More

    ಉರಿ ಬಿಸಿಲಲ್ಲೇ ಮಕ್ಕಳಿಗೆ ಪಾಠ!

    ಹುಬ್ಬಳ್ಳಿ: ಇಲ್ಲಿಯ ಗದಗ ರಸ್ತೆ ರಾಮನಗರ- ನೆಹರು ನಗರದಲ್ಲಿ ನಗರ ಹಿತವರ್ಧಕ ಯುವಕ ಸಂಘ ಜಿಪಂ ಅನುದಾನದಲ್ಲಿ ನಡೆಸುವ ಹರಿಜನ ಹೆಣ್ಣು ಮಕ್ಕಳ ಕನ್ನಡ ಪ್ರಾಥಮಿಕ ಶಾಲೆ ಮಕ್ಕಳು ಬೀದಿಗೆ ಬಿದ್ದಿದ್ದಾರೆ. ಕಟ್ಟಡ ಜಾಗದ ವಿವಾದದ ಹಿನ್ನೆಲೆಯಲ್ಲಿ ಈ ದುಃಸ್ಥಿತಿ ಬಂದಿದೆ.

    ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಶಾಲೆಯ ಪೀಠೋಪಕರಣಗಳನ್ನು ಹೊರಗೆ ಹಾಕಿ ತೆರವು ಮಾಡಲಾಗಿತ್ತು. ಶಿಕ್ಷಕರು ಶಾಲೆ ಆವರಣದಲ್ಲಿ ಬಿಸಿಲಿನಲ್ಲಿಯೇ ಮಕ್ಕಳನ್ನು ಕುಳ್ಳಿರಿಸಿ ಪಾಠ ಮಾಡುತ್ತಿದ್ದಾರೆ.

    ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿಯವರು ಈ ಜಮೀನು ಖರೀದಿ ಮಾಡಿದ್ದಾರೆ. ಈ ಸಂಬಂಧ ಮೊದಲಿನ ಸಂಘದೊಂದಿಗೆ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಸೊಸೈಟಿಯವರು ಕೋರ್ಟ್ ಮೊರೆ ಹೋಗಿದ್ದರು. ಗಾಂಧಿವಾಡ ಸೊಸೈಟಿಯವರಿಗೆ ಜಾಗ ಬಿಟ್ಟು ಕೊಡಲು ಕೋರ್ಟ್ ಆದೇಶಿಸಿದ್ದು, 2 ದಿನದ ಹಿಂದೆ ಬೇಲೀಫರು ಶಾಲೆ ತೆರವು ಮಾಡಿಸಿದ್ದರು. ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಆಗದಿರುವ ಬಗ್ಗೆ ಪಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಅನುದಾನಿತ ಶಾಲೆ ಇದಾಗಿದ್ದು, ಸಂಸ್ಥೆಯವರು ಅಗತ್ಯ ವ್ಯವಸ್ಥೆ ಮಾಡಬೇಕು. 1ರಿಂದ 5ನೇ ತರಗತಿ ಮಕ್ಕಳಿಗೆ ಶಾಲೆ ಶುರುವಾಗಿಲ್ಲ. ಉಳಿದ ಮಕ್ಕಳನ್ನು ಸಮೀಪದ ಬೇರೆ ಶಾಲೆಗೆ ಸೇರಿಸುವ ಕುರಿತು ಚರ್ಚೆ ನಡೆದಿದೆ.
    | ಶ್ರೀಶೈಲ ಕರಿಕಟ್ಟಿ, ಶಹರ ಬಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts