More

    ಮಂಡ್ಯ ಜಿಲ್ಲೆಗೆ ಸಿಹಿ ಸುದ್ದಿ: ಮೈಶುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಸಿಎಂ ನೇತೃತ್ವದಲ್ಲಿ ನಡೆದ ಸಭೆ ಸಕ್ಸಸ್

    ಬೆಂಗಳೂರು: ಮೈ ಶುಗರ್​ ಸಕ್ಕರೆ ಕಾರ್ಖಾನೆಯನ್ನು ಪ್ರಾಯೋಗಿಕವಾಗಿ ಎರಡು ವರ್ಷ ಸರ್ಕಾರವೇ ನಡೆಸಲು ನಿರ್ಧರಿಸಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

    ಬೆಂಗಳೂರಿನಲ್ಲಿ ಸೋಮವಾರ ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆ ನಡೆಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮೂರು ತಿಂಗಳಲ್ಲಿ ಮೈಶುಗರ್ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಹಣಕಾಸು ನೆರವು ನೀಡಲಾಗುವುದು. ಕಬ್ಬಿನ ಉಪ ಉತ್ಪನ್ನಗಳನ್ನು ತಯಾರಿಸಲು ಆದ್ಯತೆ ನೀಡಲಾಗುವುದು. ಕೂಡಲೇ ದಕ್ಷ ಅಧಿಕಾರಿಯನ್ನು ಎಂಡಿಯಾಗಿ ನೇಮಕ ಮಾಡ್ತೇವೆ. ಅಗತ್ಯ ಮಿಶಿನರಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಖಾಸಗೀಕರಣ ಪ್ರಸ್ತಾಪವನ್ನ ಸದ್ಯಕ್ಕೆ ವಾಪಸ್​ ಪಡೆಯುತ್ತೇವೆ ಎಂದರು.

    ಮುಂದಿನ ಸೀಜನ್​ನ ಕಬ್ಬನ್ನ ಅರೆಯಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗುವುದು. ಈಗ ಎಷ್ಟು ಬೇಕು‌ ಅಷ್ಟು ಹಣ ಬಿಡುಗಡೆ ಮಾಡ್ತೇವೆ. ಕಾರ್ಖಾನೆಯಲ್ಲಿ ಮಿಶಿನರಿ ಸಮಸ್ಯೆ ಇದೆ. ಕೇವಲ ಸಕ್ಕರೆ ಉತ್ಪಾದನೆ ಮಾಡಿದ್ರೆ ಕಷ್ಟವಾಗಲಿದೆ. ತಾಂತ್ರಿಕ ಎಕ್ಸ್‌ಫರ್ಟ್ ಕಮಿಟಿ ರಚಿಸುತ್ತೇವೆ. ಎಂಡಿ, ಇಂಡಸ್ಟ್ರಿಯಲ್ ಎಕ್ಸ್​ಫರ್ಟ್ ನೇಮಕ ಮಾಡ್ತೇವೆ. ಈ ಬಗ್ಗೆ ಕ್ಯಾಬಿನೆಟ್​ನಲ್ಲಿ ಅಂತಿಮ ತೀರ್ಮಾನ ಮಾಡ್ತೇವೆ ಎಂದು ಸಿಎಂ ಹೇಳಿದರು.

    ಸಿಎಂ ಪ್ರತಿಭಟನೆ ಸ್ಥಳಕ್ಕೆ ಬಂದಿದ್ದರು. ಆಗ ಅ.18ರಂದು ಸಭೆ ಕರೆಯುತ್ತೇನೆ ಅಂದಿದ್ದರು. ಇವತ್ತು ಸಭೆಯನ್ನ ನಡೆಸಿದ್ರು. ಸರ್ಕಾರವೇ ಕಾರ್ಖಾನೆಯನ್ನು ಮುಂದುವರಿಸುವುದಾಗಿ ಹೇಳಿದೆ. 25 ಸಕ್ಕರೆ ಕಾರ್ಖಾನೆಗಳಿಗೆ ಇದು ಮಾದರಿಯಾಗಿದೆ. ಮಂಡ್ಯ ಜಿಲ್ಲೆಯ ಘನತೆ ಎತ್ತಿ ಹಿಡಿದಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಂಡ್ಯ ಜಿಲ್ಲೆ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಸುನಂದ ಜಯರಾಮ್ ಹೇಳಿದರು.

    ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಮಂಡ್ಯ ಜಿಲ್ಲೆ ಹಿತರಕ್ಷಣಾ ಸಮಿತಿ ವತಿಯಿಂದ ದೊಡ್ಡ ಹೋರಾಟ ಮಾಡಿದ್ದೆವು. ಸರ್ವ ಪಕ್ಷದ ಸಭೆಯಲ್ಲಿ ಅ.18ರಂದು ಸಿಹಿ ನೀಡೋದಾಗಿ ಸಿಎಂ ಹೇಳಿದ್ರು. ಎಲ್ಲ ಸಂಘಟನೆ ಪರವಾಗಿ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಸಕ್ಕರೆ ಅರೆಯುವ ಕೆಲಸ ಮಾಡೋದಾಗಿ ಹೇಳಿದ್ದಾರೆ. ಇದು ಖುಷಿ ತಂದಿದೆ ಎಂದರು.

    ರೈತ ಸಂಘದ ಅಧ್ಯಕ್ಷ ಬಡಲಗರಪುರ ನಾಗೇಂದ್ರ ಮಾತನಾಡಿ, ಸರ್ಕಾರವೇ ಕಾರ್ಖಾನೆ ನಡೆಸಲು ತೀರ್ಮಾನಿಸಿದೆ. ರೈತರ ಪರವಾಗಿ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಎರಡು ವರ್ಷ ಸರ್ಕಾರವೇ ನಡೆಸಲು ತೀರ್ಮಾನ ಮಾಡಿದೆ. ಎರಡು ವರ್ಷದ ಬಳಿಕ ಚರ್ಚೆ ಮಾಡೋಣ ಎಂದಿದ್ದಾರೆ. ಸರ್ಕಾರ ಸೂಕ್ತವಾಗಿ ಸ್ಪಂದಿಸಿದೆ. ಹೀಗಾಗಿ ನಮ್ಮ ಹೋರಾಟವನ್ನು ಕೈಬಿಡುವ ಬಗ್ಗೆ ಮಂಡ್ಯಕ್ಕೆ ಹೋಗಿ ತೀರ್ಮಾನ ಮಾಡ್ತೇವೆ ಎಂದರು.

    ಸಭೆಯಲ್ಲಿ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಶಂಕರಪಾಟೀಲ್ ಮುನೇನಕೊಪ್ಪ, ಡಾ.ನಾರಾಯಣಗೌಡ, ಎಸ್.ಟಿ.ಸೋಮಶೇಖರ, ಸಂಸದೆ ಸುಮಲತಾ ಅಂಬರೀಶ್, ಶಾಸಕರಾದ ಪುಟ್ಟರಾಜು, ಡಿ.ಸಿ. ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್. ಎನ್. ಪ್ರಸಾದ್​ ಭಾಗವಹಿಸಿದ್ದರು.

    ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನೇತ್ರಾವತಿ ನದಿಗೆ ಹಾರಿ ವೃದ್ಧ ಆತ್ಮಹತ್ಯೆ! ಜೇಬಲ್ಲಿ ಸಿಕ್ತು ಸುಳಿವು

    ಲವ್​-ಸೆಕ್ಸ್​ ದೋಖಾ: ಎಎಸ್​ಐ ಸೇರಿ 8 ಮಂದಿ ವಿರುದ್ಧ ಎಫ್​ಐಆರ್! ಯುವತಿ ಸತ್ತ 11 ದಿನಕ್ಕೆ ಸಿಕ್ತು ಡೆತ್​ನೋಟ್​

    ಪರಸ್ತ್ರೀ ಜತೆ ಗ್ರಾಪಂ ಅಧ್ಯಕ್ಷೆ ಗಂಡನ ಕಾಮದಾಟ! ವಾಟ್ಸ್ಆ್ಯಪ್​ ಗ್ರೂಪ್​ಗೆ ತನ್ನದೇ ಫೋಟೋ ತಾನೇ ಹಾಕಿಕೊಂಡ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts