ಪೇಸಿಎಂ ಪೋಸ್ಟರ್​ ಪ್ರಕರಣ, ಸದನದಲ್ಲಿ ಕೋಲಾಹಲ: ಮಾಸ್ಕ್​, ಪ್ಲಕಾರ್ಡ್​ ಪ್ರದರ್ಶಿಸಿ ಕಾಂಗ್ರೆಸ್​-ಬಿಜೆಪಿ ಪ್ರತಿಭಟನೆ

ಬೆಂಗಳೂರು: ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಪರಸ್ಪರ ಕ್ಯೂಆರ್​ ಕೋಡ್​ ಸಹಿತ ಪೋಸ್ಟರ್​ಗಳನ್ನು ತಯಾರಿಸಿ ಹೈಟೆಕ್​ ಪ್ರಚಾರಕ್ಕೆ ಇಳಿದಿದ್ದ ಪ್ರಕರಣ ಗುರುವಾರ ಅಧಿವೇಶನಕ್ಕೂ ವ್ಯಾಪಿಸಿದೆ. ಕಾಂಗ್ರೆಸ್​-ಬಿಜೆಪಿ ನಡುವಿನ ಆರೋಪ-ಪ್ರತ್ಯಾರೋಪ ಮುಂದುವರಿದಿದ್ದು, ಮೇಲ್ಮನೆಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಕಾಂಗ್ರೆಸ್​ ಸದಸ್ಯರು ಪ್ಲೇಕಾರ್ಡ್ ಪ್ರದರ್ಶಶಿಸುತ್ತಾ ಇದು 40% ಸರ್ಕಾರ ಎಂದು ಧರಣಿ ನಡೆಸಿದರು. ಅತ್ತ ಬಿಜೆಪಿ ಸದಸ್ಯರೂ ಕಾಂಗ್ರೆಸ್ ವಿರುದ್ಧ ಏರು ಧ್ವನಿಯಲ್ಲಿ ಭ್ರಷ್ಟ-ಲೂಟಿಕೋರ ಪಕ್ಷವೆಂದು ಕೂಗಿದರು. ರಮೇಶ್ ಕುಮಾರ್ ಹೇಳಿದ್ದು ಸತ್ಯವೆಂದು ಕುಟುಕಿದರು‌. ‘40% ಸರ್ಕಾರ- ಬಿಜೆಪಿ ಅಂದ್ರೆ ಭ್ರಷ್ಟಾಚಾರ’ ಎಂಬ … Continue reading ಪೇಸಿಎಂ ಪೋಸ್ಟರ್​ ಪ್ರಕರಣ, ಸದನದಲ್ಲಿ ಕೋಲಾಹಲ: ಮಾಸ್ಕ್​, ಪ್ಲಕಾರ್ಡ್​ ಪ್ರದರ್ಶಿಸಿ ಕಾಂಗ್ರೆಸ್​-ಬಿಜೆಪಿ ಪ್ರತಿಭಟನೆ