More

    ಪತ್ನಿ-ಮಕ್ಕಳನ್ನು ಕೊಂದು ರಾತ್ರಿಯಿಡೀ ಶವಗಳ ಜತೆಯಲ್ಲಿದ್ದ! ಎಎಸ್​ಐಗೆ ಮೆಸೇಜ್​ ಕಳಿಸಿ ನೇಣಿಗೆ ಶರಣಾದ… ಬೆಚ್ಚಿಬೀಳಿಸುತ್ತೆ ಈ ಘಟನೆ

    ಮಂಗಳೂರು: ಮತಾಂತರ ಕಿರುಕುಳಕ್ಕೆ ಒಂದೇ ಕುಟುಂಬದ ನಾಲ್ವರು ದುರಂತ ಅಂತ್ಯ ಕಂಡ ಪ್ರಕರಣ ಸಂಬಂಧ ಮತ್ತೊಂದು ಸ್ಫೋಟಕ ಮಾಹಿತಿ ಬಯಲಾಗಿದೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದವ ರಾತ್ರಿ ಇಡೀ ಶವಗಳ ಜತೆ ಮನೆಯಲ್ಲೇ ಕಾಲಕಳೆದಿದ್ದ. ಬಳಿಕ ಎಎಸ್​ಐಗೆ ವಾಯ್ಸ್​ ಮೆಸೇಜ್​ ಕಳಿಸಿ ಮನದ ನೋವನ್ನು ಹೇಳಿಕೊಂಡು ನೇಣಿಗೆ ಕೊರಳೊಡ್ಡಿದ್ದಾನೆ. ಪೊಲೀಸರು ಮನೆ ಬಳಿ ಹೋಗಿ ಪರಿಶೀಲನೆ ನಡೆಸಿದಾದ ಶವಗಳ ಜತೆಗೆ ಅಲ್ಲೊಂದು ಡೆತ್​ ನೋಟ್​ ಕೂಡ ಪತ್ತೆಯಾಗಿತ್ತು.

    ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ, ಮಂಗಳೂರಿನ ಮೋರ್ಗನ್ಸ್ ಗೇಟ್​ನ ಮನೆಯೊಂದರಲ್ಲಿ ವಾಸವಿದ್ದ ನಾಗೇಶ್ ಶೆರಗುಪ್ಪಿ(30), ಇವರ ಪತ್ನಿ ವಿಜಯಲಕ್ಷ್ಮೀ(26), ಮಕ್ಕಳಾದ ಸ್ವಪ್ನ(8) ಹಾಗೂ ಸಮರ್ಥ್(4) ಮೃತರು. ಡಿ.7ರ ರಾತ್ರಿ ನಾಗೇಶ್​, ಪತ್ನಿ ಮತ್ತು ಮಕ್ಕಳನ್ನು ಕೊಲೆ ಮಾಡಿ ಬಳಿಕ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕೆಲ್ಲ ಕಾರಣ ನೂರ್​ ಜಾಹನ್​ ಎಂಬ ಮಹಿಳೆಯೇ ಕಾರಣ ಎಂದು ನಾಗೇಶ್​ ಸಾವಿಗೂ ಮುನ್ನ ಡೆತ್​ನೋಟ್​ ಬರೆದಿಟ್ಟಿದ್ದ. ದಕ್ಷಿಣ ಠಾಣೆ ಎಎಸ್ಐ ಚಂದ್ರಶೇಖರ್ ಅವರ ಮೊಬೈಲ್​ಗೆ 10 ಸೆಕೆಂಡ್ ವಿಡಿಯೋ ಮತ್ತು ವಾಯ್ಸ್ ಮೆಸೇಜ್ ಕಳುಹಿಸಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

    ಏನಿದು ಪ್ರಕರಣ: ನಾಗೇಶ್ ಮತ್ತು ವಿಜಯಲಕ್ಷ್ಮೀ ನಡುವೆ ಕ್ಷುಲ್ಲಕ ವಿವಾರಕ್ಕೆ ಜಗಳ ನಡೆಯುತ್ತಿತ್ತು. ನಾಗೇಸ್​ ಚಾಲಕನಾಗಿದ್ದ. ವಿಜಯಲಕ್ಷ್ಮೀ, ನೂರ್​ ಜಹಾನ್​ ಎಂಬಾಕೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಗಂಡ-ಹೆಂಡತಿ ನಡುವಿನ ಜಗಳವನ್ನೇ ಬಂಡವಾಳ ಮಾಡಿಕೊಂಡ ಮಂಗಳೂರಿನಲ್ಲಿ ಮದುವೆ ಬ್ರೋಕರ್ ಆಗಿದ್ದ ನೂರ್ ಜಹಾನ್, ನಾಗೇಶ್​ಗೆ ಡಿವೋರ್ಸ್ ಕೊಡುವಂತೆ ವಿಜಯಲಕ್ಷ್ಮೀಗೆ ಹೇಳಿದ್ದಳು. ಮುಸ್ಲಿಂ ಯುವಕನ ಜತೆ ಮದುವೆ ಮಾಡಿಸುವೆ ಎಂದೂ ಆಕೆಯ ತಲೆ ಕೆಡಿಸಿದ್ದಳು. ಅದಕ್ಕಾಗಿ ವಿಜಯಲಕ್ಷ್ಮೀಯ ಫೋಟೋ ಬಳಸಿ ಮುಸ್ಲಿಂ ಹುಡುಗನ ಹುಡುಕಾಟವನ್ನೂ ನೂರ್ ಜಹಾನ್ ಮಾಡಿದ್ದಳು. ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರ ಆಗುವಂತೆ ವಿಜಯಲಕ್ಷ್ಮೀಗೆ ನೂರ್ ‌ಜಹಾನ್ ಹೇಳಿದ್ದಳು. ಇದೇ ವಿಚಾರದಲ್ಲಿ ನಾಗೇಶ್ ‌ಮತ್ತು ವಿಜಯಲಕ್ಷ್ಮೀ ಮಧ್ಯೆ ಗಲಾಟೆ ನಡೆದು ಮಕ್ಕಳು ಮತ್ತು ಪತ್ನಿಯನ್ನು ಕೊಂದು ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಐಪಿಸಿ 306 ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ‌ ನೂರ್ ಜಹಾನ್​ನನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

    ಪತ್ನಿ-ಮಕ್ಕಳನ್ನು ಕೊಂದು ರಾತ್ರಿಯಿಡೀ ಶವಗಳ ಜತೆಯಲ್ಲಿದ್ದ! ಎಎಸ್​ಐಗೆ ಮೆಸೇಜ್​ ಕಳಿಸಿ ನೇಣಿಗೆ ಶರಣಾದ... ಬೆಚ್ಚಿಬೀಳಿಸುತ್ತೆ ಈ ಘಟನೆ
    ಆರೋಪಿ ನೂರ್ ಜಹಾನ್​

    ಸಾವಿಗೂ ಮುನ್ನ ಅಂದರೆ 2021ರ ಅಕ್ಟೋಬರ್​ನಲ್ಲಿ ವಿಜಯಲಕ್ಷ್ಮೀ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಳು. ಪತ್ನಿಗಾಗಿ ಹುಡುಕಾಟ ನಡೆಸಿದ್ದ ನಾಗೇಶ್, ಪತ್ನಿ ಕೆಲಕ್ಕೆಂದು ಹೋಗಿದ್ದ ಪತ್ನಿ ವಾಪಸ್​ ಮನೆಗೆ ಬಂದಿಲ್ಲ, ಎಲ್ಲ ಕಡೆ ಹುಡುಕಿದರೂ ಪತ್ತೆಯಾಗಿಲ್ಲ, ದಯವಿಟ್ಟು ಹುಡುಕಿಕೊಡಿ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದ. ಈ ವಿಚಾರ ತಿಳಿದು ಠಾಣೆಗೆ ನೇರವಾಗಿ ಬಂದ ವಿಜಯಲಕ್ಷ್ಮೀ, ನನ್ನ ಮನೆಯಲ್ಲಿ ಗಲಾಟೆ ಮಾಡುತ್ತಾನೆ. ಅದಕ್ಕೆ ಬೇಸತ್ತು ಮನೆ ಬಿಟ್ಟು ಹೋಗಿದ್ದೆ ಎಂದು ಸ್ಪಷ್ಟನೆ ಕೊಟ್ಟಿದ್ದಳು. ಪೊಲೀಸರು ಇಬ್ಬರಿಗೂ ಬುದ್ಧಿ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದರು. ಆದರೆ, ನೂರ್ ಜಹಾನ್​ಳ ಮಾತು ಕೇಳಿ ವಿಜಯಲಕ್ಷ್ಮೀ ಮತಾಂತರಕ್ಕೆ ಮುಂದಾಗಿದ್ದಳು. ಇದರಿಂದ ಬೇಸತ್ತ ಗಂಡ, ಮಕ್ಕಳು ಮತ್ತು ಪತ್ನಿಯನ್ನು ಕೊಂದು ‘ನಮ್ಮ ಸಾವಿಗೆ ನೂರ್ ಜಹಾನ್ ಎಂಬಾಕೆಯೇ ಕಾರಣ. ಆಕೆ ನನ್ನ ಪತ್ನಿಯನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ನಿತ್ಯ ಗಲಾಟೆ ಆಗುತ್ತಿತ್ತು. ನಾನು ಎಷ್ಟೇ ಮನವೊಲಿಸಿದರೂ ನನ್ನ ಪತ್ನಿ ವಿಜಯಲಕ್ಷ್ಮೀ ನನ್ನ ಮಾತನ್ನು ಕೇಳುತ್ತಿರಲಿಲ್ಲ…’ ಎಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ನೂರ್​ಜಹಾನ್​ನನ್ನು ಪೊಲೀಸರು ಬಂಧಿಸಿದ್ದಾರೆ.

    ಮಂಗಳೂರಲ್ಲಿ ಒಂದೇ ಕುಟುಂಬದ ನಾಲ್ವರ ಸಾವು: ಡೆತ್​ನೋಟ್​ನ ಜಾಡು ಹಿಡಿದು ಹೋಗುತ್ತಿದ್ದಂತೆ ಆ ಲೇಡಿಯ ಸ್ಫೋಟಕ ರಹಸ್ಯ ಬಯಲು

    ಪತ್ನಿ ಬಾಣಂತನಕ್ಕೆ ಹೋದಾಗ ಆ ಒಂದು ಫೋಟೋ ತೋರಿಸಿ ನಾದಿನಿ ಮೇಲೆ ನಿರಂತರ ರೇಪ್: ವಿಷ್ಯ ಬಯಲಾಗ್ತಿದ್ದಂತೆ ಹೈಡ್ರಾಮ

    https://www.vijayavani.net/a-tumkur-dogcubs-snake/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts