More

    ಹೊಸತನದಲ್ಲಿ ಮೂಡಿ ಬಂತು ಕರ್ನಾಟಕ ಲೋಕಾಯುಕ್ತ ಜಾಲತಾಣ: ಸದ್ಬಳಕೆ ಮಾಡಿಕೊಳ್ಳಲು ರಾಜ್ಯಪಾಲರ ಕರೆ

    ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಸಂಬಂಧಪಟ್ಟ ದೂರುದಾರರಿಗೆ, ಪ್ರತಿವಾದಿಗಳಿಗೆ ಮತ್ತು ಸಾರ್ವಜನಿಕರಿಗೆ ಸಕಾಲಿಕ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಲೋಕಾಯುಕ್ತ ಜಾಲತಾಣವನ್ನು ಉನ್ನತೀಕರಿಸಿ ಚಾಲನೆಗೆ ತರಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.

    ಬೆಂಗಳೂರಿನ ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ಕರ್ನಾಟಕ ಲೋಕಾಯುಕ್ತ ಜಾಲತಾಣ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು, ವ್ಯವಸ್ಥೆಯಲ್ಲಿ ಮಾನವ ಹಸ್ತಕ್ಷೇಪ ಕಡಿಮೆ ಮಾಡಿ ತಂತ್ರಜ್ಞಾನದ ಬಳಕೆಗೆ ಆದ್ಯತೆ ನೀಡಬೇಕು. ಇದು ಪಾರದರ್ಶಕತೆ ಮತ್ತು ಉತ್ತಮ ಆಡಳಿತಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.

    ಹೊಸತನದಲ್ಲಿ ಮೂಡಿ ಬಂತು ಕರ್ನಾಟಕ ಲೋಕಾಯುಕ್ತ ಜಾಲತಾಣ: ಸದ್ಬಳಕೆ ಮಾಡಿಕೊಳ್ಳಲು ರಾಜ್ಯಪಾಲರ ಕರೆ

    ಜಾಲತಾಣದ ಉನ್ನತೀಕರಣದೊಂದಿಗೆ ಅನೇಕ ಕಾರ್ಯಗಳನ್ನು ಸುಗಮಗೊಳಿಸಲಾಗುವುದು ಮತ್ತು ನಾಗರಿಕರಿಗೆ ತ್ವರಿತ, ಸುಲಭ ಮತ್ತು ಅಗ್ಗದ ನ್ಯಾಯ ಪಡೆಯಲು ಅನುಕೂಲವಾಗಲಿದೆ. ಈ ಜಾಲತಾಣದಲ್ಲಿ ಸಾಮಾನ್ಯ ನಾಗರಿಕರಿಗೆ ಸಂಸ್ಥೆಯ ಸ್ಥಾಪನೆ, ಉದ್ದೇಶ, ಇತಿಹಾಸ, ಸರ್ಕಾರಿ/ಸಾರ್ವಜನಿಕ ಸೇವಕರ ವಿರುದ್ಧ ದೂರು ಸಲ್ಲಿಸುವ ವಿಧಾನ, ದೂರು, ವಿಮರ್ಶೆ ಟಿಪ್ಪಣಿ, ಆದೇಶ ಪ್ರತಿ, 2017 ರಿಂದ ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ವಿವಿಧ ವಿಭಾಗಗಳ ಅಡಿಯಲ್ಲಿ ಅಂಕಿ-ಅಂಶಗಳು ಮತ್ತು ವರದಿಗಳೂ ಇರಲಿವೆ. ಸ್ವಯಂ ಪ್ರೇರಣೆಯಿಂದ ಲೋಕಾಯುಕ್ತ/ಉಪಲೋಕಾಯುಕ್ತರು ದಾಖಲಿಸಿಕೊಂಡಿರುವ ಪ್ರಕರಣಗಳ ವಿವರಗಳು. ಕರ್ನಾಟಕ ಲೋಕಾಯುಕ್ತಕ್ಕೆ ಸಂಬಂಧಿಸಿದ ಕೆಲಸ, ನಿಯಮ ಮತ್ತು ಕಾಯ್ದೆ, ವಿವಿಧ ರೀತಿಯ ಫಾರ್ಮ್ ಫಾರ್ಮ್ಯಾಟ್‌ ಇತ್ಯಾದಿಗಳ ಮಾಹಿತಿ ಲಭ್ಯವಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರಾಜ್ಯಪಾಲರು ತಿಳಿಸಿದರು.

    ಹೊಸತನದಲ್ಲಿ ಮೂಡಿ ಬಂತು ಕರ್ನಾಟಕ ಲೋಕಾಯುಕ್ತ ಜಾಲತಾಣ: ಸದ್ಬಳಕೆ ಮಾಡಿಕೊಳ್ಳಲು ರಾಜ್ಯಪಾಲರ ಕರೆ

    ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥಶೆಟ್ಟಿ, ಉಪಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್, ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆ, ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಥಾಕುರ್ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.‘

    ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬೀಗಿದ ಪತಿ-ಪತ್ನಿ

    ಅರ್ಚನಾ ರೆಡ್ಡಿ ಕೊಲೆ ಕೇಸ್​: ಜಿಮ್​ ಟ್ರೈನರ್​ ನವೀನ್​ ಕೋಟ್ಯಧೀಶ ಆಗಿದ್ದೇಗೆ?​ EXCLUSIVE ಮಾಹಿತಿ ಇಲ್ಲಿದೆ

    ಕೊರಗಜ್ಜನ ಕಟ್ಟೆಗೆ ಕಾಂಡೋಮ್​ ಎಸೆದಿದ್ದವ ಕೊನೆಗೂ ಸಿಕ್ಕಿಬಿದ್ದ! ಬಂಧನ ಬೆನ್ನಲ್ಲೇ ಆಘಾತಕಾರಿ ರಹಸ್ಯ ಬಯಲು

    ಅರ್ಚನಾರೆಡ್ಡಿ ಕೇಸ್​ಗೆ ಮತ್ತೊಂದು ಟ್ವಿಸ್ಟ್​: ನವೀನ್​ 2ನೇ ಅಲ್ಲ, 3ನೇ ಸಂಬಂಧ! ಆಕೆಯ ಮಗಳನ್ನೂ ಪಟಾಯಿಸಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts