More

    5 ವರ್ಷದಲ್ಲಿ ಕರ್ನಾಟಕ ಲೋಕಾಯುಕ್ತ ಕಾರ್ಯ ಸಾಧನೆ ಕುರಿತು ಪಿ.ವಿಶ್ವನಾಥ ಶೆಟ್ಟಿ ಬಿಚ್ಚಿಟ್ಟ ಮಾಹಿತಿ ಇಲ್ಲಿದೆ

    ಬೆಂಗಳೂರು: 2017ರ ಜ.28ರಿಂದ ಈವರೆಗೆ ಲೋಕಾಯುಕ್ತರ ಮತ್ತು ಉಪಲೋಕಾಯುಕ್ತರ ವ್ಯಾಪ್ತಿಯಲ್ಲಿ ಒಟ್ಟು 20,199 ದೂರು ಪ್ರಕರಣಗಳು ಮತ್ತು 2,677 ವಿಚಾರಣಾ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ ಹೇಳಿದರು.

    ಸೋಮವಾರ ಲೋಕಾಯುಕ್ತ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಪಿ.ವಿಶ್ವನಾಥ ಶೆಟ್ಟಿ, ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡಾಗ ಈ ಸಂಸ್ಥೆಯಲ್ಲಿ 7,640 ದೂರು ಪ್ರಕರಣಗಳು ತನಿಖೆಗೆ ಹಾಗೂ 3,242 ವಿಚಾರಣಾ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದವು. ಅದರಲ್ಲಿ ಕೆಲವೊಂದು ಪ್ರಕರಣಗಳು ಸುಮಾರು 15 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಇದ್ದ ದೂರು ಹಾಗೂ ವಿಚಾರಣಾ ಪ್ರಕರಣಗಳಾಗಿದ್ದುದರಿಂದ ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿ, ಈ ಸಂಸ್ಥೆಯಲ್ಲಿರುವ ವಿಚಾರಣಾಧಿಕಾರಿಗಳ ಸಂಖ್ಯೆ ಹೆಚ್ಚಿಸಲು ತಕ್ಷಣ ಕ್ರಮ ಕೈಗೊಂಡಿದ್ದೇನೆ ಎಂದರು.

    ನಾನು ಅಧಿಕಾರ ವಹಿಸಿಕೊಂಡಾಗ ಇದ್ದ 11 ಅಪರ ನಿಬಂಧಕರ ಹುದ್ದೆಗಳನ್ನು 20ಕ್ಕೆ ಏರಿಸುವ ಮೂಲಕ, 9 ಹೆಚ್ಚುವರಿ ಅಪರ ನಿಬಂಧಕರ ಹುದ್ದೆ ಸೃಜಿಸಲು ಕ್ರಮ ತೆಗೆದುಕೊಂಡಿದ್ದೇ‌ನೆ. ಅಪರ ನಿಬಂಧಕರ ಹುದ್ದೆಗಳ ಜತೆಗೆ 9 ಹೆಚ್ಚುವರಿ ಮಂಡನಾಧಿಕಾರಿಗಳ ಹುದ್ದೆ ಹಾಗೂ 27 ಸಹಾಯಕ ಸಿಬ್ಬಂದಿ ಹುದ್ದೆ ಸೃಜಿಸಲಾಯಿತು. ಈ ಸಂಸ್ಥೆಯ ಕಾನೂನು ಕೋಶಕ್ಕೆ ಸಹಕರಿಸಲು 3 ಸಂಶೋಧನಾ ಸಹಾಯಕರ ಹುದ್ದೆಗಳನ್ನು ಸೃಜಿಸಿ, ನೇಮಕಾತಿ ಮಾಡಲಾಯಿತು. ಇದರಿಂದಾಗಿ 2017ರ ಜ.28ರಿಂದ ಈವರೆಗೆ ಲೋಕಾಯುಕ್ತರ ಮತ್ತು ಉಪ ಲೋಕಾಯುಕ್ತರ ವ್ಯಾಪ್ತಿಯಲ್ಲಿ ಒಟ್ಟು 20,199 ದೂರು ಪ್ರಕರಣಗಳು ಮತ್ತು 2,677 ವಿಚಾರಣಾ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗಿದೆ. ಈ ಅವಧಿಯಲ್ಲಿ 2,122 ಪ್ರಕರಣಗಳಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಕಲಂ 143) ಅನ್ವಯ ಹಾಗೂ 87 ಪ್ರಕರಣಗಳಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಕಲಂ 12) ರನ್ವಯ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ವಿಶ್ವನಾಥ ಶೆಟ್ಟಿ ವಿವರಿಸಿದರು.

    ಪ್ರಸ್ತುತ ಈ ಸಂಸ್ಥೆಯಲ್ಲಿ ಒಟ್ಟು 8,036 ದೂರು ಪ್ರಕರಣಗಳು ಹಾಗೂ 2,43 ವಿಚಾರಣಾ ಪ್ರಕರಣಗಳು ಬಾಕಿ ಇವೆ. ಕಳೆದ 5 ವರ್ಷಗಳ ಅವಧಿಯಲ್ಲಿ 20,549 ದೂರು ಪ್ರಕರಣಗಳು ಹಾಗೂ 2031 ವಿಚಾರಣಾ ಪ್ರಕರಣಗಳು ದಾಖಲಾಗಿರುತ್ತವೆ. ಇದಲ್ಲದೇ ಕಳೆದ 5 ವರ್ಷಗಳಲ್ಲಿ 13,000 ಮಿಸಲೇನಿಯಸ್ ದೂರು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಸುಮಾರು 12 ಸಾವಿರ ಮಿಸೆಲೇನಿಯಸ್ ದೂರು ಪ್ರಕರಣಗಳು ಇತ್ಯರ್ಥವಾಗಿವೆ ಎಂದು ವಿವರಿಸಿದರು.

    ಸಿದ್ಧಗಂಗಾ ಮಠದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ: ಭಯದ ವಾತಾವರಣ ಸೃಷ್ಟಿ

    10 ರೂ. ಕೊಡೋ ಯೋಗ್ಯತೆ ಇಲ್ಲ, ಕಾರ್ ತಗೋತೀಯಾ? ಎಂದ ಶೋ ರೂಂ ಸಿಬ್ಬಂದಿಗೆ 1 ತಾಸಲ್ಲೇ ಶಾಕ್​ ಕೊಟ್ಟ ಯುವರೈತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts