More

    26 ಲಕ್ಷ ರೂ. ಕೊಟ್ಟು ಹಳ್ಳಿಕಾರ್ ಹೋರಿ ಖರೀದಿಸಿದ ಶಾಸಕ ಮಸಾಲೆ ಜಯರಾಮ್! ಕಸಾಯಿಖಾನೆಯಲ್ಲಿದ್ದ ಕರುವೇ ಈ ಹೋರಿ

    ತುಮಕೂರು: 26 ಲಕ್ಷ ರೂಪಾಯಿ ಕೊಟ್ಟು ಹಳ್ಳಿಕಾರ್ ತಳಿಯ ಬೀಜದ ಹೋರಿಯನ್ನು ತುರುವೇಕೆರೆ ಕ್ಷೇತ್ರದ ಶಾಸಕ ಮಸಾಲಾ ಜಯರಾಂ ಖರೀದಿಸಿದ್ದಾರೆ.

    ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಬನ್ನೂರಿನ ರೈತ ಕೃಷ್ಣೇಗೌಡ ಅವರು ಸಾಕಿದ್ದ ಮೂರು ವರ್ಷದ 2 ಹಲ್ಲಿನ ಹಳ್ಳಿಕಾರ್​ ಹೋರಿ ಇದಾಗಿದೆ. ಇದಕ್ಕೆ ‘ಏಕಲವ್ಯ’ ಹೆಸರು ಇಟ್ಟಿದ್ದಾರೆ. ಸದ್ಯ ಕೃಷ್ಣೇಗೌಡರ ಮನೆಯಲ್ಲಿಯೇ ಹೋರಿ ಇದ್ದು, ಫೆ.20ರಂದು ಬನ್ನೂರಿನಿಂದ ಶಾಸಕರ ಹುಟ್ಟೂರು ಗುಬ್ಬಿ ತಾಲೂಕು ಅಂಕಳಕೊಪ್ಪಕ್ಕೆ ಬರಲಿದೆ. ಹೋರಿಯ ಪಾಲನೆ, ಪೋಷಣೆಗಾಗಿಯೇ ಒಬ್ಬನನ್ನು ಕೃಷ್ಣೇಗೌಡರ ಮನೆಗೆ ಕಳುಹಿಸಿದ್ದು, ಒಂದು ವಾರ ತರಬೇತಿ ಪಡೆದ ನಂತರ ತುರುವೇಕೆರೆಗೆ ತಂದು ನೋಡಿಕೊಳ್ಳಲಿದ್ದಾರೆ.

    ದೇಶಿ ತಳಿ ಹಸುಗಳ ಮೇಲೆ ಅಪಾರ ಪ್ರೀತಿ ಹೊಂದಿರುವ ಶಾಸಕರು 6.50 ಲಕ್ಷ ರೂ. ಮೌಲ್ಯದ ಹಳ್ಳಿಕಾರ್​, 4.50 ಲಕ್ಷ ರೂ. ಮೌಲ್ಯದ ಅಮೃತ ಮಹಲ್​ ಜೋಡಿ ಎತ್ತುಗಳು, ಮಲೆನಾಡಗಿಡ್ಡ, ಗಿರ್​ತಳಿ ಹಸುಗಳು, ಬನ್ನೂರು ಕುರಿ ಸಾಕಿದ್ದಾರೆ. ಫೆ.20ರಂದು ಏಕಲವ್ಯನ ಬೀಳ್ಕೊಡಲು ಬನ್ನೂರು ಸಜ್ಜಾಗುತ್ತಿದ್ದು, ಭರ್ಜರಿ ಸ್ವಾಗತಕ್ಕೆ ಅಂಕಳಕೊಪ್ಪ ತಯಾರಾಗಿದೆ.

    26 ಲಕ್ಷ ರೂ. ಕೊಟ್ಟು ಹಳ್ಳಿಕಾರ್ ಹೋರಿ ಖರೀದಿಸಿದ ಶಾಸಕ ಮಸಾಲೆ ಜಯರಾಮ್! ಕಸಾಯಿಖಾನೆಯಲ್ಲಿದ್ದ ಕರುವೇ ಈ ಹೋರಿ

    ಕಸಾಯಿ ಖಾನೆಯಲ್ಲಿದ್ದ ಕರುವೇ ಏಕಲವ್ಯ: ಬನ್ನೂರು ರೈತ ಕೃಷ್ಣೇಗೌಡರು ಈ ಹೋರಿಯನ್ನು ಕರುವಿದ್ದಾಗ ಕಸಾಯಿಖಾನೆಯಿಂದ ತಂದು ಸಾಕಿದ್ದಾರೆ. ಮೂರು ವರ್ಷ ಸಾಕಿ 26 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ.

    ಜಿ‌ಟಿಡಿ ಹಣಿಯಲು ಎಚ್​ಡಿಕೆ ಮಾಸ್ಟರ್​ ಪ್ಲ್ಯಾನ್? ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರುವೆ ಎಂದ ದಳಪತಿ

    ಹಿಜಾಬ್​ ವಿವಾದ: ಸ್ಫೋಟಕ ರಹಸ್ಯ ಬಯಲು, ಎರಡು ತಿಂಗಳ ಹಿಂದೆಯೇ ನಡೆದಿತ್ತು ಮಾಸ್ಟರ್​ ಪ್ಲ್ಯಾನ್…

    ಬೆಂಗಳೂರಲ್ಲಿ ಒಣ ಕೊಂಬೆ ಬಿದ್ದು ಕೋಮಾದಲ್ಲಿದ್ದ ಬಾಲಕಿ ಸಾವು: 702 ದಿನ ಸತತ ಚಿಕಿತ್ಸೆಯ ನಂತರವೂ ಬದುಕಲಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts