More

    ಮೈಸೂರಲ್ಲಿ 93 ದೇವಾಲಯಗಳಿಗೆ ನೆಲಸಮಕ್ಕೆ ಸಜ್ಜು! ಮಹಾನಗರ ಪಾಲಿಕೆಯ ಲಿಸ್ಟ್​ಗೆ ಜನ ಶಾಕ್​

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಹಲವು ದೇವಾಲಯಗಳಿಗೆ ನೆಲಸಮ ಭೀತಿ ಎದುರಾಗಿದೆ. ನಗರದಲ್ಲಿ ಬರೋಬ್ಬರಿ 93 ದೇವಾಲಯಗಳ ತೆರವಿಗೆ ಮೈಸೂರು ಮಹಾನಗರ ಪಾಲಿಕೆ ಉದ್ದೇಶಿಸಿದ್ದು, ಆ ದೇಗುಲಗಳ ಪಟ್ಟಿ ‘ದಿಗ್ವಿಜಯ ನ್ಯೂಸ್‌’ಗೆ ಲಭ್ಯವಾಗಿದೆ.

    ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಗ್ರಹಾರದ 101 ಗಣಪತಿ ದೇವಾಲಯ, ಚಾಮುಂಡೇಶ್ವರಿ ದೇವಾಲಯ, ವಿದ್ಯಾರಣ್ಯಪುರಂ ರಾಮಲಿಂಗೇಶ್ವರ ದೇವಾಲಯ, ಇಟ್ಟಿಗೆಗೂಡು ದುರ್ಗಾ ಪರಮೇಶ್ವರಿ, ನ್ಯೂ ಸಯ್ಯಾಜಿರಾವ್ ಪಂಚಮುಖಿ ಗಣಪತಿ ದೇವಾಲಯ, ವಿಜಯನಗರದ ಚಾಮುಂಡೇಶ್ವರಿ ದೇವಾಲಯ, ಶಾರದಾ ದೇವಿ ನಗರದ ಪಾರ್ಕ್​ನಲ್ಲಿರುವ ಪಂಚಮುಖಿ ಗಣಪತಿ, ವಿವಿ ಮಾರುಕಟ್ಟೆಯ ನವಗ್ರಹ ದೇವಸ್ಥಾನ… 93 ದೇಗುಲಗಳ ಹೆಸರು ಆ ಪಟ್ಟಿಯಲ್ಲಿದೆ. ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಕೆಲವು ತಮ್ಮ ದೇಗುಲಗಳ ತೆರವು ಮಾಡದಂತೆ ನಿಷೇಧಾಜ್ಞೆ ತಂದಿದ್ದಾರೆ.

    ಅನಧಿಕೃತವಾಗಿ ನಿರ್ಮಾಣಗೊಂಡ ಹಿಂದೂ ದೇವಾಲಯಗಳ ತೆರವಿನ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರು ಮತ್ತು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಭಾನುವಾರ ಬೆಳಗ್ಗೆ ಮೈಸೂರಿನ 101 ಗಣಪತಿ ದೇವಾಲಯದ ಮುಂದೆ ಮೇಯರ್ ಸುನಂದಾ ಪಾಲನೇತ್ರ, ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀವತ್ಸ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ‘ಉಳಿಯಲಿ.. ಉಳಿಯಲಿ.. ದೇವಾಲಯ ಉಳಿಯಲಿ’ ಎಂದು ಘೋಷಣೆ ಕೂಗಿದರು. ದೇಗುಲ ನೆಲಸಮಕ್ಕೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

    ಶನಿ ದೇವರ ಗೋಲಕ ಕದ್ದವ ಸಿಸಿಟಿವಿಯ ವಕ್ರದೃಷ್ಟಿಗೆ ಬಿದ್ದ! ಮರುದಿನವೇ ಕಾದಿತ್ತು ಶಿಕ್ಷೆ

    ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತವೆ, ಸಾವುಗಳು ಹೆಚ್ಚುತ್ತವೆ: ಭವಿಷ್ಯ ನುಡಿದ ಕೋಡಿಶ್ರೀ

    ರಾತ್ರೋರಾತ್ರಿ ಚಿತ್ರದುರ್ಗದಲ್ಲಿ ಗಣಪತಿ ವಿಗ್ರಹ ಧ್ವಂಸ, ದಕ್ಷಿಣ ಕನ್ನಡದಲ್ಲಿ ಗಣಪತಿ ಕಟ್ಟೆಗೂ ಹಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts