More

    ನಿಖಿಲ್ ಕುಮಾರಸ್ವಾಮಿ ಪುತ್ರ ಅವ್ಯಾನ್​ ದೇವ್​… ತಾಯಿ ರೇವತಿ ಸೆಲೆಕ್ಟ್​ ಮಾಡಿದ ಈ ಹೆಸರಿನ ಅರ್ಥ ಇಲ್ಲಿದೆ

    ಬೆಂಗಳೂರು: ನಿಖಿಲ್​ ಕುಮಾರಸ್ವಾಮಿ ಮತ್ತು ರೇವತಿ ದಂಪತಿ ಪುತ್ರನ ನಾಮಕರಣ ಶಾಸ್ತ್ರೋಕ್ತವಾಗಿ ಬೆಂಗಳೂರಿನ ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬುಧವಾರ ನೆರವೇರಿತು. ಕುಟುಂಬಸ್ಥರ ಸಮ್ಮುಖದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮರಿ ಮೊಮ್ಮಗನಿಗೆ ‘ಅವ್ಯಾನ್ ದೇವ್ ಎನ್​.ಕೆ.’ ಎಂದು ಹೆಸರಿಡಲಾಗಿದೆ. ‘ಅವ್ಯಾನ್​’ ಹೆಸರಿನ ಅರ್ಥವೇನು? ‘ದೇವ್​’ ಎಂದರೆ ದೇವೇಗೌಡರ ಹೆಸರೇ? ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳು ಮತ್ತು ಜನರ ಮನದಲ್ಲಿ ಮೂಡಿದೆ. ಹಲವರು ಈ ಹೆಸರಿನ ಅರ್ಥವನ್ನು ಗೂಗಲ್​ನಲ್ಲಿ ಹುಡುಕಾಡಿದ್ದಾರೆ. ನಾಮಕರಣ ಮುಗಿದ ಬಳಿಕ ಈ ಹೆಸರಿನ ಅರ್ಥವನ್ನು ನಿಖಿಲ್​ ಅವರೇ ಸುದ್ದಿಗಾರರ ಬಳಿ ವಿವರಿಸಿದ್ದಾರೆ.

    ಅವ್ಯಾನ್ ದೇವ್ ದೇವರ ಹೆಸರು. ಅದೃಷ್ಟದಿಂದ ಜನಿಸಿದವನು ಎಂದು ಸೂಚಿಸುತ್ತದೆ. ಅವ್ಯಾನ್​ ಅಂದ್ರೆ ಗಣೇಶ ಮತ್ತು ವಿಷ್ಣು ದೇವರ ಮತ್ತೊಂದು ಹೆಸರು. ನನ್ನ ಹೆಂಡತಿಯೇ ಈ ಹೆಸರನ್ನು ಹುಡುಕಿರೋದು. ನನ್ನ ತಂದೆ-ತಾಯಿ ಮತ್ತು ಅಜ್ಜಿ-ತಾತನನ್ನು ಕೇಳಿ ನಂತರ ಈ ಹೆಸರನ್ನು ಫೈನಲ್ ಮಾಡಿದ್ದು. ನ್ಯೂಮರಾಲಜಿಯಲ್ಲೂ ಈ ಹೆಸರು ಮ್ಯಾಚ್​ ಆಯ್ತು. ನಮ್ಮ ತಾತನ ಮೇಲಿನ ಭಾವನಾತ್ಮಕ ಫೀಲ್​ನಿಂದ ನನ್ನ ಮಗನ ಹೆಸರಲ್ಲಿ ದೇವ್​ ಅಂತಾನೂ ಸೇರಿಸಿದ್ದೇನೆ ಎಂದು ನಿಖಿಲ್​ ವಿವರಿಸಿದರು.

    ನಿಖಿಲ್ ಕುಮಾರಸ್ವಾಮಿ ಪುತ್ರ ಅವ್ಯಾನ್​ ದೇವ್​... ತಾಯಿ ರೇವತಿ ಸೆಲೆಕ್ಟ್​ ಮಾಡಿದ ಈ ಹೆಸರಿನ ಅರ್ಥ ಇಲ್ಲಿದೆ

    2021ರ ಸೆಪ್ಟೆಂಬರ್​ 24ರಂದು ಅವ್ಯಾನ್​ ದೇವ್​ ಜನಿಸಿದ್ದು, ಬೆಂಗಳೂರಿನ ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬುಧವಾರ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರಿದಂತೆ ದೇವೇಗೌಡರ ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಕಾರ್ಯಕ್ರಮ ನೆರವೇರಿತು.

    ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ ಶಾಸ್ತ್ರ: ದೇವೇಗೌಡರ ಮರಿಮೊಮ್ಮಗನ ಹೆಸರು ಹೀಗಿದೆ

    ‘ಸಿಎಂ ಮಗ ಸಿಎಂ ಆದ್ರೆ ತಪ್ಪೇನು? ವಿಜಯೇಂದ್ರ ಮುಖ್ಯಮಂತ್ರಿ ಆಗಲಿ…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts