More

    ಮಲೆನಾಡು ಗಿಡ್ಡ ಹಿರಿಯಜ್ಜಿ ಇನ್ನಿಲ್ಲ: 36 ವರ್ಷ ಬದುಕಿ ದಾಖಲೆ ಬರೆದಿದ್ದ ಕೌಲೆ ಇನ್ನು ನೆನಪು ಮಾತ್ರ

    ತಾಳಗುಪ್ಪ(ಸಾಗರ): ಸಮೀಪದ ಮುಸುವಳ್ಳಿ ನಾರಾಯಣ ಭಟ್ಟ ಅವರ ಗೋಶಾಲೆಯ 36 ವರ್ಷದ ಹಸು ಕೌಲೆ ಸೋಮವಾರ ಅಸುನೀಗಿದೆ. ಮಲೆನಾಡು ಗಿಡ್ಡ ಕಪಿಲೆ ತಳಿಯ ಈ ಹಸು 14 ಕರುಗಳಿಗೆ ಜನ್ಮ ನೀಡಿತ್ತು. ಸಾಮಾನ್ಯವಾಗಿ ಮಿಶ್ರ ತಳಿ ಗೋವಿನ ಆಯಸ್ಸು 15ರಿಂದ 20 ವರ್ಷ. ದೇಸಿ ತಳಿಯದ್ದಾದರೆ 20ರಿಂದ 25, ಅಬ್ಬಬ್ಬಾ ಎಂದರೆ 28 ವರ್ಷ. ಆದರೆ ಕೌಲೆ 36 ವರ್ಷ ಬದುಕಿ ದಾಖಲೆ ಬರೆದಿತ್ತು.

    ಇವರ ಮನೆಯಲ್ಲೇ ಇದ್ದ ಹಳ್ಳಿಕಾರ ತಳಿಯ ಆಕಳು ಲಕ್ಷ್ಮೀಗೆ 32 ವರ್ಷವಾಗಿತ್ತು. ಇದು 11 ಕರು ಹಾಕಿ ತಾನೂ ಕಮ್ಮಿ ಇಲ್ಲ ಎಂದು ಸಾಬೀತು ಮಾಡಿತ್ತಾದರೂ ಆರು ತಿಂಗಳ ಹಿಂದೆ ಮೃತಪಟ್ಟಿದೆ. ಹೊಸನಗರ ತಾಲೂಕು ನಿಟ್ಟೂರು ಗ್ರಾಪಂ ವ್ಯಾಪ್ತಿಯ ಕೊಳಕಿ ನಿವಾಸಿ ವಿಶ್ವೇಶ್ವರ ಹೆಗಡೆ ಅವರ ಮನೆಯನ್ನು ಬೆಳಗಿದ ಬೆಳ್ಳಿ ಆಕಳು 32 ವಸಂತ ಕಂಡಿತ್ತು. 15ಕ್ಕಿಂತ ಹೆಚ್ಚು ಕರುಗಳಿಗೆ ಜನ್ಮ ನೀಡಿದ್ದ ಬೆಳ್ಳಿ, ಜ.21ರಂದು ಇಹಲೋಕ ತ್ಯಜಿಸಿದೆ. ಹೀಗೆ ವಯಸ್ಸಿನಲ್ಲಿ ಹೆಸರು ಮಾಡಿದ್ದ ಮಲೆನಾಡಿನ ಮೂರು ಕಾಮಧೇನುಗಳೂ ಆರು ತಿಂಗಳಲ್ಲೇ ಗತಿಸಿವೆ.

    ಕನಸಾಗೇ ಉಳಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆ: ಆಕಳು ಬೆಳ್ಳಿಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿಸಬೇಕೆಂದು 2019-20ರಲ್ಲಿ ವಿಶ್ವೇಶ್ವರ ಹೆಗಡೆ ಅರ್ಜಿ ಸಲ್ಲಿಸಿದರು. ಕಾಲಮಿತಿಯಲ್ಲಿ ಸೂಕ್ತ ದಾಖಲೆ ಒದಗಿಸುವಂತೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹೇಳಿತ್ತು. ತಜ್ಞರ ಪ್ರಕಾರ ವಯಸ್ಸು ದೃಢೀಕರಣದ ಬಗ್ಗೆ ಹಲ್ಲುಗಳು, ಹಲ್ಲಿನ ಸವೆತ, ವಂಶವೃಕ್ಷ, ಸ್ಥಳೀಯ ಸಾಕ್ಷಿಗಳ ಅಧ್ಯಯನ ಮುಖ್ಯ. ಆದರೆ ರೈತರಿಗೆ ಈ ದಾಖಲೆಗಳನ್ನು ಸಿದ್ಧಪಡಿಸುವುದು ಕಷ್ಟ. ಗಮನ ಸೆಳೆದರೂ ಪಶುಸಂಗೋಪನಾ ಇಲಾಖೆ ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ಹಿರಿಯ ಹಸುಗಳೇ ಅಸುನೀಗಿದ್ದರಿಂದ ಹೈನುಗಾರರ ಪರಿಶ್ರಮಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮನ್ನಣೆ ಸಿಗುವುದು ಕನಸಾಗೇ ಉಳಿಯುವ ಸಾಧ್ಯತೆ ಹೆಚ್ಚು.

    ಹೃದಯಾಘಾತದಿಂದ ಲವ್ಲಿಬಾಯ್ ಟಗರು ಸಾವು: 8 ಲಕ್ಷ ರೂ. ಕೊಡ್ತೀವಿ ಅಂದ್ರೂ ಟಗರನ್ನು ಮಾರಲಿಲ್ಲ…

    ಟೂತ್​ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಸಾವು! ದಕ್ಷಿಣ ಕನ್ನಡ ಜಿಲ್ಲೇಲಿ ದುರಂತ

    ಹರ್ಷನ ಅಕ್ಕನಿಗೆ ಬಿಜೆಪಿಯಿಂದ ಟಿಕೆಟ್ ಕೊಡಿ, ನಾವು ಕಾಂಗ್ರೆಸ್​ನಿಂದ ಅಭ್ಯರ್ಥಿಯನ್ನೇ ಹಾಕಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts