More

  ಅತ್ತೆ ಮನೆಯವರನ್ನು ಭಯಾನಕ ವಿಷ ತಿನ್ನಿಸಿ ಕೊಂದ ಅಳಿಯ: ಅವನಿಗೆ ಪ್ರೇರಣೆಯಾಗಿದ್ದು ಸದ್ದಾಂ ಹುಸೇನ್​ ಅಂತೆ!

  ನವದೆಹಲಿ: ಇರಾಕ್ ಸರ್ವಾಧಿಕಾರಿಯಾಗಿದ್ದ ಸದ್ದಾಂ ಹುಸೇನ್​​ನಿಂದ ಪ್ರೇರಿತನಾಗಿ ಯುವಕನೊಬ್ಬ ಭಯಾನಕ ಸ್ಲೋ ಪಾಯಷನ್ ಎಂದೇ ಹೆಸರಾದ ಥಾಲಿಯಂ ತಿನ್ನಿಸಿ ತನ್ನ ಕುಟುಂಬದ ಇಬ್ಬರನ್ನು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

  ಕೊಲೆ ಆರೋಪದ ಮೇಲೆ 37 ವರ್ಷದ ವರುಣ್ ಅರೋರಾ ಎಂಬುವನನ್ನು ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಪೊಲೀಸರು ಬುಧವಾರ ಬಂಧಿಸಿದ್ದಾರೆ. ವರುಣ್ ಅತ್ತೆ ಅನಿತಾ ಹಾಗೂ ನಾದಿನಿ ಪ್ರಿಯಾಂಕಾ ಎಂಬುವವರೇ ಕೊಲೆಯಾದವರು.

  ಸದ್ದಾಂ ಹುಸೇನ್ ತನ್ನ ರಾಜಕೀಯ ವೈರಿಗಳನ್ನು ಕೊಲ್ಲಲು ವಿಷಕಾರಿ ಪದಾರ್ಥವಾದ ಥಾಲಿಯಂ ತಿನ್ನಿಸಿ ಕೊಲೆ ಮಾಡುತ್ತಿದ್ದ. ಇದನ್ನು ಸೇವಿಸಿದವರು ದಿನದಿಂದ ದಿನಕ್ಕೆ, ವಿಚಿತ್ರ ಖಾಯಿಲೆಗಳಿಗೆ ಒಳಗಾಗಿ ಸಾವಿಗೆ ತುತ್ತಾಗುತ್ತಾರೆ.

  ಇದನ್ನೂ ಓದಿ: ಭಾರತದಲ್ಲಿ ಶೇ. 30 ಮುಸ್ಲಿಮರು ಒಂದಾದ್ರೆ ಸಾಕು, 4 ಪಾಕಿಸ್ತಾನ್‌ ಸೃಷ್ಟಿ ಆಗ್ಬಿಡುತ್ತೆ!; ದೇಶದ್ರೋಹಿ ಹೇಳಿಕೆ ನೀಡಿದ ರಾಜಕಾರಣಿ

  ಇಂತಹದೇ ಐಡಿಯಾ ಮಾಡಿದ್ದ ವರುಣ್ ಅರೋರಾ, ತನಗೆ ಅತ್ತೆ ಮನೆಯಲ್ಲಿ ಹೆಂಡತಿ, ಅತ್ತೆ, ಆತನ ಗಂಡ, ನಾದಿನಿ ಸೇರಿ ಕಿರುಕುಳ ನೀಡುತ್ತಿದ್ದಾರೆ ಎಂದು ಸಂಚು ಮಾಡಿ ಜ. 29 ರಂದು ಪಿಶ್​ ಕರಿಯಲ್ಲಿ ಥಾಲಿಯಂ ಬೆರೆಸಿ ಅವರಿಗೆ ಊಟ ಕೊಟ್ಟಿದ್ದ. ಅದನ್ನು ತಿಂದಿದ್ದ ಕುಟುಂಬದವರು, ಮಾರನೇ ದಿನ ತಲೆ ಸುತ್ತು, ಕೈಕಾಲುಗಳಲ್ಲಿ ಸೆಳೆತ, ಕೂದಲು ಉದುರುವಿಕೆ ಎಂದು ಆಸ್ಪತ್ರೆ ಸೇರಿದ್ದರು. ಫೆ 15 ರಂದು ಚಿಕಿತ್ಸೆ ಫಲಿಸದೇ ವರುಣ್ ಅತ್ತೆ ಅನಿತಾ (57) ಹಾಗೂ ನಾದಿನಿ ಪ್ರಿಯಾಂಕಾ (35) ಮೃತಪಟ್ಟಿದ್ದರು. ದೆಹಲಿಯ ಬಿಎಲ್ ಕಪೂರ್ ಆಸ್ಪತ್ರೆಯಲ್ಲಿ ಹೆಂಡತಿ ದಿವ್ಯಾ ಹಾಗೂ ಮಾವ ದೇವೆಂದ್ರ ಮೋಹನ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

  ವೈದ್ಯರು ನೀಡಿದ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳನ್ನು ನೋಡಿ ಪೊಲೀಸರಿಗೆ ಅನುಮಾನ ಬಂದು ವರುಣ್ ಅರೋರಾರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಲು ಥಾಲಿಯಂ ಬಳಿಸಿದ್ದೇನೆ ಎಂದು ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೇನ್ಸಿಸ್).

  ನಾನು ಗೆದ್ರೆ ಚಂದ್ರನಲ್ಲಿಗೆ ಟ್ರಿಪ್‌, ಹೆಲಿಕಾಪ್ಟರ್‌-ಮೂರಂತಸ್ತಿನ ಬಂಗ್ಲೆ ಕೊಡುವೆ… ಪ್ರಣಾಳಿಕೆ ನೋಡಿ ಹುಬ್ಬೇರಿಸಿದ್ರು, ಕಾರಣ ಕೇಳಿ ಭೇಷ್ ಎಂದ್ರು!

  ಸುಂದರಿ ಸಿಕ್ಕಳೆಂದು ಹಿರಿಹಿರಿ ಹಿಗ್ಗಿದ ಯುವಕ: ಮೊದಲ ರಾತ್ರಿಯೇ ಕೊಟ್ಟಳೊಂದು ಶಾಕ್‌, ದಾಖಲಾಯ್ತು ದೂರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts