ಜೇಮ್ಸ್​ ಪೈರಸಿ ಮಾಡಬೇಡಿ, ಇದು ದೇವರ ಸಿನಿಮಾ: ಕೈ ಮುಗಿದು ಬೇಡಿಕೊಂಡ ಅಭಿಮಾನಿಗಳು

New Project(22)
ಚಾಮರಾಜನಗರದಲ್ಲಿ ಜೇಮ್ಸ್​ ಜಾತ್ರೆಯಲ್ಲಿ ಅಪ್ಪು ಭಾವಚಿತ್ರ ಹಿಡಿದು ಥಿಯೇಟರ್​ ಬಳಿ ಬಂದ ಬಾಲಕ
Published on

ಬೆಂಗಳೂರು: ಅಪ್ಪು ಅಭಿಮಾನಿಗಳ ದೇವರು. ಅವರ ಸಿನಿಮಾವನ್ನು ಪೈರಸಿ ಮಾಡಬೇಡಿ. ಜೇಮ್ಸ್​ ಸಿನಿಮಾವನ್ನು ವಿಶ್ವಕ್ಕೇ ಮಾದರಿ ಮಾಡಿ ತೋರಿಸೋಣ. ಇದು ಉತ್ತಮ ಸಂದೇಶವಿರುವ ಸಿನಿಮಾ ಎಂದು ರಾಜ್ಯಾದ್ಯಂತ ಅಭಿಮಾನಿಗಳು ಕೈಮುಗಿದು ಮನವಿ ಮಾಡಿದ್ದಾರೆ.

ಜೇಮ್ಸ್ ಸಿನಿಮಾ ಪೈರಸಿ ಮಾಡುವುದನ್ನ ನಾವು‌ ಸಹಿಸಲ್ಲ ಎಂದು ಎಚ್ಚರಿಸಿರುವ ಅಭಿಮಾನಿಗಳು, ಎಲ್ಲರೂ ಥಿಯೇಟರ್​ಗಳಿಗೆಹೋಗಿ ಸಿನಿಮಾ ನೋಡಿ. ದೇವರ ಸಿನಿಮಾವನ್ನು ಪೈರಸಿ ಮಾಡಬೇಡಿ ಎಂದು ಯಾದಗಿರಿ, ಬೆಂಗಳೂರು, ಚಾಮರಾಜನಗರ ಸೇರಿದಂತೆ ಹಲವೆಡೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net