More

    ಶಿರಾದಲ್ಲಿ ಭೀಕರ ಅಪಘಾತ, 9 ಮಂದಿ ದುರ್ಮರಣ: ಹೊಟ್ಟೆಪಾಡಿಗಾಗಿ ಗುಳೆ ಹೊರಟ್ಟಿದ್ದ ಬಡವರು ದುರಂತ ಅಂತ್ಯ

    ತುಮಕೂರು: ಶಿರಾ ತಾಲೂಕಿನ ಕಳ್ಳಂಬೆಳ್ಳದ ಬಾಲೆನಹಳ್ಳಿ ಗೇಟ್ ಬಳಿ ಇಂದು(ಗುರುವಾರ) ಬೆಳಗಿನಜಾವ ಲಾರಿ ಮತ್ತು ಕ್ರೂಸರ್​ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ದುರ್ಮರಣಕ್ಕೀಡಾಗಿದ್ದು, 14 ಜನರ ಸ್ಥಿತಿ ಗಂಭೀರವಾಗಿದೆ. ಮೃತರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಕೂಲಿಗಾಗಿ ರಾಯಚೂರು ಜಿಲ್ಲೆಯಿಂದ ಬೆಂಗಳೂರಿಗೆ ಗುಳೆ ಹೊರಟ್ಟಿದ್ದರು.

    ಶಿರವಾರ ತಾಲೂಕಿನ ಕುರಕುಂದಾ ಗ್ರಾಮದ ಸುಜಾತಾ(25) ಮತ್ತು ವಿನೋದ(3), ವಡವಟ್ಟಿ ಗ್ರಾಮದ ಕ್ರೂಸರ್ ಚಾಲಕ ಕೃಷ್ಣಪ್ಪ(25), ಲಕ್ಷ್ಮೀ ಅಲಿಯಾಸ್ ಮೀನಾಕ್ಷಿ(28), ಕಸನದೊಡ್ಡಿ ಗ್ರಾಮದ ಬಸಮ್ಮ(50), ಪ್ರಭು ಸೇರಿ 9 ಮಂದಿ ಮೃತರು. ಎಲ್ಲರೂ ಬಡವರಾಗಿದ್ದು, ಬದುಕಿನ ಬಂಡಿ ಸಾಗಿಸಲು ಕೂಲಿಕೆಲಸಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದರು. ಕ್ರೂರ ವಿಧಿ, ಇಬ್ಬರು ಮಕ್ಕಳು ಸೇರಿ 9 ಜನರ ಪ್ರಾಣ ತೆಗೆದಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಶಿರಾದಲ್ಲಿ ಭೀಕರ ಅಪಘಾತ, 9 ಮಂದಿ ದುರ್ಮರಣ: ಹೊಟ್ಟೆಪಾಡಿಗಾಗಿ ಗುಳೆ ಹೊರಟ್ಟಿದ್ದ ಬಡವರು ದುರಂತ ಅಂತ್ಯ

    ಸಿರಿವಾರ ತಾಲೂಕಿನ ದುರ್ಗಮ್ಮ(52), ಮೋನಿಕ(40), ನವೀಲುಕಲು ಗ್ರಾಮದ ಬಾಲಾಜಿ(6), ಸಂದೀಪ(5), ಅನಿಲ್(8), ಕುರುಕುಂದ ಗ್ರಾಮದ ಲಲಿತಾ(30), ವಿರುಪಾಕ್ಷ(30), ಮಾಲಚಿ ಗ್ರಾಮದ ವೈಶಾಲಿ(32), ಮಾನ್ವಿ ತಾಲೂಕಿನ ಮಾಡಗಿರಿ ಗ್ರಾಮದ ಉಮೇಶ(30), ಯಲ್ಲಮ್ಮ(25), ದೇವದುರ್ಗ ತಾಲೂಕಿನ ಗುಡನಾಳು ಗ್ರಾಮದ ದೇವರಾಜ(6), ಶಾಮತ್ ಗಲ್ ಗ್ರಾಮದ ನಾಗಮ್ಮ(55), ಮಾಸ್ತಿ ತಾಲೂಕಿನ ವಸಂತ(40) ಅವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

    ಶಿರಾದಲ್ಲಿ ಭೀಕರ ಅಪಘಾತ, 9 ಮಂದಿ ದುರ್ಮರಣ: ಹೊಟ್ಟೆಪಾಡಿಗಾಗಿ ಗುಳೆ ಹೊರಟ್ಟಿದ್ದ ಬಡವರು ದುರಂತ ಅಂತ್ಯ

    ಕ್ರೂಸರ್ ವಾಹನದಲ್ಲಿ ಒಟ್ಟು 23 ಜನ ಪ್ರಯಾಣಿಸುತ್ತಿದ್ದರು. ಓವರ್ ಟೆಕ್ ಮಾಡುವ ಭರದಲ್ಲಿ ಕ್ರೂಸರ್​ಗೆ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮೃತದೇಹಗಳನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಶಿರಾದಲ್ಲಿ ಭೀಕರ ಅಪಘಾತ, 9 ಮಂದಿ ದುರ್ಮರಣ: ಹೊಟ್ಟೆಪಾಡಿಗಾಗಿ ಗುಳೆ ಹೊರಟ್ಟಿದ್ದ ಬಡವರು ದುರಂತ ಅಂತ್ಯ

    ತುಮಕೂರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ವೈ‌.ಎಸ್.ಪಾಟೀಲ್ ಮತ್ತು ಎಸ್ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್, ಗಾಯಾಳುಗಳ ಆರೋಗ್ಯದ ಬಗ್ಗೆ ವಿಚಾರಿಸಿ ಧೈರ್ಯ ತುಂಬಿದ್ದಾರೆ.

    ರಾಜ್ಯದಲ್ಲಿ ಇನ್ನೂ 4 ದಿನ ಮಳೆ: ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​

    ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್​ಗೆ ಹೋಗ್ತಾರಾ? ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಸಿಪಿವೈ

    ಇನ್ಮುಂದೆ ವಾರದಲ್ಲಿ 6 ದಿನ ಸಂಚರಿಸಲಿದೆ ಬೆಂಗಳೂರು-ಮಂಗಳೂರು ಎಕ್ಸ್​ಪ್ರೆಸ್​ ರೈಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts