More

    ಫ್ರಾನ್ಸ್​ಗೆ ನರೇಂದ್ರ ಮೋದಿ ಭೇಟಿ: ಮಹತ್ತರ ವಿಚಾರಗಳ ಬಗ್ಗೆ ಉಭಯ ನಾಯಕರ ಸಮಾಲೋಚನೆ

    ನವದೆಹಲಿ: ಮೂರು ದಿನಗಳ ಯುರೋಪ್​ ಪ್ರವಾಸದ ಕೊನೆಯಲ್ಲಿ ಬುಧವಾರ ರಾತ್ರಿ ಫ್ರಾನ್ಸ್​ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್​ ಮ್ಯಾಕ್ರಾನ್​ರ ಜತೆ ಜಾಗತಿಕ ಮಹತ್ವದ ವಿಚಾರಗಳ ಕುರಿತು ಮಾತುಕತೆ ನಡೆಸಿದರು. ರಕ್ಷಣಾ ಸಹಕಾರ, ಬಾಹ್ಯಾಕಾಶ, ಆರ್ಥಿಕತೆ, ನಾಗರಿಕ ಪರಮಾಣು ಸೇರಿದಂತೆ ದ್ವಿಪಕ್ಷೀಯ ಒಪ್ಪಂದಗಳ ಬಗ್ಗೆ ಉಭಯ ನಾಯಕರು ಸಮಾಲೋಚನೆ ನಡೆಸಿದರು.

    ಈ ಕುರಿತು ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿರುವ ನರೇಂದ್ರ ಮೋದಿ, ಫ್ರಾನ್ಸ್​ ಅಧ್ಯಕರ ಜತೆ ದ್ವಿಪಕ್ಷೀಯ ಹಾಗೂ ಜಾಗತಿಕ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದೇವೆ. ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯನ್ನಾಗಿ ಮಾಡುವಲ್ಲಿ ಒಟ್ಟಾಗಿ ಕೆಲಸ ಮಾಡುವ ಮಾರ್ಗಗಳ ಕುರಿತು ಚರ್ಚಿಸಲಾಯಿತು. ಫ್ರಾನ್ಸ್‌ಗೆ ನನ್ನ ಭೇಟಿ ಫಲಪ್ರದವಾಗಿದ್ದು, ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶ ಸಿಕ್ಕಿತು. ಆತ್ಮೀಯ ಆತಿಥ್ಯ ನೀಡಿದ ಫ್ರಾನ್ಸ್​ ಅಧ್ಯಕ್ಷರು ಮತ್ತು ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

    ಫ್ರೆಂಚ್ ಅಧ್ಯಕ್ಷರು ಮತ್ತು ನಿಯೋಗ ಮಟ್ಟದ ಸಭೆಯಲ್ಲಿ ಯೂಕ್ರೇನ್​ ಹಾಗೂ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಬಗ್ಗೆಯೂ ಚರ್ಚಿಸಲಾಯಿತು. ಯೂಕ್ರೇನ್​ ಮೇಲೆ ರಷ್ಯಾ ದಾಳಿ ಕುರಿತು ಅಸಮಾಧನ ಹೊರಹಾಕಿದ ಫ್ರಾನ್ಸ್​ ಅಧ್ಯಕ್ಷ, ಕಾನೂನುಬಾಹಿರ ಮತ್ತು ಅಪ್ರಚೋದಿತ ಆಕ್ರಮಣವನ್ನು ಖಂಡಿಸಿದರು.

    ಯೂಕ್ರೇನ್​ನಿಂದ ಬಂದ ವಿದ್ಯಾರ್ಥಿಗಳಿಗೆ ಸಿದ್ದಲಿಂಗ ಶ್ರೀಗಳು ನೆರವು: ಸಿದ್ಧಗಂಗಾ ಮೆಡಿಕಲ್​ ಕಾಲೇಜಿನಲ್ಲಿ ಉಚಿತ ಶಿಕ್ಷಣ

    IFS​ ಅಧಿಕಾರಿ ಶ್ರೀನಿವಾಸ್​ಗೆ ಭಾವನಾತ್ಮಕ ಗೌರವ! ವೀರಪ್ಪನ್​ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಿದ್ದ ಜೀಪು ಈಗ ‘ಸ್ಮಾರಕ’

    ನಾದಿನಿ ಜತೆ ಸರಸವಾಡಲು ಪತ್ನಿಯನ್ನೇ ಕೊಂದ! ವಿಚಾರಣೆ ವೇಳೆ ಬಯಲಾಯ್ತು ಅಸಹ್ಯ… ನೆಲಮಂಗಲದಲ್ಲಿ ಹೀನ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts