More

    ಗ್ರಾಮಲೆಕ್ಕಿಗನ ಜತೆ ಮದ್ವೆಯಾದ ತಹಸೀಲ್ದಾರ್ ಗೀತಾ! ಮೊದಲ ಪತ್ನಿ ಎಂಟ್ರಿ ಕೊಡುತ್ತಿದ್ದಂತೆ ಡಿಸಿ ಅಂಗಳಕ್ಕೆ ವಿವಾದ

    ಚಿಕ್ಕಮಗಳೂರು: ಎನ್.ಆರ್.ಪುರ ತಹಸೀಲ್ದಾರ್ ಸಿ.ಜಿ.ಗೀತಾ ಅವರ ವಿವಾಹ ವಿವಾದಕ್ಕೀಡಾಗಿದ್ದು, ಜಿಲ್ಲಾಧಿಕಾರಿ ಅಂಗಳ ತಲುಪಿದೆ. ತಹಸೀಲ್ದಾರ್ ಗೀತಾ ಅವರು ತರೀಕೆರೆ ಗ್ರಾಮಲೆಕ್ಕಿಗ ಡಿ.ಟಿ.ಶ್ರೀನಿಧಿ ಎಂಬುವರನ್ನು ತಾಲೂಕಿನ ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದಾರೆ ಎನ್ನಲಾಗಿದ್ದು, ಶ್ರೀನಿಧಿ ಅವರ ಮೊದಲ ಪತ್ನಿ ಟಿ.ಆರ್.ಲೀಲಾ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

    ಈ ಸಂಬಂಧ ಗೀತಾಗೆ ಕಾರಣ ಕೇಳಿ ಡಿಸಿ ಕೆ.ಎನ್. ರಮೇಶ್ ನೋಟಿಸ್ ನೀಡಿದ್ದಾರೆ. ಸಿ.ಜಿ.ಗೀತಾ ಅವರನ್ನು ಜು.19ರಂದು ವಿವಾಹವಾಗಿದ್ದಾರೆ. ಆದರೆ, ಶ್ರೀನಿಧಿ 2006ರಲ್ಲೇ ನನ್ನನ್ನು ದಾವಣಗೆರೆ ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅವರು ನನಗೆ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಕಾರಣ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೆ. ನಂತರ ಇಬ್ಬರೂ ಒಟ್ಟಾಗಿದ್ದೆವು ಎಂದು ಲೀಲಾ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಮಧ್ಯೆ ಶ್ರೀನಿಧಿ ಅವರು ಲೀಲಾರಿಂದ ವಿವಾಹ ವಿಚ್ಛೇದನ ಕೋರಿ ಕಡೂರು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಲೀಲಾ ನೀಡಿರುವ ಮನವಿ ವಿಚಾರವು ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮ-2021ರ ವ್ಯಾಪ್ತಿಗೆ ಬರುವುದರಿಂದ ಉತ್ತರ ನೀಡುವಂತೆ ಗೀತಾಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ.

    ಬೆಂಗಳೂರಿನ ದುರಂತ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಮತ್ತೊಂದು ಕುಟುಂಬ ಆತ್ಮಹತ್ಯೆ!

    ನನ್ನ ತಂದೆ​ಗೆ ಹಲವು ಕಾಲ್​ಗರ್ಲ್​​ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್​ ಮಾಡ್ತಿದ್ದ…

    ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts