More

    ಸರ್ಕಾರಿ ಯೋಜನೆಗಳಲ್ಲಿ ಜನಪ್ರತಿನಿಧಿಗಳ ಹೆಸರು, ಭಾವಚಿತ್ರಕ್ಕೆ ಕೊಕ್! ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಕೇಸ್​

    ಬೆಂಗಳೂರು: ಸಾರ್ವಜನಿಕರ ತೆರಿಗೆ ಹಣದಿಂದ ಸರ್ಕಾರಿ ಇಲಾಖೆಗಳು ಮತ್ತು ಅಂಗಸಂಸ್ಥೆಗಳು ಅನುಷ್ಠಾನಕ್ಕೆ ತಂದ ಯೋಜನೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳ, ರಾಜಕೀಯ ಪಕ್ಷಗಳ ಹಾಗೂ ಪದಾಧಿಕಾರಿಗಳು ಹೆಸರು, ಭಾವಚಿತ್ರಗಳನ್ನು ಬಳಸುವಂತಿಲ್ಲ. ನಿಯಮ ಉಲ್ಲಂಘಿಸಿದ್ರೆ ಕೇಸ್ ದಾಖಲಾಗುತ್ತೆ!

    ಹೌದು, ಬೃಹತ್ ಬೆಂಗಳೂರು ನಗರ ಪಾಲಿಕೆ ಮಾತ್ರವಲ್ಲ, ರಾಜ್ಯವ್ಯಾಪಿ ಇಂತಹ ಭಾವಚಿತ್ರಗಳು ಹಾಗೂ ಹೆಸರುಗಳಿದ್ದರೆ ತೆರವುಗೊಳಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಆದೇಶಿಸಿದ್ದು, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟಿನ ಸೂಚನೆಯಂತೆ ಈ ಕ್ರಮವಹಿಸಿದೆ.

    ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯ ನ್ಯಾಯಮೂರ್ತಿಗಳು, ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ರಾಷ್ಟ್ರಪಿತಾಮಹರ ಹೆಸರುಗಳನ್ನು ಹೊರತುಪಡಿಸಿ ಉಳಿದ ಜ‌ನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಹೆಸರು, ಭಾವಚಿತ್ರಗಳನ್ನು ಬಳಸಿ ಜಾಹೀರಾತು ಪ್ರಚಾರ ಮಾಡುವಂತಿಲ್ಲ.

    ಸರ್ಕಾರ ಅಥವಾ ಸರ್ಕಾರದ ಧನಸಹಾಯದಿಂದ ನಿರ್ವಹಿಸಿದ ಯೋಜನೆ, ಕಾರ್ಯಕ್ರಮ ಹಾಗೂ ಕಾಮಗಾರಿಗಳಿಗೆ ಈ ಸೂಚನೆ ಅನ್ವಯಿಸಿದೆ. ಬಸ್ ನಿಲ್ದಾಣ, ಕುಡಿವ ನೀರಿನ ಘಟಕ ಮುಂತಾದ ಸ್ಥಳಗಳಲ್ಲಿ ಹೆಸರು ಹಾಗೂ ಭಾವಚಿತ್ರಗಳಿದ್ದರೆ ತಕ್ಷಣ ತೆರವುಗೊಳಿಸಬೇಕು ಎಂದು ಸೂಚಿಸಲಾಗಿದೆ. ನಗರಾಭಿವೃದ್ಧಿ ಇಲಾಖೆ ಅಧೀನದಲ್ಲಿ ಬರುವ ನಿಗಮ, ಮಂಡಳಿ, ಮಹಾನಗರ ಪಾಲಿಕೆ, ನಗರ ಪಟ್ಟಣ ಸ್ಥಳೀಯ ಸಂಸ್ಥೆಗಳು, ಪ್ರಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

    ಈ ಆದೇಶ ಉಲ್ಲಂಘಿಸಿದರೆ ಸಂಬಂಧಿಸಿದವರ ವಿರುದ್ಧ ಕರ್ನಾಟಕ ಮುಕ್ತ ಸ್ಥಳಗಳ ವಿರೂಪಗೊಳಿಸುವಿಕೆ ತಡೆ ಕಾಯ್ದೆಯಡಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಬೇಕು. ಅಲ್ಲದೆ, ಅನುಷ್ಠಾನದಲ್ಲಿ ವೈಫಲ್ಯ ಕಂಡು ಬಂದರೆ ಆಯಾ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.

    ನನ್ನನ್ನು ತಳ್ಳಿ ಗೆಳತಿಯನ್ನು ಪೊದೆಯತ್ತ ಎಳೆದೊಯ್ದರು… ​ ಸಂತ್ರಸ್ತೆಯ ಸ್ನೇಹಿತನಿಂದ ಹೊರಬಿತ್ತು ಸ್ಫೋಟಕ ಮಾಹಿತಿ

    ಪ್ರೇಯಸಿಯ ಕೊಂದು ಪ್ರಾಣಬಿಟ್ಟ ಪ್ರಿಯಕರ! ಸಾವಿಗೂ ಮುನ್ನ ಡೆತ್​ನೋಟ್​ನಲ್ಲಿ ಮನದ ನೋವು ಬಿಚ್ಚಿಟ್ಟ ಯುವಕ

    ಅಷ್ಟೊತ್ತಿನಲ್ಲಿ ಯುವತಿ ನಿರ್ಜನ‌‌ ಪ್ರದೇಶಕ್ಕೆ ಹೋಗಬಾರದಿತ್ತು ಎಂದ ಗೃಹ ಸಚಿವ! ಛೇ ಇದೆಂಥಾ ಮಾತು?

    ಇದು ತುತ್ತು ಅನ್ನಕ್ಕಾಗಿ ಪರದಾಡಿದ್ದ ವಿಷ್ಣು-ಭಾರತಿ ಬದುಕಿನ ಕಣ್ಣೀರ ಕಥೆ! ಬಿಡಿಗಾಸೂ ಇಲ್ದೇ 6 ತಿಂಗಳು ಗಂಜಿ ಕುಡಿದಿದ್ದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts