More

    ಅತ್ಯಾಚಾರ ಅನಿವಾರ್ಯವಾಗಿದ್ದರೆ, ಆಸ್ವಾದಿಸಿ: ಕೈ ಮುಗಿದು ಕ್ಷಮೆಯಾಚಿಸಿದ ರಮೇಶ್​ ಕುಮಾರ್

    ಬೆಳಗಾವಿ: ‘ಅತ್ಯಾಚಾರ ಅನಿವಾರ್ಯವಾಗಿದ್ದರೆ, ಆಸ್ವಾದಿಸಿ. ಅಂತಹ ಸ್ಥಿತಿಯಲ್ಲಿ ನಿಮ್ಮೊಂದಿಗೆ ನಾವೂ ಇದ್ದೇವೆ’ ಎಂದ ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್​ಕುಮಾರ್​ ವಿರುದ್ಧ ರಾಜ್ಯಾದ್ಯಾಂತ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಎಚ್ಚೆತ್ತ ರಮೇಶ್ ಕುಮಾರ್​ ಕೈ ಮುಗಿದು ಕ್ಷಮೆಯಾಚಿಸಿದ್ದಾರೆ.

    ಸದನಕ್ಕೆ ಹೋಗುವ ಮುನ್ನ ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ರಮೇಶ್​, ‘ದಯಮಾಡಿ ಕ್ಷಮಿಸಿ, ನಾನೀಗ ಏನೂ ಮಾತನಾಡುವುದಿಲ್ಲ. ಸದನಕ್ಕೆ ಬನ್ನಿ ಅಲ್ಲಿಯೇ ಮಾತಾಡುವೆ’ ಎಂದರು. ಟ್ವೀಟ್​ ಮೂಲಕ ‘ನಾನು ಆಡಿದ ಅಸಡ್ಡೆ ಮತ್ತು ನಿಲರ್ಕ್ಷ್ಯದ ಮಾತಿಗೆ ದಯವಿಟ್ಟು ಕ್ಷಮಿಸಿ. ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತಿದ್ದೇನೆ’ ಎಂದು ರಮೇಶ್​ ಕುಮಾರ್​ ಮನವಿ ಮಾಡಿದ್ದಾರೆ

    ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಗುರುವಾರ ಪ್ರವಾಹದ ಹಾನಿ ಕುರಿತ ಚರ್ಚೆ ನಡೆಯುತ್ತಿತ್ತು. ಈ ವೇಳೆ ಪ್ರಕೃತಿ ವಿಕೋಪ ವಿಷಯದ ಬಗ್ಗೆ ಹೆಸರು ಕೊಟ್ಟವರದು ಸೇರಿ 25 ಶಾಸಕರು ಮಾತನಾಡಿದ್ದರು. ಮತ್ತೆ ಹಲವು ಶಾಸಕರು ಮಾತನಾಡಲು ಕೈಎತ್ತಿದಾಗ ನಾಲ್ಕು ದಿನಗಳಿಂದ ಚರ್ಚೆಯಾಗುತ್ತಿದೆ, ಸರ್ಕಾರದಿಂದ ಉತ್ತರ, ಬೇರೆ ಕಾರ್ಯ-ಕಲಾಪಗಳು ನಡೆಸುವುದು ಹೇಗೆ? ಎಂದು ಸ್ಪೀಕರ್​ ಪ್ರಶ್ನಿಸಿದ್ದರು. ಸಿದ್ದರಾಮಯ್ಯ ಪ್ರವೇಶಿಸಿ, ವಿಷಯ ಗಂಭೀರವಾಗಿರುವ ಕಾರಣ ಬಯಸಿದ ಶಾಸಕರಿಗೆ ತಲಾ ಎರಡು ನಿಮಿಷ ಅವಕಾಶ ಕೊಡಿ. ಸರ್ಕಾರ ಶುಕ್ರವಾರ ನೀಡಲಿ ಎಂದು ಸಲಹೆ ನೀಡಿದ್ದರು. ಕಂದಾಯ ಸಚಿವ ಆರ್​.ಅಶೋಕ್​ ನಮ್ಮದೇನು ಅಭ್ಯಂತರವಿಲ್ಲ ಎಂದಿದ್ದರು.

    ಆಗ ಸ್ಪೀಕರ್​ ಮಾತು ಮುಂದುವರಿಸಿ, ಗಮನಸೆಳೆಯುವ ಸೂಚನೆಗಳಿಗೆ ಲಭ್ಯ ಉತ್ತರಗಳನ್ನು ಮಂಡಿಸುವೆ. ಸದನ ಮುಕ್ತವಾಗಿಡುತ್ತೇನೆ, ಎಷ್ಟು ಸದಸ್ಯರು ಬೇಕಾದರೂ ಮಾತನಾಡಲಿ ಎಂದರು. ಅಲ್ಲದೆ ನಗುತ್ತಲೇ ರಮೇಶ್​ಕುಮಾರ್​ ಉದ್ದೇಶಿಸಿ, ಸಿಚ್ಯುವೇಷನ್​ ನಾಟ್​ ಇನ್​ ಕಂಟ್ರೋಲ್​ ಲೆಟ್ಸ್​ ಲೇಡೌನ್​ ಇಟ್​ (ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದಿಲ್ಲ ಎಂದಾದರೆ ಹಾಗೆಯೇ ಬಿಡುವುದು ಲೇಸು) ಎಂಬ ಮಾತನ್ನೂ ಸೇರಿಸಿದರು. ಈ ವೇಳೆ ರಮೇಶ್​ಕುಮಾರ್​, “ದೇರ್​ ಈಸ್​ ಎ ಸೇಯಿಂಗ್​, ವ್ಹೆನ್​ ರೇಪ್​ ಈಸ್​ ಇನ್ನೆವಿಟಬಲ್​ ಲೆಟ್ಸ್​ ಲೇ ಡೌನ್​ ಆ್ಯಂಡ್​ ಎಂಜಾಯ್​. ದಾಟ್ಸ್​ ದಿ ಪೊಸಿಷನ್​ ಟು ವಿತ್​ ಯುವ್​ ಆಲ್​” (ಹೀಗೊಂದು ಮಾತಿದೆ, ಅತ್ಯಾಚಾರ ಅನಿವಾರ್ಯವಾಗಿದ್ದರೆ, ಆಸ್ವಾದಿಸಿ. ಅಂತಹ ಸ್ಥಿತಿಯಲ್ಲಿ ನಿಮ್ಮೊಂದಿಗೆ ನಾವೂ ಇದ್ದೇವೆ.) ಎನ್ನುತ್ತಾ ನಕ್ಕರು. ಪ್ರತಿಯಾಗಿ ಸ್ಪೀಕರ್​ ಕೂಡ ನಕ್ಕಿದ್ದರು.

    ಅತ್ಯಾಚಾರ ಅನಿವಾರ್ಯವಾಗಿದ್ದರೆ… ಆಸ್ವಾದಿಸಿ ಎಂಬರ್ಥದ ಮಾತು ಹೇಳಿದ ರಮೇಶ್​ ಕುಮಾರ್​ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ವಿವಾದ ಹೆಚ್ಚಾಗುತ್ತಿದ್ದಂತೆ ಇದರ ಗಂಭೀರತೆ ಅರಿತ ರಮೇಶ್​ಕುಮಾರ್​ ಟ್ವೀಟ್​ ಮೂಲಕವೂ ಕ್ಷಮೆಯಾಚಿಸಿದ್ದಾರೆ.

    ರಮೇಶ್​ ಕುಮಾರ್​ ಅವರು 2019ರಲ್ಲಿ ತಾವು ಸ್ಪೀಕರ್ ಆಗಿದ್ದಾಗಲೂ ಹೀಗೇ ಸದನಲ್ಲಿ ರೇಪ್​ ವಿಷಯ ಮಾತನಾಡಿ, ವಿವಾದಕ್ಕೀಡಾಗಿದ್ದರು. ಅದಾಗ್ಯೂ ಮತ್ತೊಮ್ಮೆ ಸದನದಲ್ಲಿ ಆ ವಿಚಾರವಾಗಿ ಮಾತನಾಡಿ, ಮತ್ತೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

    5 ಲಕ್ಷ ಲಂಚ ಪಡೆಯುತ್ತಿರುವಾಗಲೇ ಗಂಡನ ಜತೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗ್ರಾಪಂ ಅಧ್ಯಕ್ಷೆ!

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ರ ಶತಾಯುಷಿ ಅಜ್ಜಿ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts