More

    ಕೆಆರ್​ಎಸ್​ ಬಾಗಿಲಿಗೆ ಸುಮಲತಾರನ್ನು ಅಡ್ಡಡ್ಡ ಮಲಗಿಸ್ಬೇಕು: ಮಾಜಿ ಸಿಎಂ ಆದವರಿಗೆ ಭಾಷೆ ಮೇಲೆ ಹಿಡಿತ ಇಲ್ವಾ?

    ಬೆಂಗಳೂರು: ಮಂಡ್ಯಕ್ಕೆ ಇಂಥ ಸಂಸದರು ಈ ಹಿಂದೆ ಸಿಕ್ಕಿಲ್ಲ, ಮುಂದೆ ಸಿಗುವುದೂ ಇಲ್ಲ. ಕೆಆರ್​​ಎಸ್ ​​ಅನ್ನು ಸಂಸದೆ ಸುಮಲತಾ ಅಂಬರೀಷ್​ ಅವರೇ ರಕ್ಷಣೆ ಮಾಡುತ್ತಾರಂತೆ. ಕೆಆರ್​ಎಸ್​ ರಕ್ಷಣೆಗಾಗಿ ಅವರನ್ನೇ ಜಲಾಶಯದ ಗೇಟ್ ಬಳಿ ಅಡ್ಡಡ್ಡ ಮಲಗಿಸಿದರೆ ಎಲ್ಲವೂ ಸರಿಯಾಗಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ ಬೆನ್ನಲ್ಲೇ ಸುಮಲತಾ ಕೂಡ ಟಾಂಗ್​ ಕೊಟ್ಟಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾಡಿದ ಸುಮಲತಾ, ಮಾಜಿ ಸಿಎಂ ಆದವರಿಗೆ ಭಾಷೆ ಮೇಲೆ ಹಿಡಿತ ಇಲ್ವಾ? ಯಾವ ಮಾತು ಆಡಬೇಕು? ಯಾವ ಮಾತು ಆಡಬಾರದು ಅನ್ನೋ ಜ್ಞಾನ ಅವರಿಗೆ ಇಲ್ವಾ? ಈ ರೀತಿಯ ಮಾತು ಒಪ್ಪುವಂಥದ್ದಾ? ನಾನು ಸಂಸದೆ ಅನ್ನೋದಕ್ಕಿಂತ ಇಬ್ಬ ಹೆಣ್ಣುಮಗಳು. ಇಂತಹ ವೈಯಕ್ತಿಕ ಟೀಕೆಗಳು ನನ್ನ ಮೇಲೆ ಪರಿಣಾಮ ಬಿರೋದಿಲ್ಲ. ಐ ಡೋಂಟ್ ಕೇರ್, ನಾನು ಯಾವತ್ತೂ ಅಂತಹ ಲೆವೆಲ್​​ಗೆ ಹೋಗಿ ಪ್ರತಿಕ್ರಿಯೆ ನೀಡಿಲ್ಲ ಎಂದು ಕುಮರಸ್ವಾಮಿಯ ಮಾತಿನ ದಾಟಿಗೆ ಚಾಟಿ ಬೀಸಿದರು. ಇದನ್ನೂ ಓದಿರಿ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಬಂದವ ಮಾಡಬಾರದ್ದನ್ನ ಮಾಡಿಬಿಟ್ಟ! ಮೊಬೈಲ್​ನಲ್ಲಿ ಸೆರೆಯಾಯ್ತು ಘೋರ ಕೃತ್ಯ

    ಸಂಸದರು ಅನ್ನೋದು ಬಿಡಿ, ಒಂದು ಹೆಣ್ಣಿನ ಬಗ್ಗೆ ಹೇಗೆ ಮಾತಾಡಬೇಕು ಅಂತಾ ಅವರು ಅರ್ಥ ಮಾಡಿಕೊಳ್ಳಬೇಕಿದೆ. ಈ ರೀತಿ ಮಾತುಗಳಿಂದ ಜನರಿಗೆ ಎಷ್ಟು ನೋವಾಗಿದೆ ಅಂತಾ ಅವರಿಗೆ ಇನ್ನೂ ಅರ್ಥವಾಗಿಲ್ಲ ಅನ್ಸುತ್ತೆ. ಜನರು ಈಗಾಗಲೇ ಯಾರಿಗೆ ಬುದ್ಧಿ ಕಲಿಸಿದ್ದಾರೆ ಅಂತಾ ನಮ್ಮ ಮುಂದೆ ಸಾಕ್ಷಿಯಿದೆ ಎನ್ನುವ ಮೂಲಕ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜನತೆ ಕುಮಾರಸ್ವಾಮಿ ಮಗನಿಗೆ ಸೋಲುಣಿಸಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.

    ಕೆಆರ್​ಎಸ್​ ಡ್ಯಾಂ ಬಿರುಕು ಬಗ್ಗೆ ತನಿಖೆ ಮಾಡಲು ಒತ್ತಾಯಿಸಿದ್ದೇನೆ. ಅಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ರೈತರು ನನಗೆ ಮನವಿ ಮಾಡಿದ್ದರು. ನಿರಾಣಿ ಅವರನ್ನು ಖುದ್ದಾಗಿ ಕರೆದುಕೊಂಡು ಹೋಗಿ ಸ್ಥಳ ತೋರಿಸಿದ್ದೆ. ಅಕ್ರಮ ಆಗಿದ್ದಕ್ಕೆ 100 ಕೋಟಿ ರೂ. ದಂಡ ಹಾಕಿದ್ದಾರೆ. ದಂಡವನ್ನು ಸುಮ್ಮನೆ ಹಾಕೋದಕ್ಕೆ ಆಗುತ್ತಾ? ಅಕ್ರಮ ಗಣಿಗಾರಿಕೆ ತಡೆದ್ರೆ ಮಂಡ್ಯದ ಖಜಾನೆಗೆ ಸಾವಿರಾರು ಕೋಟಿ ಬರಲಿದೆ. ಇದರಿಂದ ಯಾರಿಗೆ ಪ್ರಯೋಜನ? ಯಾರಿಗೆ ನಷ್ಟ ಅಂತ ತಿಳಿವಳಿಕೆ ಇರೋರು ಅರ್ಥ ಮಾಡಿಕೊಳ್ಳಬೇಕು. ಇದರಲ್ಲಿ ಬೇರೆಯವರು ಯಾಕೆ ಆತಂಕ ಪಡುತ್ತಿದ್ದಾರೆ ಗೊತ್ತಿಲ್ಲ ಎಂದರು.

    ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏನು ಮಾಡಿದ್ರು? ಅವರು ಸಿಎಂ ಆಗಿದ್ದಾಗ ಯಾಕೆ ಮೈ ಶುಗರ್ ಪ್ರಾರಂಭ ಮಾಡಿಲ್ಲ ಎಂದು ಪ್ರಶ್ನಿಸಿದ ಸುಮಲತಾ, ಎಲ್ಲರ ಜತೆ ಮಾತನಾಡಿ ಕಾರ್ಖಾನೆ ಪ್ರಾರಂಭಿಸಿ ಎಂದು ಮನವಿ ಮಾಡಿದ್ದೇನೆ. ಯಾವುದಾದರೂ ಒಂದು ಮಾದರಿಯಲ್ಲಿ ಕಾರ್ಖಾನೆ ತೆರೆಯಲಿ. ಮೈಶುಗರ್​ನಲ್ಲಿ 400 ಕೋಟಿ ರೂ. ಅಕ್ರಮ ಆಗಿದೆ ಅಂತ ಹೇಳಿದ್ರು. ರೈತರ ಪರವಾಗಿ ಆ ಕಾರ್ಖಾನೆ ಪ್ರಾರಂಭ ಆಗಬೇಕು ಅಷ್ಟೆ. ನಾನು ಖಾಸಗೀಕರಣ ಮಾಡಿ ಅಂತ ಹೇಳಿಲ್ಲ ಎಂದರು.

    ಕೆಆರ್​ಎಸ್​ ಡ್ಯಾಂ ಬಾಗಿಲಿಗೆ ಸಂಸದೆ ಸುಮಲತಾರನ್ನು ಅಡ್ಡಡ್ಡ ಮಲಗಿಸಬೇಕು: ಎಚ್​.ಡಿ. ಕುಮಾರಸ್ವಾಮಿ

    ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಬಂದವ ಮಾಡಬಾರದ್ದನ್ನ ಮಾಡಿಬಿಟ್ಟ! ಮೊಬೈಲ್​ನಲ್ಲಿ ಸೆರೆಯಾಯ್ತು ಘೋರ ಕೃತ್ಯ

    ಕಿರುಕುಳ ಸಹಿಸಲಾಗದೆ ತವರಿಗೆ ಹೋಗಿದ್ದ ಪತ್ನಿಗೆ ಫೋನ್​ನಲ್ಲೇ ಹಿಂಸಿಸುತ್ತಿದ್ದ ಭೂಪ! ನಡೆದೇ ಹೋಯ್ತು ದುರಂತ

    ಕುಮಾರಸ್ವಾಮಿ ಅವರನ್ನ ನೇರ ಭೇಟಿ ಆಗ್ಬೇಕಂದ್ರೆ ಹೀಗೆ ಮಾಡಿ… ಸಾರ್ವಜನಿಕರಿಗಾಗಿ ಸ್ಥಳ-ಸಮಯ ಮೀಸಲಿದೆ…

    ಹುಟ್ಟೂರಲ್ಲೇ 14 ವರ್ಷದ ಬಾಲಕಿ ಜತೆ ಪರಪುರುಷರ ಕಾಮದಾಟ​! ಹೆತ್ತವರ ಸಾಥ್​, ಮಧುಗಿರಿ ಗೌರಿಗಾಗಿ ಹುಡುಕಾಟ​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts