More

    ಹುಲಿ ದಾಳಿಯಿಂದ ಹಸು ಗಾಯ

    ನಾಪೋಕ್ಲು: ಸಮೀಪದ ಹೋದವಾಡ ಗ್ರಾಮದ ಕೇಮಾಟ್ ಕಾಳಪ್ಪ ಮಾಡುವಿನಲ್ಲಿ ಹುಲಿ ದಾಳಿಗೆ ಹಸು ತೀವ್ರವಾಗಿ ಗಾಯಗೊಂಡಿದೆ.

    ಗ್ರಾಮದ ಹಾಜಿ ಅವರ ಹಸು ಮೇವು ತಿಂದು ಸೋಮವಾರ ಮನೆಗೆ ಬರುವಾಗ ತೀವ್ರ ಗಾಯಗೊಂಡಿದ್ದು, ಹಸುವಿನ ಮೈ ಮೇಲೆ ಹುಲಿ ಉಗುರಿನ ಗುರುತುಗಳು ಪತ್ತೆಯಾಗಿವೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

    ಕಳೆದ ವಾರ 4 ಹಸುಗಳು ನಾಪತ್ತೆಯಾಗಿದ್ದು, ಹುಡುಕಲು ತೆರಳಿದಾಗ ಒಂದು ಹಸುವಿನ ಕಳೇಬರ ಪತ್ತೆಯಾಗಿದೆ. ಜತೆಗೆ ಕಾವೇರಿ ನದಿ ದಡದಲ್ಲಿ ಹುಲಿ ಅಥವಾ ಚಿರತೆ ಹೆಜ್ಜೆಗಳು ಕಂಡುಬಂದಿವೆ ಎಂದು ಗ್ರಾಮಸ್ಥ ಯೂಸಫ್ ಆತಂಕ ತೋಡಿಕೊಂಡಿದ್ದಾರೆ.

    ಈ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಸ್ವಸ್ಥಗೊಂಡಿರುವ ಹಸುವಿಗೆ ಚಿಕಿತ್ಸೆ ನೀಡಲಾಗಿದೆ. ಬುಧವಾರ ಬೆಳಗೆಯೂ ಕೇಮಾಟ್ ಗ್ರಾಮದ ಅರುಣ್‌ಕುಮಾರ್ ಅವರ ಅಡಕೆ ತೋಟದಲ್ಲಿ ಯೂಸುಫ್ ಹಾಜಿ ಅವರ ಇನ್ನೊಂದು ಕರುವಿನ ಕಳೇಬರ ಪತ್ತೆಯಾಗಿದೆ. ಸಮೀಪದಲ್ಲಿ ದೇವರ ಕಾಡಿದ್ದು, ಇಲ್ಲಿಂದ ಹುಲಿ ಬಂದಿರಬಹುದು ಎಂದು ಶಂಕಿಸಲಾಗಿದೆ.

    ಜಾನುವಾರುಗಳನ್ನು ಮೇಯಲು ಬಿಟ್ಟಾಗ ಹುಲಿ ಅಥವಾ ಚಿರತೆ ಜಾನುವಾರುಗಳನ್ನು ಬೇಟೆಯಾಡುತ್ತಿವೆ. ಅರಣ್ಯ ಇಲಾಖೆಯವರು ಕಾಟಾಚಾರಕ್ಕೆ ಪರಿಶೀಲನೆ ಮಾಡಿ ತೆರಳಿದ್ದಾರೆ. ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಕಿರಣ್ ಕುಮಾರ್ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts