More

    ಮೈಸೂರು ದಸರಾದಲ್ಲಿ ಅಪ್ಪು ಚಿತ್ರೋತ್ಸವ: ಅಭಿಮಾನಿಗಳ ಜತೆ ‘ರಾಜಕುಮಾರ’ ಸಿನಿಮಾ ವೀಕ್ಷಿಸಿದ ಅಶ್ವಿನಿ

    ಮೈಸೂರು: ನಾಡಹಬ್ಬ ಮೈಸೂರು ದಸರಾದಲ್ಲಿ ಕರ್ನಾಟಕರತ್ನ ಡಾ.ಪುನೀತ್​ ರಾಜ್​ಕುಮಾರ್​ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ಮೈಸೂರು ದಸರಾ-2022 ಹಾಗೂ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ದಸರಾ ಚಲನಚಿತ್ರೋತ್ಸವಲ್ಲಿ ‘ಅಪ್ಪು ದಿನ’ ಆಚರಿಸಲಾಗುತ್ತಿದೆ. ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅಶ್ವಿನಿ ಪುನೀತ್​ರಾಜ್​ಕುಮಾರ್​ ಅವರು ಅಪ್ಪು ಚಲನಚಿತ್ರೋತ್ಸವಕ್ಕೆ ಬುಧವಾರ ಚಾಲನೆ ನೀಡಿದರು.

    ಅಪ್ಪುಗೆ ದಸರೆಯಲ್ಲಿ ವಿಶೇಷ ನಮನ ಸಲ್ಲಿಸಲಾಗುತ್ತಿದೆ. ದಸರಾ ಚಲನಚಿತ್ರೋತ್ಸವದಲ್ಲಿ ಅವರ ಆರು ಸಿನಿಮಾಗಳ ಪ್ರದರ್ಶನ ನಡೆಯುತ್ತಿದೆ. ಬೆಟ್ಟದ ಹೂ, ರಾಜಕುಮಾರ, ರಣವಿಕ್ರಮ, ಯುವರತ್ನ ಸೇರಿದಂತೆ 6 ಸಿನಿಮಾಗಳು ಮೈಸೂರಿನ ಐನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ಆಗುತ್ತಿವೆ.

    ಮೈಸೂರು ದಸರಾದಲ್ಲಿ ಅಪ್ಪು ಚಿತ್ರೋತ್ಸವ: ಅಭಿಮಾನಿಗಳ ಜತೆ 'ರಾಜಕುಮಾರ' ಸಿನಿಮಾ ವೀಕ್ಷಿಸಿದ ಅಶ್ವಿನಿ

    ಅಭಿಮಾನಿಗಳ ಜತೆ ಕೆಲಕಾಲ ಕೂತು ‘ರಾಜಕುಮಾರ’ ಸಿನಿಮಾವನ್ನು ಅಶ್ವಿನಿ ಅವರು ವೀಕ್ಷಣೆ ಮಾಡಿದರು. ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಉಪಮೇಯರ್ ರೂಪಾ ಉಪಸ್ಥಿತರಿದ್ದರು. ಅಪ್ಪು ಅಭಿನಯದ ಸಿನಿಮಾ ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದಾರೆ.

    ಮೈಸೂರು ದಸರಾದಲ್ಲಿ ಅಪ್ಪು ಚಿತ್ರೋತ್ಸವ: ಅಭಿಮಾನಿಗಳ ಜತೆ 'ರಾಜಕುಮಾರ' ಸಿನಿಮಾ ವೀಕ್ಷಿಸಿದ ಅಶ್ವಿನಿ

    ದೀಪಾಲಂಕಾರದಲ್ಲಿ ಪವರ್‌ಸ್ಟಾರ್‌ ಪುನೀತ್​ಗೆ ಬೆಳಕಿನ ರೂಪಕ ನೀಡಿದ್ದರೆ, ಫಲಪುಷ್ಪ ಪ್ರದರ್ಶನದಲ್ಲೂ ‘ಯುವರತ್ನ’ನಿಗೆ ಹೂವಿನ ಸಿಂಗಾರ ಮಾಡಲಾಗಿದೆ. ದಸರಾ ವಸ್ತುಪ್ರದರ್ಶನದಲ್ಲೂ ಪುನೀತ್‌ಗೆ ಮರಳುಶಿಲ್ಪದ ರೂಪ ನೀಡಲಾಗಿದೆ. ಇನ್ನು ಯುವ ದಸರಾದಲ್ಲಿ ಗಾಯಕರಾದ ಗುರುಕಿರಣ್, ವಿಜಯಪ್ರಕಾಶ್, ಬಾಲಿವುಡ್‌ನ ಕುನಾಲ್ ಗಾಂಜಾವಾಲ್ ಅವರು ಅಪ್ಪುಗೆ ಸಂಗೀತ ನಮನ ಅರ್ಪಿಸಲಿದ್ದಾರೆ.

    ಪಿಎಫ್​ಐ ಬ್ಯಾನ್​ ಮಾಡಿದ್ದನ್ನು ಸ್ವಾಗತಿಸುತ್ತಲೇ ಮತ್ತೊಂದು ಡಿಮಾಂಡ್​ ಇಟ್ಟ ರಾಜ್ಯ ಕಾಂಗ್ರೆಸ್​!

    ಪರಸ್ಪರ ಮದ್ವೆಯಾಗಲು ನಿರ್ಧರಿಸಿದ್ದ ಬೆಂಗಳೂರಿನ ಶಾಲಾ ಬಾಲಕಿಯರು… ಇವರ ಕರುಣಾಜನಕ ಕಥೆ ಕೇಳಿದ್ರೆ ಕರುಳುಹಿಂಡುತ್ತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts