More

    ಎಳೆ ಮಕ್ಕಳನ್ನು ಮೂಟೆಯ ರೀತಿ ಟ್ರಕ್​ ಮೇಲೆ ಎಸೆದರು!

    ರಾಯ್ಪುರ/ನವದೆಹಲಿ: ಕೋವಿಡ್​ ಲಾಕ್​ಡೌನ್​ ಹಿನ್ನೆಲೆಯಲ್ಲಿ ದುಡಿಮೆಯೂ ಇಲ್ಲದೆ, ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದೆ ನಮ್ಮೂರು ತಲುಪಿದರೆ ಸಾಕು ಎಂದು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಬಸ್​, ರೈಲು ಸೌಲಭ್ಯ ಇಲ್ಲದ ಕಾರಣ ತಮ್ಮ ಊರಿಗೆ ಹೋಗಲು ಸರಕು ಸಾಗಣೆ ಟ್ರಕ್​ಗಳನ್ನು ಆಶ್ರಯಿಸುತ್ತಿದ್ದಾರೆ.

    ದಾರಿಯಲ್ಲಿ ಬರುವ ಟ್ರಕ್​ಗಳ ಚಾಲಕರನ್ನು ಕಾಡಿಬೇಡಿ, ಅವರು ಕೇಳಿದಷ್ಟು ಹಣಕೊಟ್ಟು, ಕೂರಲು ಇರುವ ಸ್ವಲ್ಪ ಸ್ಥಳದಲ್ಲೇ ಕುಳಿತು ತಮ್ಮ ಊರಿಗೆ ಹೋಗುತ್ತಿದ್ದಾರೆ. ಹೀಗೆ ಒಂದು ಕುಟುಂಬ ಟ್ರಕ್​ ಏರುವ ಮುನ್ನ ಲಾರಿಯ ಕ್ಲೀನರ್​ ಕೈಗೆ ಕೊಡುವ ಎಳೆ ಮಕ್ಕಳನ್ನು, ಮೂಟೆಗಳ ರೀತಿಯಲ್ಲಿ ಲಾರಿಯ ಮೇಲೆ ಎಸೆಯುತ್ತಿರುವ ದೃಶ್ಯ ಎಂಥ ಕಲ್ಲೆದೆಯ ಮನುಷ್ಯನನ್ನೂ ಕರಗಿಸುತ್ತದೆ.

    ಛತ್ತೀಸ್​ಗಢದಲ್ಲಿ ಕಂಡುಬಂದ ಈ ದೃಶ್ಯ, ತಮ್ಮ ಊರಿಗೆ ಮರಳಬೇಕೆಂದು ಪಣ ತೊಟ್ಟಿರುವ ವಲಸೆ ಕಾರ್ಮಿಕರ ದುಃಸ್ಥಿತಿ ಎಂಥದ್ದು ಎಂಬುದನ್ನು ತೋರಿಸಿಕೊಡುತ್ತದೆ. ಒಂದು ಕೈಯಲ್ಲಿ ಹಗ್ಗವನ್ನು ಹಿಡಿದಿರುವ ವ್ಯಕ್ತಿ ಇನ್ನೊಂದು ಕೈಯಲ್ಲಿ ಎಳೆ ಮಗುವನ್ನು ಪಡೆದುಕೊಂಡು, ಅದನ್ನು ಮೂಟೆಯಂತೆ ಟ್ರಕ್​ನ ಮೇಲಕ್ಕೆ ಎಸೆಯುವ ವಿಡಿಯೋ ತುಣಕನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಪ್ರಕಟಿಸಿದ್ದಾರೆ.

    ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮನೆ ಬಾಗಿಲಿಗೇ ಸರಬರಾಜಾಗಲಿದೆ ಮದ್ಯ

    ಇದೇ ದೃಶ್ಯದ ಮತ್ತೊಂದು ಭಾಗದಲ್ಲಿ ಸೀರೆಯುಟ್ಟಿರುವಾಕೆ ಹಗ್ಗ ಹಿಡಿದು ಟ್ರಕ್​ ಮೇಲೇರಲು ಪಡಿಪಾಟಲು ಪಡುತ್ತಾಳೆ.

    ತಾವೆಲ್ಲರೂ ತೆಲಂಗಾಣದಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದವರು. ಲಾಕ್​ಡೌನ್​ ಹಿನ್ನೆಲೆಯಲ್ಲಿ ಜಾರ್ಖಂಡ್​ನಲ್ಲಿರುವ ಮನೆಗೆ ಮರಳಲು ಯತ್ನಿಸುತ್ತಿದ್ದೇವೆ. ಅಲ್ಲಿಗೆ ತೆರಳಲು ಬಸ್​, ರೈಲು ಸೌಕರ್ಯ ಇಲ್ಲದ ಕಾರಣ ಛತ್ತೀಸಗಢದಲ್ಲಿ ಸಿಕ್ಕ ಟ್ರಕ್​ ಅನ್ನು ಹತ್ತುತ್ತಿರುವುದಾಗಿ ಕಾರ್ಮಿಕರು ಅಲವತ್ತುಕೊಂಡಿದ್ದಾರೆ.

    ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಶ್ರಮಿಕ್​ ಸ್ಪೆಶಲ್​ ರೈಲುಗಳ ಸಂಚಾರ ಏರ್ಪಡಿಸಿರುವ ಬಗ್ಗೆ ಗಮನಸೆಳೆದಾಗ, ತಮಗೆ ಆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಹಾಗಾಗಿ, ಸಿಕ್ಕ ಟ್ರಕ್​ಗಳನ್ನು ಹತ್ತಿಕೊಂಡು ಊರಿಗೆ ಹೋಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

    ಲಾಕ್​ಡೌನ್​ನಲ್ಲೇ ಸೂಪರ್​ಸ್ಟಾರ್​ ರಜನಿಕಾಂತ್​ ಕಡೆಯಿಂದ ಬಂತು ಸಿಹಿಸುದ್ದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts