More

    ಆಯುಷ್ ಗ್ರೀನ್ ಫಾರ್ಮ್ ಹೌಸ್​ನಲ್ಲಿ ಭೂಮಿ ಖರೀದಿಸಿ: ಕೃಷಿ ಕನಸು ನನಸು ಮಾಡಿಕೊಳ್ಳಿ

    ಬೆಂಗಳೂರು: ನಗರದ ಹೊರವಲಯದಲ್ಲಿ ಫಾರ್ಮ್​ ಹೌಸ್ ಖರೀದಿ ಮಾಡಬೇಕೆಂಬ ಹಂಬಲವಿದ್ದರೆ ಕನಕಪುರ ಟೌನ್​ನಿಂದ 3.5 ಕಿ.ಮೀ ದೂರದಲ್ಲಿ ನಿರ್ಮಾಣವಾಗಿರುವ 105 ಎಕರೆ ಆಯುಷ್ ಗ್ರೀನ್ ಫಾರ್ಮ್​​ಹೌಸ್​ಗೆ ಒಮ್ಮೆ ಭೇಟಿ ಕೊಡಬಹುದು.

    ಆಯುರ್ವೇದ ಪರಿಕಲ್ಪನೆಯಡಿ ಬಿಎಸ್​ಆರ್ ಡೆವಲಪರ್ರ್ಸ್ ಅಭಿವೃದ್ಧಿ ಪಡಿಸಿರುವ ಈ ಫಾರ್ಮ್​​ಹೌಸ್ ಜನರನ್ನು ಕೈಬೀಸಿ ಕರೆಯುತ್ತಿದೆ. ಬೆಂಗಳೂರಿನ ಸಮೀಪದಲ್ಲಿ ನಿಮ್ಮದೇ ಫಾರ್ಮ್​ಹೌಸ್ ಖರೀದಿಸಲು ಅವಕಾಶ ಕಲ್ಪಿಸಿದೆ. ಈಗಾಗಲೇ ಸಾಕಷ್ಟು ಬುಕಿಂಗ್ ಆಗಿದ್ದು, ಜನರಿಂದ ಮತ್ತಷ್ಟು ಬೇಡಿಕೆ ಬರಲಾರಂಭಿಸಿದೆ.

    ಇತ್ತೀಚಿನ ದಿನಗಳಲ್ಲಿ ಸ್ವಂತ ಫಾರ್ಮ್​​ಹೌಸ್ ಹೊಂದಬೇಕೆಂಬ ಅಭಿಲಾಷೆ ಎಲ್ಲರಿಗೂ ಬರುತ್ತಿದೆ. ಶ್ರೀಮಂತರು, ಚಲನಚಿತ್ರ ನಟ-ನಟಿಯರು ಮತ್ತು ಉದ್ದಿಮೆದಾರರಿಗೆ ಮಾತ್ರವೇ ಫಾರ್ಮ್​​ಹೌಸ್ ಖರೀದಿಸಲು ಆರ್ಥಿಕವಾಗಿ ಶಕ್ತಿಯಿದೆ ಎಂಬ ಮನಸ್ಥಿತಿ ಇತ್ತು. ಇದು ಬದಲಾಗಿದ್ದು, ಇದೀಗ ಮಧ್ಯಮ ವರ್ಗದ ಜನರಿಗೆ ಫಾರ್ಮ್​​ಹೌಸ್ ದೊರೆಯಬೇಕೆಂಬ ಹಿನ್ನೆಲೆಯಲ್ಲಿ ಈ ಯೋಜನೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಈಗಾಗಲೇ ಫರ್ಮ್​​ಹೌಸ್​ನಲ್ಲಿ 50ಕ್ಕೂ ಹೆಚ್ಚು ಹಸುಗಳು, 100ಕ್ಕೂ ಹೆಚ್ಚು ಕುರಿ ಮೇಕೆ, ಕೋಳಿ ಮತ್ತಿತರ ಪ್ರಾಣಿಗಳ ಸಾಕಣೆ ಘಟಕಗಳಿವೆ. ಕೃಷಿ ಕಾಡಿನ ಅಡಿಯಲ್ಲಿ ಬರುವ ಮರಗಳ ಸಸಿಗಳಾದ ತೇಗ, ಸಿಲ್ವರ್ ಓಕ್, ವೈಟ್ ಸ್ಯಾಂಡಲ್, ಹೆಬ್ಬೇವು ಸೇರಿ ಹಲವು ಆಯುರ್ವೇದ ಸಸಿಗಳಿವೆ. ಈಗಾಗಲೇ ಫಾರ್ಮ್​​ಹೌಸ್​ನಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ಹಸು, ಕುರಿ, ಮೇಕೆಗಳನ್ನು ಮತ್ತು ಗಿಡ ಮರಗಳನ್ನು ನೋಡಿಕೊಳ್ಳಲು ಇದ್ದಾರೆ. ಕ್ಲಬ್ ಹೌಸ್ ಮಾದರಿಯ ಅನೇಕ ಸೌಲಭ್ಯಗಳನ್ನು ಸಹ ನಿರ್ವಿುಸಲಾಗುತ್ತಿದೆ.

    ಆಯುಷ್ ಗ್ರೀನ್ ಫಾರ್ಮ್ ಹೌಸ್​ನಲ್ಲಿ ಭೂಮಿ ಖರೀದಿಸಿ: ಕೃಷಿ ಕನಸು ನನಸು ಮಾಡಿಕೊಳ್ಳಿಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಕೇಂದ್ರ ಮಾದರಿಯಲ್ಲಿ ಆಯುಷ್ ಗ್ರೀನ್ ಫಾರ್ಮ್​​ಹೌಸ್​ನಲ್ಲಿ ಅಂದಾಜು ಆರು ಎಕರೆಯಲ್ಲಿ ಆಯುರ್ವೇದ ಮತ್ತು ನ್ಯಾಚೂರೋಪಥಿ ಪ್ರಕೃತಿ ಚಿಕಿತ್ಸಾ ಕೇಂದ್ರ, ಇಕೋ ಟೂರಿಸಂ ಎಕ್ಸ್​ಪೀರಿಯನ್ಸ್ ಸೆಂಟರ್​ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಎಕ್ಸ್​ಪೀರಿಯನ್ಸ್ ಸೆಂಟರ್​ನಲ್ಲಿ ವಾರಾಂತ್ಯದಲ್ಲಿ ಜನರು ಕೃಷಿ ಸೇರಿ ಇನ್ನಿತರ ವಿಷಯಗಳ ಬಗ್ಗೆ ಕಲಿತುಕೊಳ್ಳಲು ಅವಕಾಶವಿದೆ. ಮಧ್ಯಮ ವರ್ಗದ ಜನರಿಗೆ ಅನುಕೂಲಕ್ಕಾಗಿ ಈ ಫಾರ್ಮ್​​ಹೌಸ್​ಗಳನ್ನು ನಿರ್ವಿುಸಲಾಗಿದೆ. ಈಗಾಗಲೇ 25-30 ವರ್ಷದ ಮಾವು, ತೆಂಗು, ನೇರಳೆ, ಸೀಬೆ, ದಾಳಿಂಬೆ, ಬಟರ್ ಫ್ರೂಟ್ಸ್, ವಾಟರ್ ಆ್ಯಪಲ್, ಅಂಜೂರ ಸೇರಿ ಇನ್ನಿತರ ಮರಗಳಿವೆ.

    ಆಯುಷ್ ಗ್ರೀನ್ ಫಾರ್ಮ್ ಹೌಸ್​ನಲ್ಲಿ ಭೂಮಿ ಖರೀದಿಸಿ: ಕೃಷಿ ಕನಸು ನನಸು ಮಾಡಿಕೊಳ್ಳಿಐದೂವರೆ ಗುಂಟೆಯಿಂದ ಖರೀದಿಸಿ
    ಆಯುಷ್ ಗ್ರೀನ್ ಫಾರ್ಮ್​​ಹೌಸ್​ನಲ್ಲಿ ಅನುಕೂಲಕ್ಕೆ ತಕ್ಕಂತೆ ಜನರು ಖರೀದಿಸಬಹುದು. ಐದೂವರೆ ಗುಂಟೆಯಿಂದ ಆರಂಭವಾಗಿ ಅರ್ಧ, ಮುಕ್ಕಾಲು, ಒಂದು ಎಕರೆ ಸೇರಿ ಬಂಡವಾಳಕ್ಕೆ ತಕ್ಕಂತೆ ಭೂಮಿ ಖರೀದಿಸಬಹುದು. ಅಲ್ಲೇ ಹೋಗಿ ನೀವು ಕೃಷಿ ಮಾಡಬಹುದು. ಮನೆ, ಗಿಡಗಳನ್ನು ಸೇರಿ ಇನ್ನಿತರ ಕೆಲಸಗಳನ್ನು ಮಾಡಿಕೊಳ್ಳಬಹುದು. ಪ್ರತಿ ಗುಂಟೆಗೆ 6 ಲಕ್ಷ ರೂ.ನಿಂದ ಆರಂಭವಾಗಲಿದೆ. ರಿಜಿಸ್ಟ್ರೇಷನ್ ನಾವೇ ಮಾಡಿಸಿಕೊಡುತ್ತೇವೆ. ಅದರ ಶುಲ್ಕವನ್ನು ಖರೀದಿದಾರರು ಪಾವತಿಸಬೇಕು. ಖರೀದಿದಾರರ ಹೆಸರಿನಲ್ಲಿ ಪಹಣಿ ಮಾಡಿಕೊಡಲಾಗುತ್ತದೆ. ಮೊದಲ ನೂರು ಗ್ರಾಹಕರಿಗೆ ಉಚಿತವಾಗಿ ಹಸು ಮತ್ತು 2 ವರ್ಷ ನಿರ್ವಹಣಾ ವೆಚ್ಚ ಇರಲಿದೆ. ಪ್ರತಿಯೊಂದು ಫಾರ್ಮ್​​ಹೌಸ್​ಗೆ ಪ್ರತ್ಯೇಕ ರಸ್ತೆ, ನೀರಿನ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕ ಸೇರಿ ಇನ್ನಿತರ ಸೌಲಭ್ಯಗಳಿವೆ ಎಂದು ಸಂಸ್ಥೆ ತಿಳಿಸಿದೆ. ಖರೀದಿದಾರರಿಗೆ ತಲಾ ಐದು ಗಿಡ ಟೀಕ್ ವುಡ್, ಸಿಲ್ವರ್ ಓಕ್, ವೈಟ್ ಸ್ಯಾಂಡಲ್​ಗಳನ್ನು ನೀಡಲಾಗುತ್ತದೆ. ಮುಂದಿನ 10-15 ವರ್ಷದಲ್ಲಿ ಭೂಮಿಗೆ ಹಾಕಿರುವ ಬಂಡವಾಳ ವಾಪಸ್ ಸಿಗಲಿದೆ. ಬೆಂಗಳೂರಿನಿಂದ ಕೇವಲ ಒಂದು ಗಂಟೆ ಅಂತರದಲ್ಲಿ ಫಾರ್ಮ್​ಹೌಸ್​ಗೆ ಪ್ರಯಾಣಿಸಬಹುದು. ಫಾರ್ಮ್​​ಹೌಸ್ ಸುತ್ತಮುತ್ತ ಆಸ್ಪತ್ರೆ, ಶಾಲೆಗಳಿವೆ. ವಾರಾಂತ್ಯದಲ್ಲಿ ಕುಟುಂಬ ಸಮೇತ ಆರಾಮವಾಗಿ ಸಮಯ ಕಳೆಯಬಹುದು. ಮನಸ್ಸಿನ ಚೈತ್ಯನಕ್ಕೆ ಮುದ ಸಹ ಸಿಗಲಿದೆ.

    ಅರ್ಧ ಎಕರೆಯಲ್ಲಿ ಆಯುರ್ವೇದಿಕ್ ನರ್ಸರಿ ಅಭಿವೃದ್ಧಿಪಡಿಸಲಾಗಿದೆ. ಖರೀದಿದಾರರು ತಮ್ಮ ಫಾರ್ಮ್​​ಹೌಸ್​ನಲ್ಲಿ ಆಯುರ್ವೇದಿಕ್ ಗಾರ್ಡನ್ ಮಾಡಿಕೊಳ್ಳಬಹುದು. ಬುಕಿಂಗ್ ಮಾಡಿದವರಿಗೆ ಆಯುರ್ವೇದಿಕ್ ಸಸಿಗಳನ್ನು ನೀಡಲಾಗುತ್ತದೆ. ಸೈಟ್ ಖರೀದಿಸುವ ಹಣದಲ್ಲಿ ಬೆಳೆದಿರುವ ಫಾರ್ಮ್​​ಲ್ಯಾಂಡ್ ಖರೀದಿಸಬಹುದು. ಯಾವುದೇ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವವರು ಅಥವಾ ನಿವೃತ್ತರಾದವರು ಕೃಷಿಕರಾಗುವ ತಮ್ಮ ಕನಸನ್ನು ಫಾರ್ಮ್​​ಲ್ಯಾಂಡ್ ಖರೀದಿ ಮೂಲಕ ಈಡೇರಿಸಕೊಳ್ಳಬಹುದು. ನೀವು ಹಾಕಿರುವ ಬಂಡವಾಳ ಸಹ ವಿವಿಧ ರೂಪದಲ್ಲಿ ವಾಪಸ್ ಬರುತ್ತದೆ. ಫಾರ್ಮ್​​ಲ್ಯಾಂಡ್​ನಲ್ಲಿ ಈಜುಕೊಳ, ಕ್ಲಬ್​ಹೌಸ್, ಆಯುರ್ವೇದಿಕ್ ರಿಕ್ರಿಯೇಷನ್ ಸೆಂಟರ್ ಇತ್ಯಾದಿಗಳೂ ಇರುವುದರಿಂದ ನೆಮ್ಮದಿಯ ಜೀವನ ಸಾಗಿಸಬಹುದು. ಬದಲಾದ ಜೀವನಶೈಲಿಯಿಂದ ನಗರ ವಾಸಿಗಳು ಹಳ್ಳಿಯ ವಾತಾವರಣ ಬಗ್ಗೆ ಆಸಕ್ತಿ ಹೆಚ್ಚಾಗಿದೆ.

    ಫಾರ್ಮ್​ಹೌಸ್​ ಸಂಬಂಧ ವಿವರಕ್ಕೆ ಮೊ.ನಂ.: 79966 66668ಕ್ಕೆ ಸಂಪರ್ಕಿಸಬಹುದು.

    ಫಾರ್ಮ್​​ ಲ್ಯಾಂಡ್ ಟ್ರೆಂಡ್ ?
    ಫಾರ್ಮ್​​ ​ಲ್ಯಾಂಡ್ ಪ್ರಾಜೆಕ್ಟ್​ನಲ್ಲಿ ಹತ್ತಾರು ಎಕರೆ ಕೃಷಿ ಭೂಮಿ ಇರುತ್ತದೆ. ಇದರಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಧ ಎಕರೆ, ಒಂದು ಎಕರೆ ಸೇರಿ ಇನ್ನಿತರ ಗಾತ್ರದಲ್ಲಿ ಭೂಮಿ ಖರೀದಿಸಬಹುದು. ಅಲ್ಲಿ ನೀವೇ ಹೋಗಿ ಕೃಷಿ ಮಾಡಬಹುದು. ಕಾರ್ವಿುಕರ ಲಭ್ಯತೆಯೂ ಇರುತ್ತದೆ. ಅಲ್ಲದೆ, ಕೃಷಿ ಭೂಮಿ ನಿರ್ವಹಣೆಯನ್ನು ಬೇರೆಯವರಿಗೂ ಒಪ್ಪಿಸಬಹುದು. ನಿಮ್ಮ ಭೂಮಿಯಲ್ಲಿ (ಕಾನೂನಿನ ಪ್ರಕಾರ ಕೃಷಿ ಭೂಮಿಯಲ್ಲಿ ಶೇ.10-15 ಮಾತ್ರ ನಿರ್ಮಾಣಕ್ಕೆ ಅವಕಾಶ) ಮನೆ ಕಟ್ಟಿಕೊಳ್ಳಬಹುದು. ಆ ಮನೆಯನ್ನು ಬೇಕಾದರೆ ಬಾಡಿಗೆಗೂ ನೀಡಬಹುದು. ನಿಮ್ಮ ಕೃಷಿ ಭೂಮಿಯಲ್ಲಿ ಬೆಳೆದ ಇಳುವರಿಯಿಂದಲೂ ಆದಾಯ ಪಡೆಯಬಹುದು. ನೀವಿರುವ ಫಾರ್ಮ್​​ಹೌಸ್​ನ ಒಟ್ಟಾರೆ ಪ್ರಾಜೆಕ್ಟ್​ನಲ್ಲಿ ಬರುವ ಇಳುವರಿಯಿಂದಲೂ ಪಾಲು ಪಡೆಯಬಹುದು. ಒಟ್ಟಾರೆ ಪ್ರಾಜೆಕ್ಟ್​ನಲ್ಲಿ ಸಾಕಷ್ಟು ಸೌಕರ್ಯಗಳೂ ಇರುತ್ತದೆ. ಇಕೋ ಟೂರಿಸಂ ಎಕ್ಸ್​ಪೀರಿಯನ್ಸ್ ಸೆಂಟರ್, ಪ್ರಾಣಿಗಳ ಸಾಕಾಣಿಕೆ ಕೇಂದ್ರ ಆಯುರ್ವೇದಿಕ್ ನರ್ಸರಿ, ಪ್ರಾಣಿ ಪಕ್ಷಿಗಳನ್ನು ಒಳಗೊಂಡ ಮೃಗಾಲಯ ಇತ್ಯಾದಿಗಳನ್ನೂ ಫಾರ್ಮ್​ ಲ್ಯಾಂಡ್​ನಲ್ಲಿ ಕೆಲ ಉದ್ಯಮಿಗಳು ಪರಿಚಯಿಸುತ್ತಿದ್ದಾರೆ. ಫಾರ್ಮ್​​ಹೌಸ್​ನಲ್ಲಿ ಇಂಡೋರ್, ಔಟ್​ಡೋರ್ ಗೇಮ್ಸ್​ಗೂ ವ್ಯವಸ್ಥೆ ಮಾಡಲಾಗುತ್ತದೆ. ಹೀಗಾಗಿ, ನಗರದ ಜನತೆ ಇಂತಹ ಭೂಮಿ ಖರೀದಿಸಲು ಈಗ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.

    ಆಯುಷ್ ಗ್ರೀನ್ ಫಾರ್ಮ್ ಹೌಸ್​ನಲ್ಲಿ ಭೂಮಿ ಖರೀದಿಸಿ: ಕೃಷಿ ಕನಸು ನನಸು ಮಾಡಿಕೊಳ್ಳಿಕೃಷಿ ಭೂಮಿಗೆ ಬೇಡಿಕೆ
    ವಾರವಿಡೀ ಆಫೀಸ್, ಡೆಡ್​ಲೈನ್ ಅಂತೆಲ್ಲ ಗಡಿಬಿಡಿ ಇವರೆಲ್ಲರ ಜೀವನಶೈಲಿ ವಾರಾಂತ್ಯದಲ್ಲಿ ಬದಲಾಗುತ್ತಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಉದ್ಯೋಗಿಗಳಿಗೆ ಸ್ವಂತ ಫಾರ್ಮ್​​ಹೌಸ್ ಹೊಂದಬೇಕೆಂಬ ತುಡಿತ ಹೆಚ್ಚಾಗಿದೆ. ವೀಕೆಂಡ್ ವೇಳೆ ಫಾರ್ಮ್​​ಹೌಸ್ ಕೃಷಿ ಮಾಡುವುದು, ಗಿಡಗಳಿಗೆ ನೀರುಣಿಸುವುದು, ಪ್ರಾಣಿಗಳನ್ನು ನೋಡಿಕೊಳ್ಳುವುದು ಸೇರಿ ಇತ್ಯಾದಿಗಳನ್ನು ಕೆಲಸ ಮಾಡುವ ಆಸಕ್ತಿ ಹೆಚ್ಚಿದೆ. ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಾಗ ಆರಂಭವಾದ ಈ ಕೃಷಿ ಮಾಡುವ ಟ್ರೆಂಡ್, ಕರೊನಾ ನಂತರ ಜೋರಾಗಿದೆ. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೃಷಿ ಭೂಮಿಗೆ ಬೇಡಿಕೆ ಬಂದಿದೆ.

    ಫಾರ್ಮ್​ ಲ್ಯಾಂಡ್ ಪರಿಕಲ್ಪನೆ
    ಕೃಷಿ ಮಾಡುವ ಹವ್ಯಾಸ ಬೆಳೆಸಿಕೊಂಡಿರುವ ನಗರ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲು ಫಾರ್ಮ್​ ಲ್ಯಾಂಡ್ ಪ್ರಾಜೆಕ್ಟ್​ಗಳು ಪ್ರಾರಂಭವಾಗಿವೆ. ಕೃಷಿ ಭೂಮಿಯೊಂದಿಗೆ ಸಕಲ ಸೌಕರ್ಯಗಳನ್ನು ಒದಗಿಸುವ ಫಾರ್ಮ್​​ಹೌಸ್​ಗಳೂ ಪ್ರವರ್ಧಮಾನಕ್ಕೆ ಬರುತ್ತಿವೆ. ಎಲ್ಲರೂ ಕೃಷಿ ಭೂಮಿ ಹೊಂದಲು ಅವಕಾಶ ದೊರಕಿದಾಗ ಅದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವೇ ಹೆಚ್ಚು. ಅಂದರೆ, ಕೃಷಿ ಭೂಮಿಯನ್ನು ಸೈಟ್​ಗಳಾಗಿ ಪರಿವರ್ತಿಸಿ, ಕಾಂಪೌಂಡ್ ಕಟ್ಟಿ ಒಳಗೆ ಕೆಲ ಗಿಡಗಳನ್ನು ನೆಟ್ಟು ನಿವೇಶನವಾಗಿ ಮಾರಾಟ ಮಾಡಿ ಲಾಭ ಮಾಡಿಕೊಳ್ಳಲು ಮುಂದಾಗುವವರೂ ಇದ್ದಾರೆ. ಆದರೆ, ಕೃಷಿ ಮಾಡಲು ಬಯಸುವವರಿಗೆ ನೆರವಾಗುವ ಫಾರ್ಮ್​ ​ಲ್ಯಾಂಡ್ ಪರಿಕಲ್ಪನೆ ಹೆಚ್ಚು ಜನಪ್ರಿಯವಾಗುತ್ತಿದೆ. ಇಲ್ಲಿ ಕೃಷಿ ಮಾಡುವ ಹವ್ಯಾಸ ಹೊಂದಿದ್ದರೆ, ಬೇರೆಯವರು ನಿರ್ವಹಿಸುವ ನಿಮ್ಮದೇ ಫಾರ್ಮ್​ ಲ್ಯಾಂಡ್ ಹೊಂದಬಹುದು. ಬಿಡುವಾದಾಗ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಂತಸ ಪಡಬಹುದು.

    ಪ್ರಕೃತಿ ಜತೆ ಕಾಲ ಕಳೆಯಲು ಸೂಕ್ತ
    ಕೃಷಿ ಭೂಮಿ ಕೃಷಿ ಭೂಮಿಯಾಗಿಯೇ ಇರಬೇಕು. ಕೃಷಿ ಭೂಮಿಯೊಳಗೆ ದನಕರುಗಳು, ಕುರಿಗಳು, ಕೋಳಿಗಳು ಇರಬೇಕು. ಪ್ರಾಣಿಗಳ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸಬೇಕು. ತಾಜಾ ಹಣ್ಣು, ತರಕಾರಿ ಬೆಳೆಯಬೇಕು. ಗಿಡಮೂಲಿಕೆಗಳು ಇರಬೇಕು. ಪ್ರಾಣಿ ಪಕ್ಷಿಗಳ ಒಡನಾಟ ಇರಬೇಕು. ಇಂತಹ ಎಲ್ಲ ಸೊಬಗಿನ ಜತೆಗೆ ಈಜುಕೊಳ, ಕ್ಲಬ್​ಹೌಸ್ ಇತ್ಯಾದಿ ಸೌಲಭ್ಯಗಳಿದ್ದರೆ ಹಾಯಾಗಿ ಪ್ರಕೃತಿಯ ಜತೆ ಕಾಲ ಕಳೆಯಬಹುದು ಎನ್ನುತ್ತಾರೆ ಬಿಎಸ್​ಆರ್ ಡೆವಲಪರ್ರ್ಸ್.

    ಆಯುಷ್ ಗ್ರೀನ್ ಫಾರ್ಮ್​ ​ಹೌಸ್​ ಸಂಬಂಧ ಹೆಚ್ಚಿನ ಮಾಹಿತಿಗೆ ಮೊ.ನಂ.: 79966 66668ಕ್ಕೆ ಸಂಪರ್ಕಿಸಬಹುದು.

    ಸುಮಲತಾ ವಿರುದ್ಧ ಕದನ ವಿರಾಮ ಘೋಷಿಸಿದ ಎಚ್​ಡಿಕೆ!

    ಪ್ರಿಯಕರನ ಮನೆಯಲ್ಲಿ ಯುವತಿ ಶವ ಪತ್ತೆ! ಮೃತಳ ಪೋಷಕರಿಂದ ನಡೆದೇ ಹೋಯ್ತು ಘೋರ ದುರಂತ

    ‘ಲೈಂಗಿಕ ಉತ್ಸವ’ದಲ್ಲಿ ಮಿಂದೆದ್ದ ನೂರಾರು ಜೋಡಿಗಳು! ನಾಲ್ಕು ದಿನ ನಡೆಯಿತು ಸೆಕ್ಸ್​ ಫೆಸ್ಟಿವಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts