More

    ಪಿಡಿಒ ಮೇಲಿನ ಹಲ್ಲೆ ತಡೆಗೆ ಮನವಿ

    ಶಿಗ್ಗಾಂವಿ: ಗ್ರಾಮೀಣ ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡುತ್ತಿರುವ ಸ್ಥಳೀಯ ಆಡಳಿತದ ಪಿಡಿಒ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮೇಲೆ ನಡೆಯುತ್ತಿರುವ ಅವ್ಯಾಹತವಾದ ಮಾನಸಿಕ, ದೈಹಿಕ ಹಲ್ಲೆಗಳನ್ನು ತಡೆಗಟ್ಟಬೇಕು ಎಂದು ತಾಲೂಕು ಪಿಡಿಒಗಳ ಸಂಘ ಶನಿವಾರ ತಾ.ಪಂ. ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿತು.

    ಜನಪ್ರತಿನಿಧಿಗಳ ಮೂಲಕ ಅನಧಿಕೃತ ಬಿಲ್ ನೀಡುವಂತೆ ಒತ್ತಡಗಳು ಹೆಚ್ಚಿವೆ. ಮಹಿಳಾ ನೌಕರರನ್ನು ಹೊಂದಿದ ಗ್ರಾಪಂಗಳಲ್ಲಿ ಮಾನಸಿಕ, ದೈಹಿಕ ಹಲ್ಲೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ನಿರ್ವಣವಾಗುತ್ತಿವೆ. ಇದರ ಬಗ್ಗೆ ಸರ್ಕಾರ ಗಮನ ಹರಿಸದಿರುವುದು ಸರಿಯಲ್ಲ. ಹಲ್ಲೆಗೈದವರ ಮೇಲೆ ಗೊಂಡಾ ಕಾಯ್ದೆಯಡಿ ಕ್ರಮವಹಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ತಾಲೂಕು ಅಕ್ಷರ ದಾಸೋಹ ನಿರ್ದೇಶಕ ಅಶೋಕ ಕುಂಬಾರ ಮನವಿ ಸ್ವೀಕರಿಸಿದರು.

    ಸಂಘದ ಉಪಾಧ್ಯಕ್ಷ ಪಿ.ಎಂ. ಕಮ್ಮಾರ, ಸುಧೀರ ಹಡಗಲಿ, ಶಾಂತಿನಾಥ ನ್ಯಾಮಗೌಡ್ರ, ಎಸ್.ಬಿ. ಪಾಟೀಲ, ರಾಮಕೃಷ್ಣ ಗುಡಗೇರಿ, ಅಶೋಕ ಗೊಂದಿ, ನೃಪತುಂಗ ಭೂಸರೆಡ್ಡಿ, ಪಿ.ಆರ್. ಕಬ್ಬೂರ, ಎಸ್.ಎಸ್. ಪ್ರವೀಣ, ಐ.ಎಂ. ಮುಲ್ಲಾ, ಎಸ್.ಬಿ. ತಗ್ಗಿಹಳ್ಳಿ, ಎಸ್.ಎಸ್. ನಾಡಿಗ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts