More

    ಗರ್ಭಿಣಿಯಾಗಿದ್ದ ಅಪ್ರಾಪ್ತೆ ಶವವಾಗಿ ಪತ್ತೆ! ಮಂಡ್ಯದಲ್ಲಿ 14ರ ಬಾಲಕಿ ಬಾಳಿಗೆ ಕೊಳ್ಳಿ ಇಟ್ಟನಾ 50ರ ವ್ಯಕ್ತಿ?

    ಮಂಡ್ಯ: ಗರ್ಭಿಣಿಯಾಗಿದ್ದ ಅಪ್ರಾಪ್ತೆ ಬಾಲಕಿ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅತ್ಯಾಚಾರ ಮತ್ತು ಕೊಲೆ ಆರೋಪ ಕೇಳಿಬಂದಿದೆ.

    ಕೆ.ಆರ್​.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದ 14 ವರ್ಷದ ಬಾಲಕಿ ಮೃತ ದುರ್ದೈವಿ. 2 ವಾರದ ಹಿಂದೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಈಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಗ ಬಾಲಕಿ ಗರ್ಭಿಣಿ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿತ್ತು. ಅಪ್ರಾಪ್ತ ಮಗಳು ಗರ್ಭಿಣಿ ಎಂಬ ವಿಚಾರ ತಿಳಿದು ಆಸ್ಪತ್ರೆಯಲ್ಲೇ ತಾಯಿ ಕುಸಿದು ಬಿದ್ದಿದ್ದಳು. ಆಗ ತನ್ನ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ತಾಯಿ ಬಳಿ ಮಗಳು ತಿಳಿಸಿದ್ದಳಂತೆ.

    ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು ಪಕ್ಕದ ಮನೆಯ 50 ವರ್ಷದ ಪರಮೇಶ್ ಎಂದು ತಾಯಿ ಬಳಿ ಬಾಲಕಿ ಬಾಯ್ಬಿಟ್ಟಿದ್ದಳು. ಆದರೆ, ಮರ್ಯಾದೆಗೆ ಅಂಜಿ ಬಾಲಕಿಯ ತಾಯಿ ಈ ವಿಚಾರವನ್ನ ಮುಚ್ಚಿಟ್ಟಿದ್ದರಂತೆ. ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ತಾಯಿ ಎಂದಿನಂತೆ ಗುರುವಾರ ಕೆಲಸಕ್ಕೆ ಹೋಗಿದ್ದರು. ವಾಪಸ್​ ಸಂಜೆ ಬಂದಾಗ, ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆಯಾಗಿದೆ. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಮೃತಳ ಪಾಲಕರು ಆರೋಪಿಸಿದ್ದಾರೆ. ಬಾಲಕಿ ಗರ್ಭಿಣಿ ಆಗಿರುವ ವಿಚಾರ ಊರಿಗೆ ಗೊತ್ತಾದ್ರೆ ತಾನು ತಪ್ಪಿತಸ್ಥ ಆಗ್ತೀನಿ ಎಂಬ ಭಯದಿಂದ ಬಾಲಕಿಯನ್ನ ಪರಮೇಶ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಮದ್ವೆ ಸಂಭ್ರಮ ಬೆನ್ನಲ್ಲೇ ಸೂತಕ ಛಾಯೆ: ಪತ್ನಿ-ಮಗಳ ಜತೆ ಹೇಮಾವತಿ ನಾಲೆಗೆ ಹಾರಿ ಇಂಜಿನಿಯರ್ ಆತ್ಮಹತ್ಯೆ

    ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ? ಮುದ್ದಾದ ಯುವತಿ ಬಾಳಿಗೆ ಕೊಳ್ಳಿ ಇಟ್ಟಿದ್ದೇಕೆ? ಮನಕಲಕುತ್ತೆ ಈ ಸ್ಟೋರಿ

    ಬೇರೆ ಬೇರೆ ಮದ್ವೆ ಆಗಿದ್ರೂ ಮಾಗಡಿಯಲ್ಲಿ ದುರಂತ ಅಂತ್ಯ ಕಂಡ ಜೋಡಿ! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts