಿಯರೇ ಯಾರದ್ದೋ ಮಾತು ಕೇಳಿ ನಿಮ್ಮ‌ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಶಿಕ್ಷಣ ಇಲಾಖೆಯ ನಿಯಮದಂತೆ ಶಾಲಾ ಸಮವಸ್ತ್ರ ಧರಿಸಿ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾಗಿ. ನಿಮ್ಮ ಭವಿಷ್ಯ ಉಜ್ವಲ ಮಾಡಿಕೊಳ್ಳಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್ ಸಲಹೆ ನೀಡಿದ್ದಾರೆ.

    ಬಾದಾಮಿಯಲ್ಲಿ ಭಾನುವಾರ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಪ್ರಮೋದ್​ ಮುತಾಲಿಕ್, ಎಸ್ಸೆಸ್ಸೆಲ್ಸಿ ಮುಂದಿನ ಭವಿಷ್ಯಕ್ಕೆ ಬುನಾದಿ ಹಾಕುವ ಪ್ರಮುಖ ಘಟ್ಟ. ಪರೀಕ್ಷೆಗೆ ಗೈರಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ. ವಿದ್ಯೆಯೇ ಮುಖ್ಯ, ದೇಶದ ಭವಿಷ್ಯಕ್ಕೂ ನೀವು ಬೇಕು. ಹಾಗಾಗಿ ಪರೀಕ್ಷಾ ಕೊಠಡಿಗೆ ಹಿಜಾಬ್ ತರದೆ ಪರೀಕ್ಷೆಗೆ ಹಾಜರಾಗಿ ಎಂದರು. ಈಗ ಪರೀಕ್ಷೆ ಬರೆಯಿರಿ ಎನ್ನುತ್ತಿರುವ ಮುಸ್ಲಿಂ ಮುಖಂಡರು ಮತ್ತು ಕಾಂಗ್ರೆಸ್ ಮುಖಂಡರು ಇದೇ ಮಾತನ್ನು ಮೊದಲೇ ಹೇಳಿದ್ದರೆ ಈ ವಿವಾದ ಜಗತ್ತಿನಾದ್ಯಂತ ಚರ್ಚೆಯೇ ಆಗ್ತಿರಲಿಲ್ಲ. ವಿವಾದ ಪ್ರಾರಂಭ ಮಾಡಿದ ಆ ವಿದ್ಯಾರ್ಥಿನಿಯರ ಮನವೊಲಿಸುವ ಕೆಲಸವೂ ಆಗಿತ್ತು. ಆದರೆ ಮೊಂಡುವಾದ, ಎಸ್​ಡಿಪಿಐ, ಪಿಎಫ್​ಐ, ಸಿಎಫ್​ಐನವರಿಂದ ಇಷ್ಟೆಲ್ಲಾ ಆಯ್ತು ಎಂದರು.

    ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಬೇಕು ಎಂಬ ನಿಟ್ಟಿನಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಪ್ರಯತ್ನ ಮಾಡಿದ್ದಾರೆ. 2018ರಲ್ಲಿ ಖಾದರ್ ಅವರ ಪ್ರಯತ್ನದಿಂದ ವಿವಾದ ಆಗಿರಲಿಲ್ಲ. ಈಗ ಎಸ್​ಡಿಪಿಐ, ಪಿಎಫ್​ಐ, ಸಿಎಫ್​ಐ ಈ ಅನಾಹುತಕ್ಕೆ ಕಾರಣವಾಗಿದೆ. ಇವರಿಗೆ ವಿದ್ಯೆ ಬೇಡ, ಧರ್ಮ ಮುಖ್ಯವಾಗಿದೆ. ಕೋರ್ಟ್, ಸಂವಿಧಾನಕ್ಕಿಂತ ಇವರಿಗೆ ಖುರಾನ್ ಮುಖ್ಯವಾಗಿದೆ ಎಂದು ಪ್ರಮೋದ್​ ಮುತಾಲಿಕ್​ ಅಸಮಾಧಾನ ಹೊರ ಹಾಕಿದರು.

    ಜಿಮ್​ನಲ್ಲೇ ಮಹಿಳೆ ಸಾವು: ವರ್ಕೌಟ್​ನಿಂದ ಹೃದಯಾಘಾತ? ವೈದ್ಯರು ಕೊಟ್ಟ ಮಹತ್ವದ ಮಾಹಿತಿ ಇಲ್ಲಿದೆ

    ಪ್ರತಾಪ್ ಸಿಂಹ ಸಿಕ್ಕಿದ್ರೆ ಹುಷಾರಪ್ಪ ಅಂತ ಹೇಳ್ತೀನಿ…

    ಮಹಿಳೆಯ ಕಾಟ ಸಹಿಸಲಾಗದೆ ಯುವಕ ಆತ್ಮಹತ್ಯೆ: ಸಾವಿಗೂ ಮುನ್ನ ಆತ ಮಾಡಿಟ್ಟ ವಿಡಿಯೋದಲ್ಲಿದೆ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts