More

    ‘ಸ್ವಾರ್ಥಕ್ಕಾಗಿ ಕೆಟ್ಟ ಹೆಸ್ರು ತಂದ ಸಿಂಧೂರಿ ಜನ್ರ ಬಳಿ ಕ್ಷಮೆ ಕೇಳಲಿ.. ಐಎಎಸ್ ಅಧಿಕಾರಿಯನ್ನ ಕೂಡಲೇ ಬಂಧಿಸಿ…’

    ಮೈಸೂರು: ರೋಹಿಣಿ ಸಿಂಧೂರಿ ವರ್ಗಾವಣೆ ಆಗಿದ್ದರೂ ಜಿಲ್ಲೆಯ ಕೆಲ ಜನಪ್ರತಿನಿಧಿಗಳ ಆಕ್ರೋಶ ಮಾತ್ರ ಇನ್ನೂ ತಣ್ಣಗಾಗಿಲ್ಲ. ಸ್ವಾರ್ಥಕ್ಕೋಸ್ಕರ ಮೈಸೂರು ಜನತೆಗೆ ರೋಹಿಣಿ ಸಿಂಧೂರಿ ಕೆಟ್ಟ ಹೆಸರು ತಂದಿದ್ದಾರೆ. ಅವರು ಈ ಕೂಡಲೇ ಮೈಸೂರಿನ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿರುವ ಮಾಜಿ ಶಾಸಕ ವಾಸು, ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ಸಂಬಂಧ ವೈರಲ್​ ಆಗಿರುವ ಜಿಲ್ಲಾಧಿಕಾರಿ ಹಾಗೂ ವ್ಯಕ್ತಿಯ ಸಂಭಾಷಣೆ ಕುರಿತು ರೋಹಿಣಿ ಹೆಸರೇಳದೇ ಅಧಿಕಾರಿಯನ್ನು ಬಂಧಿಸಿ ಎಂದಿದ್ದಾರೆ.

    ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ರೋಹಿಣಿ ಸಿಂಧೂರಿ, ಮೈಸೂರು ಜಿಲ್ಲೆಯಲ್ಲಿ ನನಗೆ ಕೆಲಸ ಮಾಡಲು ಬಿಡಲಿಲ್ಲ. ಕೆಲವರು ಅನಗತ್ಯವಾಗಿ ತೊಂದರೆ ಕೊಟ್ಟರು‌. ಭೂಮಿ ಒತ್ತುವರಿ ತೆರವು ಮಾಡಲು ನಾನು ಪ್ರಯತ್ನ ಮಾಡಿದ್ದೆ. ಕೆರೆಗಳನ್ನು ಉಳಿಸೋದು, ಸರ್ಕಾರಿ ಭೂಮಿ ರಕ್ಷಣೆ ಮಾಡೋದು ನನ್ನ ಆದ್ಯತೆ ಆಗಿತ್ತು. ಅದಕ್ಕೆ ಅವಕಾಶ ಕೊಡಲಿಲ್ಲ ಎನ್ನುವ ಮೂಲಕ ಭೂಮಾಫಿಯಾ ಬಗ್ಗೆ ಮಾಹಿತಿ ಹೊರಹಾಕಿದ್ದರು. ಈ ಕುರಿತು ಗರಂ ಆದ ಮಾಜಿ ಶಾಸಕ ವಾಸು ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ರಾಜಕಾರಣಿಗಳನ್ನು ಅನುಮಾನಾಸ್ಪವಾಗಿ ನೋಡುವುದು ಅಧಿಕಾರಿಗೆ ಶೋಭೆ ತರಲ್ಲ. ಜನರ ಮುಂದೆ ಕೆಟ್ಟ ಅಭಿಪ್ರಾಯ ಬಿಂಬಿಸುವುದು ಸರಿಯಲ್ಲ. ಭೂ ಮಾಫಿಯಾ ವಿರುದ್ಧ ತನಿಖೆ ಆರಂಭಿಸಿದ್ದಕ್ಕೆ ವರ್ಗಾವಣೆ ಅಂತ ಬಾಲಿಷ ಹೇಳಿಕೆ ನೀಡಿದ್ದಾರೆ. ಸ್ವಾರ್ಥಕ್ಕೋಸ್ಕರ ಮೈಸೂರು ಜನತೆಗೆ ಕೆಟ್ಟ ಹೆಸರು ತಂದಿದ್ದಾರೆ. ಈ ಕೂಡಲೇ ರೋಹಿಣಿ ಸಿಂಧೂರಿ ಮೈಸೂರು ಜನರ ಬಳಿ ಕ್ಷಮೆ ಕೇಳಬೇಕು. ರೋಹಿಣಿ ಸಿಂಧೂರಿಗೆ ಕಡ್ಡಾಯ ರಜೆ ಕೊಟ್ಟು ಕಳುಹಿಸಿ. ಇಂತಹ ಅಧಿಕಾರಿಗಳು ಉನ್ನತ ಸ್ಥಾನದಲ್ಲಿ ಕೂತರೆ ದೊಡ್ಡ ಅನಾಹುತ ಆಗುತ್ತೆ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಇದನ್ನೂ ಓದಿರಿ ಗಾಂಧೀಜಿ ಅವರ ಮರಿಮೊಮ್ಮಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ದಕ್ಷಿಣ ಆಫ್ರಿಕಾ!

    ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ಸಂಬಂಧ ಅಧಿಕಾರಿ ಹಾಗೂ ವ್ಯಕ್ತಿಯ ಸಂಭಾಷಣೆ ವೈರಲ್ ಆಗಿದೆ. ಈ ಆಡಿಯೋದಲ್ಲಿರುವ ಮಾತುಕತೆ ಸತ್ಯವಾಗಿದ್ದರೆ ಕೂಡಲೇ ಆ ಐಎಎಸ್ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಿ ಎಂದ ವಾಸು, ರೋಹಿಣಿ ಹೆಸರೇಳದೇ ಬಂಧಿಸಿ ಎಂದರು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಇತಿಹಾಸದಲ್ಲೇ ಇದೊಂದು ದುರದೃಷ್ಟಕರ ಸಂಗತಿ. ಅಧಿಕಾರಿಯ ಅಹಂನಿಂದ ಹತ್ತಾರು ಪ್ರಾಣಗಳು ಹೋಗಿವೆ. ಈ ಪ್ರಕರಣ ಸಂಬಂಧ ವೈರಲ್ ಆಗಿರುವ ಆಡಿಯೋ ಪರಿಶೀಲಿಸಿ ಎಂದರು.

    ಆರೋಗ್ಯ ಸಚಿವರು ಈ ಬಗ್ಗೆ ಶೀಘ್ರದಲ್ಲೇ ಕಠಿಣ ಕ್ರಮ ಜರುಗಿಸಬೇಕು. ಆಕ್ಸಿಜನ್ ಪ್ರಕರಣದಲ್ಲಿ ಸತ್ತವರಿಗೆ ಸರ್ಕಾರ ಪರಿಹಾರ ನೀಡಬೇಕು. ಜಿಲ್ಲಾಡಳಿತ 24 ಜನ ಸಾವಿಗೀಡಾಗಿದ್ದಾರೆ ಎಂದು ಹೇಳಿತ್ತು. ಆದ್ರೆ ನ್ಯಾಯಾಲಯ 36 ಜನ ಸಾವೀಗೀಡಾಗಿರುವ ಸಂಗತಿಯನ್ನು ಬೆಳಕಿಗೆ ತಂದಿದೆ. ಇಲ್ಲಿ ಸಾವಿನ ಸಂಖ್ಯೆಯನ್ನೂ ಮುಚ್ಚಿಟ್ಟು ವಂಚನೆ ಮಾಡಿದ್ದಾರೆ ಎಂದರು. (ದಿಗ್ವಿಜಯ ನ್ಯೂಸ್​)

    ನನ್ಗೆ ತೊಂದ್ರೆ ಕೊಟ್ರು, ಕೆಲ್ಸ ಮಾಡೋಕೆ ಬಿಡ್ಲಿಲ್ಲ… ಎನ್ನುತ್ತಲೇ ಭೂಮಾಫಿಯಾ ಬಗ್ಗೆ ಬಿಚ್ಚಿಟ್ಟ ಸಿಂಧೂರಿ

    ಸಿಡಿಲು ಬಡಿದು ಒಂದೇ ದಿನ 20 ಮಂದಿ ಸಾವು! ಮೃತರ ಕಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಣೆ

    ಬೆತ್ತಲೆ ಸ್ಥಿತಿಯಲ್ಲೇ ಕಂಬದಲ್ಲಿ ನೇತಾಡುತ್ತಿದ್ದ ಮಹಿಳೆ! ಬೆಳ್ಳಂಬೆಳಗ್ಗೆ ನಡೆದ ಈ ಕೃತ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಹತ್ಯೆ! ‘ಕಾಮ’ದಾಹ ತೀರದ ಸಿಟ್ಟಿಗೆ ಮೂರು ಮಕ್ಕಳನ್ನ ನಾಲೆಗೆ ಎಸೆದ

    ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಕಾರಿನಲ್ಲಿದ್ದ ಮೂವರು ಸಜೀವ ದಹನ, ಇಬ್ಬರ ಸ್ಥಿತಿ ಗಂಭೀರ

    ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts