More

    ನಡುರಸ್ತೆಯಲ್ಲಿ ಸಿಲುಕಿದ ಲಾರಿ

    ಕಲಘಟಗಿ: ತಾಲೂಕಿನ ಮಲಕನಕೊಪ್ಪ ಗ್ರಾಮದ ಬಳಿಯ ರಾಜ್ಯ ಹೆದ್ದಾರಿ ನಡು ರಸ್ತೆಯಲ್ಲಿರುವ ಬೇಡ್ತಿ ನಾಲಾ ಪೈಪ್​ಲೈನ್ ಕಾಮಗಾರಿ ಸ್ಥಳದಲ್ಲಿರುವ ರಸ್ತೆ ಕುಸಿದು ಲಾರಿ ಸಿಲುಕಿಕೊಂಡಿದೆ.

    ಕಟ್ಟಿಗೆ ತುಂಬಿಕೊಂಡ ಲಾರಿಯೊಂದು ತಡಸ ಕಡೆಯಿಂದ ಹಳಿಯಾಳಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿನ ಮಲಕನಕೊಪ್ಪ ಹತ್ತಿರ ನಡುರಸ್ತೆಯಲ್ಲಿ ಅಡ್ಡಲಾಗಿ ನಿರ್ವಿುಸಿರುವ ಬೇಡ್ತಿ ನಾಲಾ ಕಾಮಗಾರಿ ಪೈಪ್​ಲೈನ್ ಹಾದು ಹೋಗಿದೆ. ಅತಿಯಾದ ಮಳೆಗೆ ಲಾರಿ ಟಯರ್​ಗಳು ರಸ್ತೆ ಮೇಲೆ ಕುಸಿದು ಸಿಲುಕಿಕೊಂಡಿದೆ. ಈ ರಸ್ತೆಯಲ್ಲಿ ಸಣ್ಣ ಪುಟ್ಟ ವಾಹನ ಬಿಟ್ಟರೆ ಬಸ್ ಹಾಗೂ ಭಾರೀ ವಾಹನಗಳ ಸಂಚಾರ ಸ್ಥಗಿತಗೊಂಡಿವೆ.

    ಸಂಬಂಧಪಟ್ಟ ಅಧಿಕಾರಿಗಳು ಇದರತ್ತ ಗಮನಹರಿಸಿ ಪೈಪ್​ಲೈನ್ ಕಾಮಗಾರಿ ನಡೆಸಿದ ಸ್ಥಳದಲ್ಲಿ ರಸ್ತೆ ದುರಸ್ತಿ ಮಾಡಬೇಕು ಎಂಬುದು ವಾಹನ ಸವಾರರು ಹಾಗೂ ಗ್ರಾಮಸ್ಥರ ಒತ್ತಾಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts