More

    ಹೃದಯಾಘಾತದಿಂದ ಲವ್ಲಿಬಾಯ್ ಟಗರು ಸಾವು: 8 ಲಕ್ಷ ರೂ. ಕೊಡ್ತೀವಿ ಅಂದ್ರೂ ಟಗರನ್ನು ಮಾರಲಿಲ್ಲ…

    ಬಾಗಲಕೋಟೆ: ಗೆಲುವಿನ‌ ಸರದಾರ ಲವ್ಲಿಬಾಯ್ ಎಂದೇ ಹೆಸರುವಾಸಿಯಾಗಿದ್ದ ಲವ್ಲಿಬಾಯ್ ಟಗರು ಹೃದಯಾಘಾತದಿಂದ ಮೃತಪಟ್ಟಿದೆ. ಕಾಳಗಕ್ಕೆ ಹೆಸರಾಗಿದ್ದ, ಮುನ್ನೂರಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಹೊಡೆದು ಸೋಲಿಸಿದ್ದ ಲವ್ಲಿಬಾಯ್ ಟಗರು ಇನ್ನು ನೆನಪು ಮಾತ್ರ.

    ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದ ನಾಟಕಕಾರ ಎಚ್​.ಎನ್. ಸೇಬಣ್ಣವರ ಅವರ ಮನೆಯಲ್ಲಿ ಸಾಕಿದ್ದ ಲವ್ಲಿಬಾಯ್ ಟಗರು ಸಾಧನೆ ಅಸಮಾನ್ಯ. 8 ಲಕ್ಷ ರೂಪಾಯಿ ಕೊಡ್ತೀವಿ ಕೊಡಿ ಎಂದ್ರೂ ಈ ಟಗರನ್ನು ಸೇಬಣ್ಣವರ ಅವರು ಮಾರಾಟ ಮಾಡಿರಲಿಲ್ಲ. ಯಾಕಂದ್ರೆ ಈ ಟಗರು ಮೇಲೆ ಅವರಿಗೆ ಅಪಾರ ಪ್ರೀತಿ ಇತ್ತು. ಮುನ್ನೂರಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಹೊಡೆದು ಸೋಲಿಸಿದ್ದ ಈ ಲವ್ಲಿಬಾಯ್​ ಟಗರು ಚಿನ್ನ, ಬೆಳ್ಳೆ, ಬೈಕ್, ಹೋರಿ, ಲಕ್ಷಾಂತರ ರೂಪಾಯಿ ಬಹುಮಾನ ಗಳಿಸಿತ್ತು.
    ಹೃದಯಾಘಾತದಿಂದ ಲವ್ಲಿಬಾಯ್ ಟಗರು ಸಾವು: 8 ಲಕ್ಷ ರೂ. ಕೊಡ್ತೀವಿ ಅಂದ್ರೂ ಟಗರನ್ನು ಮಾರಲಿಲ್ಲ...

    6 ವರ್ಷ ವಯಸ್ಸಿಗೇ ಲವ್ಲಿಬಾಯ್​ ಟಗರು ಮಂಗಳವಾರ ಬದುಕಿನ ಪಯಣ ಮುಗಿಸಿದ್ದು, ಸೇಬಣ್ಣವರ ಕುಟುಂಬಕ್ಕೆ ತೀವ್ರ ಆಘಾತ ನೀಡಿದೆ. ಗ್ರಾಮಸ್ಥರೂ ಟಗರಿನ ಸಾವಿನ ಸುದ್ದಿ ಕೇಳಿ ಕಂಬನಿ ಮಿಡಿದಿದ್ದಾರೆ. ಮೃತ ಟಗರಿಗೆ ಗ್ರಾಮದಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಟಗರಿನ ಮೃತದೇಹಕ್ಕೆ ಹೂವಿನ ಮಾಲೆ, ಹಣೆಗೆ ಬೆಳ್ಳಿ ಖಡಗ, ದೇಹಕ್ಕೆ ಭಂಡಾರ ಬಳಿದು ಪ್ರಶಸ್ತಿಗಳನ್ನು ಪಾರ್ಥೀವ ಶರೀರದ ಮುಂದೆ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿ, ಅಂತಿಮ ದರ್ಶನ ಪಡೆಯಲು ಟಗರು ಅಭಿಮಾನಿಗಳಿಗೆ ವ್ಯವಸ್ಥೆ ಮಾಡಲಾಗಿದೆ.
    ಹೃದಯಾಘಾತದಿಂದ ಲವ್ಲಿಬಾಯ್ ಟಗರು ಸಾವು: 8 ಲಕ್ಷ ರೂ. ಕೊಡ್ತೀವಿ ಅಂದ್ರೂ ಟಗರನ್ನು ಮಾರಲಿಲ್ಲ...

    ಮಲೆನಾಡು ಗಿಡ್ಡ ಹಿರಿಯಜ್ಜಿ ಇನ್ನಿಲ್ಲ: 36 ವರ್ಷ ಬದುಕಿ ದಾಖಲೆ ಬರೆದಿದ್ದ ಕೌಲೆ ಇನ್ನು ನೆನಪು ಮಾತ್ರ

    ಶಿವಮೊಗ್ಗದ ಹರ್ಷನ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ನೆರವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts