More

    ‘ನಡೆದಾಡೋ ದೇವರ ಬಸವ ಭಾರತ’ ಕಿರುಚಿತ್ರ ಏ.1ಕ್ಕೆ ಉದ್ಘಾಟನೆ​: ಸಿದ್ಧಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್​ ಬಚ್ಚನ್?

    ಬೆಂಗಳೂರು: ತ್ರಿವಿಧ ದಾಸೋಹಿ, ಶ್ರೀ ಸಿದ್ಧಗಂಗಾ ಕ್ಷೇತ್ರದ ಲಿಂ. ಡಾ.ಶಿವಕುಮಾರ ಸ್ವಾಮೀಜಿ ಅವರ ಜೀವನಾಧಾರಿತ ಕಿರುಚಿತ್ರ ನಿರ್ಮಾಣವಾಗುತ್ತಿದೆ. ಈ ಮಿನಿ ಸಿನಿ ಸರಣಿಯಲ್ಲಿ ಸಿದ್ಧಗಂಗಾ ಶ್ರೀಗಳ ಪಾತ್ರಕ್ಕೆ ಯಾರು ಬಣ್ಣ ಹಚ್ಚುತ್ತಾರೆ? ಎಂಬ ಕುತೂಹಲ ಭಕ್ತರು ಮಾತ್ರವಲ್ಲ, ದೇಶದ ಕೋಟ್ಯಂತರ ಮನದಲ್ಲಿ ಮೂಡಿದೆ. ಶ್ರೀಗಳ ಪಾತ್ರಧಾರಿಯಾಗಿ ಯಾರು ಅಭಿನಯಿಸಲಿದ್ದಾರೆ ಎಂಬ ಸುಳಿವನ್ನೂ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಕೊಟ್ಟಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಹಂಸಲೇಖ, ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜೀವನ ಆಧಾರಿತ ಕಿರುಚಿತ್ರವು 52 ಸರಣಿಗಳನ್ನು ಒಳಗೊಂಡಿದೆ. ಒಟ್ಟು 1 ಗಂಟೆ ಅವಧಿಯ ಕಿರುಚಿತ್ರ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ, ಇಂಗ್ಲಿಷ್​, ಸಂಸ್ಕೃತ ಭಾಷೆಗಳಲ್ಲಿ ಮೂಡಿಬರಲಿದೆ. ರುದ್ರಾ ಕಿರುಚಿತ್ರ ಸಂಸ್ಥೆ ನಿರ್ಮಿಸಿರುವ ಈ ಕಿರುಚಿತ್ರವನ್ನು ಐದನಿ ಎಂಟರ್​ಟೇನ್ಮೆಂಟ್​ ನಿರ್ವಹಣೆ ಮಾಡಲಿದೆ. ‘ನಡೆದಾಡೋ ದೇವರ ಬಸವ ಭಾರತ’ ಕಿರುಚಿತ್ರ ಸರಣಿಯನ್ನು ತುಮಕೂರು ಸಿದ್ಧಗಂಗಾ ಮಠದಲ್ಲಿ ಏ.1ರಂದು ನಡೆಯುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ಬಿಡುಗಡೆ ಮಾಡಲಿದ್ದಾರೆ ಎಂದು ವಿವರಿಸಿದರು. ಇನ್ನು ಈ ಕಿರುಚಿತ್ರ ಸರಣಿಯಲ್ಲಿ ಶ್ರೀಗಳ ಪಾತ್ರಧಾರಿಯಾಗಿ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್ ಅಭಿನಯಿಸುವ ಸಾಧ್ಯತೆ ಇದೆ. ಅವರಿಂದ ಕಾಲ್​ಶೀಟ್​ಗಾಗಿ ಕಾಯುತ್ತಿದ್ದೇವೆ ಎಂದರು.

    ಬಸವಣ್ಣನ ಸಿದ್ಧಾಂತ ಚಲಾವಣೆಗೆ ತಂದವರು: ಶ್ರೀ ಶಿವಕುಮಾರ ಸ್ವಾಮೀಜಿ ಅವರದ್ದು ಸುಂದರವಾದ, ಸಹಜವಾದ, ವಾಸ್ತವದ ಬದುಕು. ವಿದ್ಯೆ, ದಾಸೋಹ, ಶಿಸ್ತು, ಅವಿರೋಧವಾಗಿ ಬದುಕುವುದು ಹಾಗೂ ರಾಷ್ಟ್ರವನ್ನು ಕಟ್ಟುವುದು ಅವರ ಗುರಿಯಾಗಿತ್ತು. ಅವರು ಎಲ್ಲೂ ತಮ್ಮ ಸಾಧನೆಗಳನ್ನು ಹೇಳಿಕೊಂಡಿರಲಿಲ್ಲ. ಹೀಗಾಗಿ, ಅವರ ಜೀವನ ಚರಿತ್ರೆ ಆಧರಿಸಿ ಕಿರುಚಿತ್ರ ಮಾಡುವುದು ಕಷ್ಟ ಎಂದುಕೊಂಡಿದ್ದೆ. ಶಿವಕುಮಾರ ಸ್ವಾಮೀಜಿ ಹೇಗೆ ಬದುಕಿದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಅವರು ಬಸವಣ್ಣನವರ ಸಿದ್ಧಾಂತವನ್ನು ಪ್ರಾಯೋಗಿಕವಾಗಿ ಕನ್ನಡ ನಾಡಿನಲ್ಲಿ ಚಲಾವಣೆ ಮಾಡಿದವರು. ಯಾವುದೇ ವೈರುಧ್ಯಗಳನ್ನು ಅಂಟಿಸಿಕೊಳ್ಳದೆ ಬಸವ ಎಂದರೆ ಶಿಕ್ಷಣ, ಸುಧಾರಣೆ, ಕಾಯಕ, ವಚನ ಪಾಲನೆ ಎಂಬುದನ್ನು ಹೇಳುತ್ತಿದ್ದರು. ಬಸವಣ್ಣನವರ ಮುಂದುವರಿದ ಭಾಗವೇ ಶಿವಕುಮಾರ ಸ್ವಾಮೀಜಿ ಎಂಬುದನ್ನು ಅವರ ಕುರಿತ ಎಲ್ಲ ಸಾಹಿತ್ಯಗಳಲ್ಲೂ ಹೇಳಲಾಗಿದೆ. ರಾಷ್ಟ್ರವು ಆಧ್ಯಾತ್ಮಪೂರ್ಣ, ಪ್ರಜ್ಞಾಪೂರ್ಣದಿಂದ ನಡೆಯುತ್ತಿರುವ ಪ್ರಜಾಪ್ರಭುತ್ವವಾಗಬೇಕು ಎಂಬುದು ಅವರ ಹೇಳಿಕೆಗಳಲ್ಲಿತ್ತು. ಶಿವಕುಮಾರ ಸ್ವಾಮೀಜಿ ಕಂಡ ಚರಿತ್ರೆ ಏನು ? ಆ ಚರಿತ್ರೆ ಕಂಡ ಪುರಾಣಗಳೇನು? ಎಂಬ ಅಂಶಗಳನ್ನು ಸೇರಿಸಿ “ನಡೆದಾಡೋ ದೇವರ&ಬಸವ ಭಾರತ’ ಕಿರುಚಿತ್ರ ನಿಮಿರ್ಸಲಾಗಿದೆ ಎಂದು ಹಂಸಲೇಖ ಹೇಳಿದರು.

    ಬಸವಣ್ಣನ ಬಗ್ಗೆ ಅನೇಕ ಚಿತ್ರಗಳನ್ನು ರಚನೆ ಮಾಡಲಾಗಿದೆ. ಆ ಚಿತ್ರಗಳನ್ನು ನೋಡಿದಾಗ ಬಹಳ ನೋವಾಗುತ್ತದೆ. ಬಸವಣ್ಣನ ಆದರ್ಶಗಳು, ವ್ಯಕ್ತಿತ್ವಗಳನ್ನು ಅಧ್ಯಯದಿಂದ ಅರ್ಥ ಮಾಡಿಕೊಂಡವರಿಗೆ ಅವರನ್ನು ಕುಬ್ಜವಾಗಿ ಚಿತ್ರಿಸಿದ್ದಾರೆ ಎಂಬ ಪರಿಕಲ್ಪನೆ ಬರುತ್ತದೆ. ಆದರೆ, ಸಿದ್ಧಗಂಗಾ ಸ್ವಾಮೀಜಿ ಉತ್ತಮ ಹಸ್ತದಲ್ಲಿ ಸಿಲುಕಿದ್ದಾರೆ. ಇದು ಚರಿತ್ರೆಯಲ್ಲಿ ಗಟ್ಟಿಯಾಗಿ ಉಳಿಯುವಂತಹ ಪ್ರಯತ್ನವಾಗಿದೆ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್​ ತಿಳಿಸಿದ್ದಾರೆ.

    ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಇಡೀ ಪ್ರಪಂಚವೇ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ. ಅವರ ಇನ್ನೊಂದು ಮುಖವೇ ಬಸವಣ್ಣನವರು. ಇಲ್ಲಿ ವ್ಯಾಸಂಗ ಮಾಡಿದ ಸಾವಿರಾರು ಮಂದಿ ಇಂದು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ
    |ರುದ್ರೇಶ್​ ಕೆಆರ್​ಐಡಿಎಲ್​ ಅಧ್ಯಕ್ಷ

    ನಾನೀಗ ಗರ್ಭಿಣಿ, ನನ್ನನ್ನು ತಬ್ಬಲಿ ಮಾಡಿಬಿಟ್ರು… ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮೇಘನಾ

    ಶಂಕರಣ್ಣನ ಆತ್ಮಹತ್ಯೆಗೆ ಕಾರಣ ಬಯಲು! ಅಯ್ಯೋ, ಸ್ವಲ್ಪ ಅರ್ಡ್ಜೆಸ್ಟ್​ ಮಾಡ್ಕೊಂಡಿದ್ರೆ ಇಷ್ಟೆಲ್ಲಾ ಆಗ್ತಿರ್ಲಿಲ್ಲ ತಾಯಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts