More

    ರೈತ ಸಂಘದಿಂದ PAY FARMER ಅಭಿಯಾನ ಶುರು: ಕಾಂಗ್ರೆಸ್​-ಬಿಜೆಪಿಗೆ ಹಿಗ್ಗಾಮುಗ್ಗಾ ತರಾಟೆ

    ಮಂಡ್ಯ: ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ‘PAYCM’ ಪೋಸ್ಟರ್​ನದ್ದೇ ಸದ್ದು. ಕಾಂಗ್ರೆಸ್​-ಬಿಜೆಪಿ ನಡುವಿನ ಸಮರ ತಾರಕಕ್ಕೇರಿದೆ. ಇದೀಗ ಎರಡೂ ಪಕ್ಷಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ರಾಜ್ಯ ರೈತ ಸಂಘ, ‘PAY FARMER’ ಅಭಿಯಾನ ಆರಂಭಿಸಿದೆ. ಪೇಟಿಎಂ ಕ್ಯೂ ಆರ್ ಕೋಡ್ ಮಾದರಿಯಲ್ಲಿ ‘ಪೇ ಫಾರ್ಮರ್​’ ಪೋಸ್ಟರ್​ ಬಿಡುಗಡೆ ಮಾಡಿರುವ ರೈತರ ಸಂಘ, ರಾಜಕೀಯ ನಾಯಕರೇ ನೀವೆಲ್ಲ ಒಂದೇ ನಾಣ್ಯದ ಎರಡು ಮುಖಗಳೇ. ನಿಮ್ಮಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ರೈತರ ಕಷ್ಟಕಾರ್ಪಣ್ಯ ಬಗೆಹರಿಸುವ ಮನಸ್ಸಿಲ್ಲ. ಮೊದಲು ರೈತ ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಕೊಡಿ ಎಂದು ಆಗ್ರಹಿಸಿದೆ.

    ರಾಜ್ಯ ಸರ್ಕಾರದ ವಿರುದ್ಧ ‘ಪೇಸಿಎಂ’ ಪೋಸ್ಟರ್​ ಅಂಟಿಸಿ ಅಭಿಯಾನ ನಡೆಸಿದ ಕಾಂಗ್ರೆಸ್​​ ವಿರುದ್ಧ ಕೆಂಡಾಮಂಡಲವಾಗಿರುವ ಬಿಜೆಪಿ, ಇದಕ್ಕೆ ಪ್ರತಿಯಾಗಿ ಪೇಟಿಎಂ ಕ್ಯೂ ಆರ್ ಕೋಡ್ ಮಾದರಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಫೋಟೋ ಹಾಕಿ ‘ರಾಜ್ಯವನ್ನ ಲೂಟಿ ಮಾಡಿ ಹಾಳು ಮಾಡಿರುವ ಈ ಭ್ರಷ್ಟ ಜೋಡಿಯನ್ನ ರಾಜ್ಯದಿಂದ ಕಿತ್ತೆಸೆಯಲು ಇದನ್ನ ಸ್ಕ್ಯಾನ್ ಮಾಡಿ ಎಂದಿತ್ತು. ‘ಸ್ಕ್ಯಾಮ್ ರಾಮಯ್ಯ’ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಮಾಡಿ ಆಕ್ರೋಶ ಹೊರ ಹಾಕಿತ್ತು. ಅಲ್ಲದೆ ಸೋನಿಯಾ ಗಾಂಧಿ ಅವರ ಫೋಟೋ ಸಹಿತ ‘ಪೇ ಟು ಮೇಡಂ’ ಪೋಸ್ಟರ್ ಬಿಡುಗಡೆ ಮಾಡಿತ್ತು. ಆದರೂ ಸುಮ್ಮನಾಗದ ಕಾಂಗ್ರೆಸ್​ನಲ್ಲಿ ಸದನದಲ್ಲಿ 40% ಕಮಿಷನ್​ ಎಂದು ಬರೆದಿದ್ದ ಪ್ಲಕಾರ್ಡ್​ ಹಿಡಿದು ಧರಣಿ ನಡೆಸಿತ್ತು. ಆದರೂ ಈ ಎರಡೂ ಪಕ್ಷಗಳ ವಾರ್​ ನಿಂತಿಲ್ಲ. ಇದೀಗ ಈ ಎರಡೂ ಪಕ್ಷಕ್ಕೂ ಚಾಟಿ ಬೀಸಿರುವ ರೈತ ಸಂಘ, ‘PAY FARMER’ ಅಭಿಯಾನ ಶುರು ಮಾಡಿದೆ.

    ರೈತ ಸಂಘದಿಂದ PAY FARMER ಅಭಿಯಾನ ಶುರು: ಕಾಂಗ್ರೆಸ್​-ಬಿಜೆಪಿಗೆ ಹಿಗ್ಗಾಮುಗ್ಗಾ ತರಾಟೆ

    ರಾಜಕೀಯ ನಾಯಕರೇ ನೀವೆಲ್ಲ ಒಂದೇ ನಾಣ್ಯದ ಎರಡು ಮುಖಗಳೇ. ನಿಮ್ಮಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ರೈತರ ಕಷ್ಟಕಾರ್ಪಣ್ಯ ಬಗೆಹರಿಸುವ ಮನಸ್ಸಿಲ್ಲ. ಕೆಲವರು ಅಧಿಕಾರಕ್ಕೆರಲು ಸರ್ಕಸ್ ಮಾಡ್ತಿದ್ದೀರಿ. ಇನ್ನೂ ಕೆಲವರು ಅಧಿಕಾರ ಉಳಿಸಿಕೊಳ್ಳಲು ಸರ್ಕಸ್ ಮಾಡ್ತಿದ್ದೀರಿ. ಇವರಿಗೆ ಮತ ಹಾಕಿದ ರೈತರು ಮಾತ್ರ ಸಂಕಷ್ಟ ಜೀವನ‌ ನಡೆಸ್ತಿದ್ದಾರೆ. ಮೊದಲು ರೈತ ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಕೊಡಿ. ಒಂದು ಟನ್ ಕಬ್ಬಿಗೆ 4500 ರೂ‌. ನಿಗದಿ ಮಾಡಿ ಎಂದು ಆಗ್ರಹಿಸಿದೆ.

    ಕರ್ನಾಟಕ ರಾಜ್ಯ ರೈತ ಸಂಘದ ಫೇಸ್​ಬುಕ್​ ಪೇಜ್​ನಲ್ಲೂ ಪೋಸ್ಟರ್​ ಹಾಕಲಾಗಿದೆ. ಆರ್ಗ್ಯಾನಿಕ್​ ಮಂಡ್ಯ ಸಂಸ್ಥೆಯ ಸಂಸ್ಥಾಪಕ, ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಅಧ್ಯಕ್ಷ ಎಸ್​.ಸಿ. ಮಂಧುಚಂದನ್​ ಅವರು ಕೂಡ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ‘PAY FARMER’ ಪೋಸ್ಟರ್​ ಹಾಕಿ ಸರ್ಕಾರ ಮತ್ತು ಕಾಂಗ್ರೆಸ್​ ಅನ್ನು ಚಿವುಟಿದ್ದಾರೆ.

    ‘PAYCM’ ಕಾಂಗ್ರೆಸ್ ಅಭಿಯಾನಕ್ಕೆ ಬಿಜೆಪಿ ಕೌಂಟರ್: ಸಿದ್ದು-ಡಿಕೆಶಿ ಫೋಟೋ ಹಾಕಿ ಅಣಕಿಸಿದ ಕಮಲಪಡೆ

    ‘ಪೇಸಿಎಂ’ ಪೋಸ್ಟರ್​ಗೆ ಪ್ರತಿಯಾಗಿ ‘ಸ್ಕ್ಯಾಮ್ ರಾಮಯ್ಯ’ ಪುಸ್ತಕ ಬಿಡುಗಡೆ ಮಾಡಿದ ಬಿಜೆಪಿ

    ಪೇಸಿಎಂ ಪೋಸ್ಟರ್​ ಪ್ರಕರಣ, ಸದನದಲ್ಲಿ ಕೋಲಾಹಲ: ಮಾಸ್ಕ್​, ಪ್ಲಕಾರ್ಡ್​ ಪ್ರದರ್ಶಿಸಿ ಕಾಂಗ್ರೆಸ್​-ಬಿಜೆಪಿ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts