More

    14ನೇ ವಯಸ್ಸಿನಲ್ಲಿಯೇ ಕೋಟ್ಯಧಿಪತಿಯಾಗಿದ್ದರು ಈ ಐಪಿಎಸ್ ಅಧಿಕಾರಿ!

    ಮುಂಬೈ: ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಸಾಧಕರ ಕಥೆಗಳು ಬಹಳ ಆಕರ್ಷಕವಾಗಿರುತ್ತವೆ ಅಲ್ಲವೇ, ಅದರಲ್ಲೂ ಅಮಿತಾಬ್ ಬಚ್ಚನ್, ರವೀನಾ ಟಂಡನ್ ಅವರಂತಹ ಸೆಲೆಬ್ರಿಟಿಗಳು ಸಹ ಈ ಸಾಧಕರ ಅಭಿಮಾನಿಗಳಾದಾಗ ಆ ಕಥೆಗಳು ಹೆಚ್ಚು ರೋಚಕವಾಗಿರುತ್ತವೆ.

    15 ಪ್ರಶ್ನೆಗಳಿಗೂ ಉತ್ತರ
    ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) ಮೊದಲ ಬಾರಿಗೆ ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾದಾಗ ಅನೇಕ ಕುಟುಂಬಗಳು ಈ ಕಾರ್ಯಕ್ರಮವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದವು. ಆ ನಂತರ 2001 ರಲ್ಲಿ ಕೆಬಿಸಿ ವಿಶೇಷ ಆವೃತ್ತಿ ಕೆಬಿಸಿ ಜೂನಿಯರ್ ಪರಿಚಯಿಸಲಾಯಿತು. ಆಗ ಕೋಟ್ಯಾಧಿಪತಿಯಾಗುವ ಬಯಕೆಯಿಂದ ವಿಶಾಖಪಟ್ಟಣದ 14 ವರ್ಷದ ಬಾಲಕನೊಬ್ಬ ಹಾಟ್ ಸೀಟ್‌ನಲ್ಲಿ ಕುಳಿತುಕೊಳ್ಳುತ್ತಾನೆ. ಆ ಬಾಲಕ ಎಲ್ಲಾ 15 ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸಿ, ಕೋಟ್ಯಾಧಿಪತಿಯಾಗುತ್ತಾನೆ. ಅದೇ ಬಾಲಕ ಸುಮಾರು ಇಪ್ಪತ್ತೆರಡು ವರ್ಷಗಳ ನಂತರ IPS ಅಧಿಕಾರಿಯಾಗುತ್ತಾರೆ. ಆ ಬಾಲಕ ಬೇರಾರೂ ಅಲ್ಲ, ಜನಪ್ರಿಯ ಅಧಿಕಾರಿ ರವಿ ಮೋಹನ್ ಸೈನಿ.

    ಓದಿದ್ದು ಎಂಬಿಬಿಎಸ್
    ಸೈನಿ ಅವರು ಜೈಪುರದ ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದರು. 2012 ರಲ್ಲಿ ವೈದ್ಯಕೀಯ ಇಂಟರ್ನ್‌ಶಿಪ್ ಪೂರ್ಣಗೊಳಿಸುವಾಗ UPSC ಪರೀಕ್ಷೆ ತೆಗೆದುಕೊಂಡರು. ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ಮೊದಲ ಪ್ರಯತ್ನದಲ್ಲಿ ಮೇನ್ಸ್​​​​​ನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. 2014ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ, ರವಿ ಅವರು 461 ನೇ ರಾಂಕ್ ಗಳಿಸಿದರು. 2021 ರಲ್ಲಿ ಗುಜರಾತಿನ ಪೋರಬಂದರ್‌ನ ಎಸ್‌ಪಿಯಾಗಿ ನೇಮಕಗೊಂಡಾಗ ಅವರು ಹೆಚ್ಚು ಸುದ್ದಿಯಾದರು.

    14ನೇ ವಯಸ್ಸಿನಲ್ಲಿಯೇ ಕೋಟ್ಯಧಿಪತಿಯಾಗಿದ್ದರು ಈ ಐಪಿಎಸ್ ಅಧಿಕಾರಿ!

    14ನೇ ವಯಸ್ಸಿನಲ್ಲಿ ಮಿಲಿಯನೇರ್
    ನೌಕಾಪಡೆಯ ನಿವೃತ್ತ ಅಧಿಕಾರಿಯೊಬ್ಬರ ಪುತ್ರರಾದ ಸೈನಿ ರಾಜಸ್ಥಾನದ ಅಲ್ವಾರ್‌ ಮೂಲದವರು. 10 ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ 2001 ರಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಆಯೋಜಿಸಿದ್ದ ಕೆಬಿಸಿ ಜೂನಿಯರ್‌ನಲ್ಲಿ ಭಾಗವಹಿಸಿ, 1 ಕೋಟಿ ರೂ. ಬಹುಮಾನ ಪಡೆದರು.

    ವಿದ್ಯಾಭ್ಯಾಸಕ್ಕೆ ಬಳಕೆಯಾಯಿತು ಹಣ
    2001 ರಲ್ಲಿ ಕೌನ್ ಬನೇಗಾ ಕರೋಡ್‌ಪತಿ ಜೂನಿಯರ್‌ನಲ್ಲಿ ಕಾಣಿಸಿಕೊಂಡಾಗ, ಅವರಿಗೆ 14 ವರ್ಷ. ಈಗಾಗಲೇ ಹಿಂದಿನ ಸಂಚಿಕೆಯಲ್ಲಿ ಭಾಗವಹಿಸಿದ್ದ ಮಾಜಿ ಸ್ಪರ್ಧಿಯ ದಾಖಲೆ ಮುರಿದ ಸೈನಿಯ ಹಣವನ್ನು ರವಿಯ ಮುಂದಿನ ವಿದ್ಯಾಭ್ಯಾಸಕ್ಕೆ ಬಳಸುತ್ತೇವೆ ಎಂದು ರವಿ ಸೈನಿ ಅವರ ತಂದೆ ಪ್ರತಿಕ್ರಿಯಿಸಿದ್ದರು. ಅಂತೆಯೇ ಮುಂದಿನ ದಿನಗಳಲ್ಲಿ ಸೈನಿ ತಮ್ಮ ಶಿಕ್ಷಣದ ಮೇಲೆ ಕೇಂದ್ರೀಕರಿಸಿದರು.

    ಬೆಲೆ ಏರಿಕೆಯ ಬಿಸಿ ನಡುವೆ ಕೆಜಿಗೆ 60 ರೂ.ಗೆ ಮಾರಾಟವಾದ ಟೊಮ್ಯಾಟೊ; ಕೊಂಡಾಡಿದ ಜನತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts