More

    ಪಿಯು ವಿದ್ಯಾರ್ಥಿಗಳಿಗೆ ಮುಳುವಾಯ್ತು ರಾಷ್ಟ್ರಮಟ್ಟದ ಕ್ರೀಡೆ?

    | ಸೋರಲಮಾವು ಶ್ರೀಹರ್ಷ ತುಮಕೂರು
    ಕಳೆದ ವರ್ಷ ಪ್ರಥಮ ಪಿಯು ಓದುವಾಗ ಸರ್ಕಾರದ ಅನುಮತಿಯೊಂದಿಗೆ ವಾರ್ಷಿಕ ಪರೀಕ್ಷೆಯಿಂದ ವಿನಾಯಿತಿ ಪಡೆದು ರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ್ದ ಇಂದಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಭವಿಷ್ಯವೀಗ ಅತಂತ್ರವಾಗಿದೆ.

    ಪ್ರಥಮ ಪಿಯು ಪರೀಕ್ಷೆ ಬರೆಯದೆ ತೇರ್ಗಡೆಯಾಗಿರುವ ಕ್ರೀಡಾ ಸಾಧಕ ವಿದ್ಯಾರ್ಥಿಗಳು ಪ್ರಸ್ತುತ ಸರ್ಕಾರದ ಹೊಸ ಮಾನದಂಡದಲ್ಲಿ ದ್ವಿತೀಯ ಪಿಯು ತೇರ್ಗಡೆ ಮಾಡಲಾಗಿದ್ದರೂ ಅಂಕ ನೀಡುವಲ್ಲಿ ನಿಯಮಗಳು ಅಡ್ಡಿಯಾಗಿದ್ದು ರಾಜ್ಯದೆಲ್ಲೆಡೆ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ.

    ದೇಶದಲ್ಲಿ ಕರೊನಾ ಪ್ರವೇಶಿಸುವ ಮುಂಚೆಯೇ ರಾಜ್ಯದಲ್ಲಿ ಪ್ರಥಮ ಪಿಯು ವಾರ್ಷಿಕ ಪರೀಕ್ಷೆ ನಡೆಸಲಾಗಿತ್ತು, ಈ ಸಂದರ್ಭದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 2020ರ ಫೆಬ್ರವರಿಯಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಚಟುವಟಿಕೆಗಳು ನಡೆದಿದ್ದರಿಂದ ಕರೊನಾ ಮುನ್ಸೂಚನೆ ಅರಿಯದೇ ಕ್ರೀಡೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿತ್ತು.

    ತುಮಕೂರಿನ ಸವೋದಯ ಪಿಯು ಕಾಲೇಜಿನಿಂದ ಖೋ-ಖೋ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 4 ವಿದ್ಯಾರ್ಥಿಗಳು ಕ್ರೀಡೆ ಮುಗಿಸಿ ವಾಪಸಾದಾಗ ಕರೊನಾ ಲಾಕ್​ಡೌನ್ ಘೋಷಣೆಯಾಗಿದ್ದರಿಂದ ಪ್ರತ್ಯೇಕವಾಗಿ ಪೂರಕ ಪರೀಕ್ಷೆ ನಡೆಸಲು ಸಮಯಾವಕಾಶವೇ ಸಿಗಲಿಲ್ಲ. ಪಿಯು ಮಂಡಳಿ ಈ ವಿದ್ಯಾರ್ಥಿಗಳನ್ನು ಪ್ರಥಮ ಪಿಯುನಲ್ಲಿ ಕನಿಷ್ಠ ಅಂಕ ನೀಡಿ ಸಾಮೂಹಿಕ ತೇರ್ಗಡೆ ಮಾಡಿತ್ತು. ಪ್ರಸ್ತುತ ದ್ವಿತೀಯ ಪಿಯು ಫಲಿತಾಂಶದ ಮಾನದಂಡಗಳು ಕ್ರೀಡಾ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುವಂತಿದೆ.

    ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸಲು ಎಸ್ಸೆಸ್ಸೆಲ್ಸಿ ಹಾಗೂ ಪ್ರಥಮ ಪಿಯು ವಾರ್ಷಿಕ ಪರೀಕ್ಷೆ ಅಂಕಗಳನ್ನು ಮಾನದಂಡವಾಗಿ ತೆಗೆದುಕೊಂಡಿದ್ದು ವಿದ್ಯಾರ್ಥಿಗಳ ಪಟ್ಟಿ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಪ್ರಥಮ ಪಿಯು ವಾರ್ಷಿಕ ಪರೀಕ್ಷೆ ತಪ್ಪಿಸಿಕೊಂಡು ಪೂರಕ ಪರೀಕ್ಷೆಯೂ ಇಲ್ಲದೆ, ಸಾಮೂಹಿತ ತೇರ್ಗಡೆಯಲ್ಲಿ ಕನಿಷ್ಟ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪಟ್ಟಿ ನೋಡಿ ದಿಗ್ಭ್ರಮೆಯಾಗಿದೆ.

    ಖೋ-ಖೋ ರಾಜ್ಯಮಟ್ಟದಲ್ಲಿ ಗೆದ್ದ ನಾವು ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಸಂದರ್ಭದಲ್ಲಿಯೇ ಪ್ರಥಮ ಪಿಯು ವಾರ್ಷಿಕ ಪರೀಕ್ಷೆ ನಡೆದಿತ್ತು, ನಾವು ವಾಪಸಾದ ನಂತರ ಪರೀಕ್ಷೆ ನಡೆಸಲು ಕರೊನಾ ಅವಕಾಶ ನೀಡಲಿಲ್ಲ, ಆಡಳಿತ ಮಂಡಳಿ ಒಪ್ಪಿಗೆಯ ಮೇರೆಗೆ ನಾನು ಕ್ರೀಡೆಯಲ್ಲಿ ಭಾಗವಹಿಸಿದ್ದು, ಪ್ರಥಮ ಪಿಯು ಪರೀಕ್ಷೆಯಲ್ಲಿ ನಮ್ಮನ್ನು ಅನುತೀರ್ಣ ಎಂದು ಪರಿಗಣಿಸಿ ಈಗ ಕೇವಲ ಪಾಸ್ ಮಾಡಿರುವುದು ಅನ್ಯಾಯ.
    | ಧನುಷ್ ದ್ವಿತೀಯ ಪಿಯು ವಿದ್ಯಾರ್ಥಿ, ಸವೋದಯ ಕಾಲೇಜು ತುಮಕೂರು
     
    ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮದ ಕಾರಣಕ್ಕೆ ವಾರ್ಷಿಕ ಪರೀಕ್ಷೆಗೆ ಗೈರಾಗಲು ಇಲಾಖೆಯಲ್ಲಿ ವಿನಾಯಿತಿ ಇರುವುದಿಲ್ಲ, ಪೂರಕ ಪರೀಕ್ಷೆ ನಡೆಯದ ಕಾರಣಕ್ಕೆ ಈ ಮಕ್ಕಳಿಗೆ ಕನಿಷ್ಠ ಅಂಕ ಕೊಟ್ಟು ತೇರ್ಗಡೆಯ ಅವಕಾಶವಿದೆ. ಸಧ್ಯಕ್ಕಿರುವ ನಿಯಮಗಳ ಪ್ರಕಾರ ಅಂಕ ಕಡಿಮೆ ಎನಿಸಿದರೆ ಮಕ್ಕಳು ದ್ವಿತೀಯ ಪರೀಕ್ಷೆ ಬರೆಯಲು ಅವಕಾಶ ಇದ್ದೇಇದೆ, ಬಳಸಿಕೊಳ್ಳಬಹುದು.
    | ಎಚ್.ಕೆ.ನರಸಿಂಹಮೂರ್ತಿ ಡಿಡಿಪಿಯು, ತುಮಕೂರು

    ಪಿಎಸ್​ಐ ಆಗಿರುವ ತಾಯಿ ವಿರುದ್ಧವೇ ಗದಗ ಎಸ್​ಪಿಗೆ ದೂರು ಕೊಟ್ಟ ಯುವತಿ!

    ಅರುಣಾಕುಮಾರಿಯ ಪ್ರೇಮ್​ಕಹಾನಿ ಬಿಚ್ಚಿಟ್ಟ ನಟ ದರ್ಶನ್​! 9 ವರ್ಷ ಚಿಕ್ಕವನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳಂತೆ…

    ಎರಡು ಜರ್ಮನ್​ ಶಫರ್ಡ್​ ನಾಯಿಗಳಿಗೆ ಮರಣದಂಡನೆ! ಈ ತಪ್ಪಿಗೆ ಇಂಥಾ ಘೋರ ಶಿಕ್ಷೆನಾ?

    ಮೃತನ ದರ್ಶನಕ್ಕೂ ಬಂದಿದ್ದ ವಾನರ, ತಿಥಿ ಕಾರ್ಯದಲ್ಲೂ ಭಾಗಿ!

    ಭಿಕ್ಷೆ ಬೇಡುತ್ತಿದ್ದ ವೃದ್ಧೆಗೆ ಅಚ್ಛೇ ದಿನ್​! ನೆಲಮಂಗಲ ತಹಸೀಲ್ದಾರ್ ಮಂಜುನಾಥ್​ರ ಕಾರ್ಯಕ್ಕೊಂದು ಸಲಾಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts