More

    ಮಸ್ಕಿ ಉಪ ಸಮರ: ಮತ‌ ಎಣಿಕೆ ಪೂರ್ಣಗೊಳ್ಳುವ ಮುನ್ನವೇ ಸೋಲೊಪ್ಪಿಕೊಂಡ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್!

    ರಾಯಚೂರು: ಮಸ್ಕಿ ‌ವಿಧಾನಸಭೆ ಕ್ಷೇತ್ರದ ‌ಉಪಚುನಾವಣೆಯ ಮತ‌ ಎಣಿಕೆ ಪೂರ್ಣಗೊಳ್ಳುವ ಮೊದಲೇ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಸೋಲೊಪ್ಪಿಕೊಂಡಿದ್ದಾರೆ.

    ಈಗ ಎಣಿಕೆ ಆಗಿರೋ ಎಲ್ಲ ಕಡೆ ನನಗೆ ಹಿನ್ನಡೆ ಆಗಿದೆ. ಇನ್ನು ನಾನು ಗೆಲ್ಲುವ ಭರವಸೆ ಉಳಿದಿಲ್ಲ. ಒಂದೊಮ್ಮೆ ಗೆದ್ದರೆ ಅದು ಪವಾಡವೇ‌ ಸರಿ. ನನ್ನ ಹುಟ್ಟೂರು ಮಸ್ಕಿಯಲ್ಲೇ ನನಗೆ ಹಿನ್ನಡೆ ಆಗಿದೆ. ನಾನು ಮಸ್ಕಿ‌ ಕ್ಷೇತ್ರಕ್ಕೆ ಸಾಕಷ್ಟು ಕೆಲಸ ಮಾಡಿದ್ದೇನೆ. ಕ್ಷೇತ್ರದ ಮತದಾರರು ಬದಲಾವಣೆ,‌ ಹೊಸಬರನ್ನು ಬಯಸಿದ್ದಾರೆ. ಇದಕ್ಕೆ ಯಾರೂ ಹೊಣೆಯಲ್ಲ. ಈ ಸೋಲಿಗೆ ನಾನೇ‌ ನೇರ ಹೊಣೆ ಎಂದು ಪ್ರತಾಪಗೌಡ ಪಾಟೀಲ್ ಹೇಳಿದ್ದರು.

    ಕಳೆದ ಮೂರು ಸಲ ಶಾಸಕರಾಗಿ ಅಭಿವೃದ್ಧಿ ಮಾಡಿದ್ದೆ. ಆದರೂ ಮತದಾರರು ತಮ್ಮ ವಿರುದ್ಧ ಮತ ಹಾಕಿರುವುದು ಆಡಳಿತ ವಿರೋಧಿ ಅಲೆಯಿದೆ ಎಂಬುದನ್ನು ಬಯಲು ಗೊಳಿಸಿದೆ. ಬಹುತೇಕ ಕಡೆ ನಿರೀಕ್ಷೆಯಂತೆ ಮತ ಬಂದಿಲ್ಲ. ನಮ್ಮ ಪಕ್ಷದವರೇ ನಮ್ಮ ವಿರುದ್ಧ ಕೆಲಸ ಮಾಡಿರುವುದು ಸ್ಪಷ್ಟ. ಕಾಂಗ್ರೆಸ್​ಗೆ ಮುಖಂಡರಿಲ್ಲದ ಕಡೆಯೂ ಕಾಂಗ್ರೆಸ್​ಗೆ ಹೆಚ್ಚಿನ‌ ಮತ ಬಂದಿವೆ.

    ಸಿಎಂ ಪುತ್ರ ವಿಜಯೇಂದ್ರ ಅವರು ಮಸ್ಕಿ ಹೊಣೆಗಾರಿಕೆ ವಹಿಸಿಕೊಂಡಿದ್ದರೂ ಹಿನ್ನಡೆಯಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಮಸ್ಕಿ ಮತದಾರರೇ ತಮ್ಮ ಆಡಳಿತಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು ಸ್ಪಷ್ಟ. ಮಸ್ಕಿಯನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದೆ. ಆದರೂ ಮತದಾರರು ತಮ್ಮ ಕೈಹಿಡಿಯಲಿಲ್ಲ. ಮುಂದಿನ ಎರಡು ವರ್ಷ ಮಸ್ಕಿಯ ಮತದಾರರ ಪರ ಕೆಲಸ ಮಾಡುವೆ. ಸರ್ಕಾರ ಬಿಜೆಪಿಯದ್ದೇ ಇರುವುದರಿಂದ ಮತದಾರರ ಬೇಕು ಬೇಡಗಳ ಅರಿತು ಕಾರ್ಯನಿರ್ವಹಿಸುವೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಕ್ಕೆ ಹಿನ್ನಡೆಯಾಗಿದೆ ಎಂದು ಅನಿಸಿಲ್ಲ. ಮತದಾರರು ತಮ್ಮ ಮೂರು ಅವಧಿಗೆ ಬೆಂಬಲಿಸಿದ್ದು, ಬದಲಾವಣೆ ಬಯಸಿದ್ದಾರೆ ಎನ್ನುವ ಮೂಲಕ ತಮ್ಮ ಸೋಲನ್ನು ಸಮರ್ಥಿಸಿಕೊಂಡರು. ಮತ ಎಣಿಕೆ ಮುಗಿಯುವ ಮುನ್ನವೇ ಎಣಿಕೆ ಕೇಂದ್ರದಿಂದ ಹೊರನಡೆದರು.

    ಬೆಳಗಾವಿ ಲೋಕಸಭಾ ಕ್ಷೇತ್ರ: ಲಕ್ಷಕ್ಕೂ ಹೆಚ್ಚು ಮತ ಪಡೆದ ಮಂಗಲಾ ಮತ್ತು ಸತೀಶ್​ ಜಾರಕಿಹೊಳಿ, ಗೆಲುವಿನ ಸನಿಹ ಯಾರದ್ದು? ​

    ಮಸ್ಕಿ ಕ್ಷೇತ್ರದ ಉಪ ಚುನಾವಣೆ: 5ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್​

    ಶಿರಾಳಕೊಪ್ಪ ದರ್ಗಾದ ಗೋರಿ ಮೇಲಿನ ಬಟ್ಟೆಯಲ್ಲಿ ಉಸಿರಾಟದ ಅನುಭವ, ರಾತ್ರೋರಾತ್ರಿ ಸ್ಥಳಕ್ಕೆ ದೌಡಾಯಿಸಿದ ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts