More

    ಮಂಗಳೂರಿನ ಮರೈನ್ ಬಂಗಲೆ ಇನ್ನು ಸಚಿವರ ಕಚೇರಿ: ಆಂಗ್ಲರ ಆಳ್ವಿಕೆ ಕಾಲದ ಕಟ್ಟಡಕ್ಕೆ ಹೊಸ ಲುಕ್

    |ಪಿ.ಬಿ.ಹರೀಶ್ ರೈ ಮಂಗಳೂರು
    ಮಂಗಳೂರಿನ ಕೇಂದ್ರ ಭಾಗದಲ್ಲಿ ನಿಷ್ಪ್ರಯೋಜಕ ಸ್ಥಿತಿಯಲ್ಲಿದ್ದ ಆಂಗ್ಲರ ಆಳ್ವಿಕೆಯ ಕಾಲದ ಭವ್ಯ ಬಂಗಲೆ, ಸುಸ್ಥಿತಿಗೆ ಮರಳಿದೆ. ಸರ್ಕಾರಿ ಸ್ವಾಮ್ಯದ ಈ ಬಂಗಲೆ ನವೀಕರಣಗೊಂಡಿದ್ದು ಶೀಘ್ರದಲ್ಲೇ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರ ಅಧಿಕೃತ ಕಚೇರಿಯಾಗಲಿದೆ.

    ಶತಮಾನದ ಹಿಂದೆ ನಗರದ ಸ್ಟೇಟ್ ಬ್ಯಾಂಕ್-ರೊಸಾರಿಯೊ ಚರ್ಚ್ ರಸ್ತೆ ಬಲಭಾಗದಲ್ಲಿ ಈ ಭವ್ಯ ಬಂಗಲೆ ನಿರ್ಮಾಣವಾಗಿತ್ತು. ಆಂಗ್ಲರ ಆಳ್ವಿಕೆ ಕಾಲದಲ್ಲಿ ಹಳೇ ಬಂದರು ಪ್ರಮುಖ ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿದ್ದು, 1918ರಿಂದ ಈ ಬಂಗಲೆ ಬಂದರು ಅಧಿಕಾರಿಗಳ ನಿವಾಸವಾಗಿತ್ತು. ಮರೈನ್ ಬಂಗಲೆ ಎಂದೇ ಗುರುತಿಸಲ್ಪಟ್ಟಿದ್ದ ಈ ಕಟ್ಟಡ ಸ್ವಾತಂತ್ರೃ ಬಳಿಕ ಬಂದರು ವಿಶ್ವಸ್ಥ ಮಂಡಳಿ (ಪೋರ್ಟ್ ಟ್ರಸ್ಟ್)ವ್ಯಾಪ್ತಿಗೆ ಒಳಪಟ್ಟಿತ್ತು.

    ನಿರ್ವಹಣೆ ಕೊರತೆ: 1980ರಲ್ಲಿ ಬಂದರು, ಒಳನಾಡು ಜಲಸಾರಿಗೆ ಇಲಾಖೆ ವ್ಯಾಪ್ತಿಗೆ ಸೇರಿದ ಮರೈನ್ ಬಂಗಲೆಯನ್ನು ಬಂದರು ಅಧಿಕಾರಿಗಳು ಬಳಸುತ್ತಿದ್ದರು. ಕ್ರಮೇಣ ನಿರ್ವಹಣೆ ಕೊರತೆಯಿಂದ ಕಟ್ಟಡ ಕಳೆಗುಂದಿತ್ತು. ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲೇ ಬಂಗಲೆ ಇದ್ದರೂ ಈ ಹೆರಿಟೇಜ್ ಕಟ್ಟಡದ ಸದ್ಬಳಕೆ ಮಾಡಲು ಅಡಳಿತ ವ್ಯವಸ್ಥೆ ಗಮನ ಹರಿಸಿರಲಿಲ್ಲ. ಆವರಣದಲ್ಲಿ ಹುಲ್ಲು, ಗಿಡಗಂಟಿ ಬೆಳೆದು ಬಂಗಲೆ ಪಾಳುಬಿದ್ದಿತ್ತು.

    ಸಚಿವರ ಕಾಳಜಿ: ಎಸ್.ಅಂಗಾರ ಸಚಿವರಾದ ಬಳಿಕ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಕಚೇರಿ ತೆರೆಯಲು ಸೂಕ್ತ ಸರ್ಕಾರಿ ಕಟ್ಟಡದ ಹುಡುಕಾಟದಲ್ಲಿದ್ದರು. ಜನತೆಗೆ ಅನುಕೂಲವಾಗಲು ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಸಮೀಪವೇ ಕಚೇರಿ ತೆರೆಯುವುದು ಅವರ ಬಯಕೆಯಾಗಿತ್ತು. ಆ ಹೊತ್ತಿಗೆ ಬಂದರು ಇಲಾಖೆಯ ಸ್ವಾಮ್ಯದಲ್ಲಿದ್ದ ಈ ಬಂಗಲೆ ಸಚಿವರ ಗಮನಕ್ಕೆ ಬಂತು. ತಕ್ಷಣ ಅದರ ನವೀಕರಣಕ್ಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈಗ ಕಟ್ಟಡದ ದುರಸ್ತಿ ಪೂರ್ಣಗೊಂಡಿದ್ದು, ಆವರಣದಲ್ಲಿ ಇಂಟರ್‌ಲಾಕ್ ಆಳವಡಿಸಲಾಗಿದೆ. ಬಂಗಲೆ ಹಾಗೂ ಆವರಣ ಸುಂದರವಾಗಿ ಕಂಗೊಳಿಸುತ್ತಿದೆ.

    ಬಂದರು ಇಲಾಖೆಗೆ ಸೇರಿದ ಬಂಗಲೆ ಬಳಕೆಯಾಗದೆ ನಿಷ್ಪ್ರಯೋಜಕ ಸ್ಥಿತಿಯಲ್ಲಿತ್ತು. ಇದನ್ನು ನವೀಕರಣಗೊಳಿಸಿ ಇಲಾಖೆ ಸಚಿವರ ಕಚೇರಿಯಾಗಿ ಮಾರ್ಪಾಡು ಮಾಡಲಾಗಿದೆ. ವಾಹನಗಳ ಪಾರ್ಕಿಂಗಿಗೆ ಸಾಕಷ್ಟು ಸ್ಥಳಾವಕಾಶವಿದೆ. ಸಾಮಾನ್ಯವಾಗಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಖಾತೆ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಕರಾವಳಿಯವರಿಗೆ ನೀಡುವ ಕಾರಣ ಭವಿಷ್ಯದಲ್ಲಿಯೂ ಈ ವಿಶಾಲ ಕಚೇರಿ ಸಹಕಾರಿಯಾಗಲಿದೆ. ಜ.17ರಂದು ಜನಪ್ರತಿನಿಧಿಗಳು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಕಚೇರಿ ಉದ್ಘಾಟನೆ ನೆರವೇರಲಿದೆ.
    |ಎಸ್.ಅಂಗಾರ ಮೀನುಗಾರಿಕೆ- ಬಂದರು ಇಲಾಖೆ ಸಚಿವರು

    ಈ ಬಂಗಲೆಯನ್ನು ಬಂದರು ಅಧಿಕಾರಿ ಬಳಸುತ್ತಿದ್ದರು. ಅವರು ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆಗೊಂಡ ಬಳಿಕ ಕಟ್ಟಡ ಖಾಲಿ ಬಿದ್ದಿತ್ತು. ಈಗ ಸಚಿವ ಎಸ್.ಅಂಗಾರ ಅವರ ಸೂಚನೆ ಮೇರೆಗೆ 3 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ಇನ್ನು ಬಂದರು ಸಚಿವರ ಕಚೇರಿಯಾಗಿ ಈ ಕಟ್ಟಡ ಬಳಕೆಯಾಗಲಿದೆ.
    |ನಿರಂಜನ ಮೂರ್ತಿ ಸಹಾಯಕ ಅಧಿಕಾರಿ(ಆಡಳಿತ), ಬಂದರು ಇಲಾಖೆ, ಮಂಗಳೂರು

    ಪುತ್ತೂರಲ್ಲಿ ಮಗನಿಂದಲೇ ತಾಯಿ ಮೇಲೆ ಅತ್ಯಾಚಾರ! ನಾನು ನಿನ್ನಮ್ಮ ಪ್ಲೀಸ್..​ ಬಿಟ್​ಬಿಡು… ಎಂದು ಚೀರಾಡಿದ್ರೂ 2 ಬಾರಿ ವಿಕೃತಿ ಮೆರೆದ

    ಬರೋಬ್ಬರಿ 6 ಅಡಿ ಮೇಲೆದ್ದ ಡುಪ್ಲೆಕ್ಸ್​ ಮನೆ! ಶಿವಮೊಗ್ಗದಲ್ಲಿ 150 ಜಾಕ್​ ಬಳಸಿ ಬಿಹಾರಿ ಕಾರ್ಮಿಕರ ಮ್ಯಾಜಿಕ್​

    ಪ್ರೇಯಸಿಯನ್ನ ಕೊಂದು ಶವಕ್ಕೆ ಸ್ನಾನ ಮಾಡಿಸಿ ಇಡೀ ರಾತ್ರಿ ಅದರೊಟ್ಟಿಗೆ ಇದ್ದ! ಬೆಳಗಾಗುತ್ತಿದ್ದಂತೆ ನಾಟಕ ಶುರು…

    ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟ ತುಮಕೂರು ಎಸ್​​ಪಿ! ಠಾಣೆ ಮುಂದೆ ಕಾರು ಬರ್ತಿದ್ದಂತೆ ಪಿಎಸ್​ಐ ಗಢಗಢ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts