More

    ಪ್ರೇಮಿಗಳ ದಿನದಂದು ಈತ ಮಾಡಿದ ಕೀಟಲೆಗೆ ಯುವತಿಯರಿಂದ ಬಿತ್ತು ಗೂಸಾ! ವಿಡಿಯೋ ವೈರಲ್​

    ಪುಣೆ: ಚುಡಾಯಿಸಿದ ಯುವಕನಿಗೆ ಇಬ್ಬರು ಯುವತಿಯರು ಸೇರಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ ವಲಯದ ಅಂಬಿವಲ್ಲಿ ರೈಲು ನಿಲ್ದಾಣ ಸಮೀಪ ಇರುವ ವಡವಲಿ ಗ್ರಾಮದಲ್ಲಿ ಕಳೆದ ಮಂಗಳವಾರ (ಫೆ.14) ಪ್ರೇಮಿಗಳ ದಿನದಂದು ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.

    ಯುವತಿಯರಿಬ್ಬರು ರಸ್ತೆ ಮೇಲೆ ನಡೆದು ಹೋಗುವಾಗ ಯುವಕನೊಬ್ಬ ಇಬ್ಬರನ್ನು ಟೀಕಿಸಿದ್ದಾನೆ. ಅಲ್ಲದೆ, ಅವರ ಮುಂದೆ ಕೆಟ್ಟ ಪದಗಳನ್ನು ಬಳಸಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿಯರು ಯುವಕನನ್ನು ಎಳೆದಾಡಿ, ಹತ್ತಿರದ ಟೇಬಲ್​ ಒಂದರಲ್ಲಿ ಕೂರಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ತಪ್ಪಾಯ್ತು, ಕ್ಷಮಿಸಿ ಬಿಟ್ಟುಬಿಡಿ ಅಂತಾ ಕೇಳಿಕೊಂಡರು ಬಿಡದ ಯುವತಿಯರು ಪೊರಕೆಯಿಂದ ಯುವಕನಿಗೆ ಬಾರಿಸಿದ್ದಾರೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್​ನಲ್ಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಘಟನೆಗೆ ಪೊಲೀಸರು ಸಹ ಪ್ರತಿಕ್ರಿಯಿಸಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ, ವಿಡಿಯೋ ಆಧರಿಸಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಇತ್ತೀಚೆಗೆ ಯುವತಿಯರನ್ನು ಚುಡಾಯಿಸುವಂತಹ ಪ್ರಕರಣಗಳು ಹೆಚ್ಚಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಈ ಭಾಗದ ಸ್ಥಳೀಯರು. (ಏಜೆನ್ಸೀಸ್​)

    ಶಾರುಖ್​ ಮ್ಯಾನೇಜರ್​ ಪೂಜಾರ ಒಟ್ಟು ಆಸ್ತಿ ಮೌಲ್ಯ, ವಾರ್ಷಿಕ ಸಂಬಳ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!

    ತೆರಿಗೆ ಕಟ್ಟದೆ ಕಳ್ಳಾಟ ಆಡುತ್ತಿದ್ದ ಮಂತ್ರಿ ಮಾಲ್​ಗೆ ಬಿಬಿಎಂಪಿ ಶಾಕ್​: ಚರಾಸ್ತಿ ಮುಟ್ಟುಗೋಲು

    6 ತಿಂಗಳಲ್ಲಿ ಬಿಡುಗಡೆ ಆಗಲಿದ್ದ ಕೈದಿಗೆ ಜೈಲಿನಲ್ಲೇ ಹೃದಯಾಘಾತ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts