ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇಗುಲದಲ್ಲಿ ಬೆತ್ತಲಾಗಿ ಓಡಾಡಿದ ಯುವಕ!

Published on

ಮಂಡ್ಯ: ಪಾಂಡವಪುರ ತಾಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲದ ಗರ್ಭಗುಡಿ ಎದುರಲ್ಲೇ ಯುವಕನೊಬ್ಬ ಬೆತ್ತಲೆಯಾಗಿ ಓಡಾಟ ನಡೆಸಿದ ವಿಲಕ್ಷಣ ಘಟನೆ ನಡೆದಿದೆ.

ಗುರುವಾರ ರಾತ್ರಿ 9 ಗಂಟೆಯಲ್ಲಿ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಬಂದ ಯುವಕನೊಬ್ಬ ದೇವರ ಮೂರ್ತಿ ಎದುರು ಬೆತ್ತಲಾಗಿ ಕೆಲಕಾಲ ಆತಂಕ ಸೃಷ್ಟಿಸಿದ್ದ. ಯುವಕನ ಹುಚ್ಚಾಟ ಕಂಡು ತಬ್ಬಿಬ್ಬಾದ ದೇವಾಲಯದ ಭದ್ರತಾ ಸಿಬ್ಬಂದಿ, ಯುವಕನನ್ನು ಗದರಿಸಿ ದೇವಾಲಯದಿಂದ ಹೊರಗೆ ಕಳುಹಿಸಿ ಬಾಗಿಲು ಹಾಕಿದ್ದಾರೆ.

ಯುವಕ ಬೆತ್ತಲಾಗಿ ಓಡಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈತ ಗಾಂಜಾ ಮತ್ತಿನಲ್ಲಿ ಹೀಗೆ ವರ್ತಿಸಿದ್ದಾನೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇನ್ನೂ ಕೆಲವರು ಆ ವ್ಯಕ್ತಿ ಗಾಂಜಾ ವ್ಯಸನಿಯಲ್ಲ, ಮಾನಸಿಕ ಅಸ್ವಸ್ಥ ಎನ್ನುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net